ETV Bharat / bharat

ಮುಂಬೈನಲ್ಲಿ 100 ರೂ.ಗೆ ತಲುಪಿದ ಪೆಟ್ರೋಲ್ ದರ: ಬೆಂಗಳೂರಿನ ತೈಲ ಬೆಲೆ ಗೊತ್ತೇ? - Fuel price in Bengaluru

ದೇಶದಾದ್ಯಂತ ಪೆಟ್ರೋಲ್ ಬೆಲೆಯಲ್ಲಿ 23 ಪೈಸೆ ಮತ್ತು ಡೀಸೆಲ್ ಬೆಲೆಯಲ್ಲಿ 25 ಪೈಸೆ ಏರಿಕೆ ಮಾಡಲಾಗಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ನೂರರ ಗಡಿ ತಲುಪಿದೆ.

Fule prie hike In several City's
ಏರಿಕೆಯಾದ ಇಂಧನ ದರ
author img

By

Published : May 26, 2021, 10:16 AM IST

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದು ಮುಂಬೈ ಮಹಾನಗರದಲ್ಲಿ ಪ್ರತಿ ಲೀಟರ್ ಬೆಲೆ 100 ರೂಪಾಯಿ ಸಮೀಪಕ್ಕೆ ಬಂದು ನಿಂತಿದೆ.

ಮಂಗಳವಾರ ದೇಶದಾದ್ಯಂತ ಪೆಟ್ರೋಲ್ ಬೆಲೆಯಲ್ಲಿ 23 ಪೈಸೆ ಮತ್ತು ಡೀಸೆಲ್ ಬೆಲೆಯಲ್ಲಿ 25 ಪೈಸೆ ಏರಿಕೆ ಮಾಡಲಾಗಿದೆ. ದರ ಏರಿಕೆ ಬಳಿಕ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್ ಬೆಲೆ 93.44 ಆಗಿದ್ದು, ಡೀಸೆಲ್ ಬೆಲೆ ಪ್ರತಿ ಲೀಟರ್​ಗೆ 84.32 ಆಗಿದೆ.

ಬೆಂಗಳೂರಿನಲ್ಲಿ ಹೀಗಿದೆ ದರ

ಬೆಂಗಳೂರು ನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 96.55 ಮತ್ತು ಡೀಸೆಲ್ ಬೆಲೆ 89.39 ಆಗಿದೆ. ಮೇ 24 ರಂದು ಪೆಟ್ರೋಲ್ ದರ 96.31 ಮತ್ತು ಡೀಸೆಲ್ ದರ 89.12 ಇತ್ತು.

ಮುಂಬೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್ ದರ 100 ರ ಗಡಿ ದಾಟಲು ಕೇವಲ 30 ಪೈಸೆ ಕಡಿಮೆಯಿದ್ದು, 1 ಲೀಟರ್ ಪೆಟ್ರೋಲ್ ದರ 99.71 ಮತ್ತು ಡೀಸೆಲ್ ದರ 91.57 ಇದೆ. ಇನ್ನು, ಕೊಲ್ಕತ್ತಾ ನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 93.49 ಮತ್ತು ಡೀಸೆಲ್ ಬೆಲೆ 87.16 ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.