ETV Bharat / bharat

ಆಟೋ ಚಾಲಕನಿಂದ ಶಾಸಕಾಂಗ ಸಭೆ ನಾಯಕನಾಗೋವರೆಗೂ ಏಕನಾಥ್ ಪಯಣ.. ಯಾರೀ ಶಿಂಧೆ!

ಮೊದಲು ಆಟೋ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಏಕನಾಥ್​ ಶಿಂಧೆ ಈಗ ಶಾಸಕಾಂಗ ಸಭೆ ನಾಯಕರಾಗಿ ಹೊರ ಹೊಮ್ಮಿ ಈಗ ಶಿವಸೇನೆಯ ಬಂಡಾಯ ನಾಯಕರಾಗಿದ್ದಾರೆ. ಅವರ ರಾಜಕೀಯ ಪಯಣದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ...

from rickshaw driver to group leader political journey of Eknath Shinde  political journey of Eknath Shinde  Eknath Shinde news  ಆಟೋ ಚಾಲಕನಿಂದ ಶಾಸಕಾಂಗ ಸಭೆ ನಾಯಕದವರೆಗೆ ಏಕನಾಥ್ ಪಯಣ  ಏಕನಾಥ್​ ಶಿಂಧೆ ರಾಜಕೀಯ ಪ್ರಯಾಣ  ಏಕನಾಥ್​ ಶಿಂಧೆ ಸುದ್ದಿ
ಆಟೋ ಚಾಲಕನಿಂದ ಶಾಸಕಾಂಗ ಸಭೆ ನಾಯಕದವರೆಗೆ ಏಕನಾಥ್ ಪಯಣ
author img

By

Published : Jun 25, 2022, 10:39 AM IST

ಮುಂಬೈ (ಮಹಾರಾಷ್ಟ್ರ): 2019ರಲ್ಲಿ ಅಧಿಕಾರಕ್ಕೆ ಏರಿಕದ ಶಿವಸೇನೆಯ ಶಾಸಕಾಂಗ ಗುಂಪಿನ ನಾಯಕನ ಸ್ಥಾನವು ಥಾಣೆ ಜಿಲ್ಲಾ ಉಸ್ತುವಾರಿ ಸಚಿವ ಏಕನಾಥ್ ಶಿಂಧೆಯವರ ಪಾಲಾಗಿತ್ತು. ಇದಾದ ನಂತರ ಪಕ್ಷದಲ್ಲಿ ಏಕನಾಥ್ ಶಿಂಧೆ ಬಲ ಹೆಚ್ಚುತ್ತಲೇ ಸಾಗಿದೆ. ಉದ್ದವ್​ ಠಾಕ್ರೆ ಅವರ ವಿರುದ್ಧ ಸಿಡಿದೆದ್ದು ಮುಕ್ಕಾಲು ಶಿವಸೇನೆ ಶಾಸಕರ ಬೆಂಬಲ ಪಡೆದಿರುವ ಶಿಂಧೆ ಈಗ ದೇಶದ ಗಮನ ಸೆಳೆದಿದ್ದಾರೆ. ಅಂದ ಹಾಗೆ ಇವರ ಬೆಳವಣಿಗೆಯೇ ರೋಚಕ. ಆಟೋ ಚಾಲಕರಾಗಿದ್ದ ಇವರು ಈಗ ಶಿವಸೇನಾದ ದೊಡ್ಡ ನಾಯಕ.

ಆನಂದ್ ದಿಘೆ ಅವರ ಆಕಸ್ಮಿಕ ಮರಣದ ನಂತರ ಥಾಣೆ ಜಿಲ್ಲೆಯಲ್ಲಿ ಶಿವಸೇನೆ ಅಂತ್ಯಗೊಳ್ಳುವ ಚಿತ್ರಣವಿತ್ತು. ಶಿವಸೇನೆಯ ಜಿಲ್ಲಾಧ್ಯಕ್ಷರಾಗಿ ಏಕನಾಥ್ ಶಿಂಧೆ ಆಯ್ಕೆಯಾದರು. ಅವರು ಒಗ್ಗಟ್ಟಿನಿಂದ ಶಿವಸೇನೆಯನ್ನು ಬಲಪಡಿಸಿದರು. ಇದರಿಂದಾಗಿ 2017ರಲ್ಲಿ ನಡೆದ ಮುನ್ಸಿಪಲ್ ಚುನಾವಣೆಯಲ್ಲಿ ಶಿವಸೇನೆ ಪ್ರಥಮ ಬಾರಿಗೆ ಅಧಿಕಾರಕ್ಕೆ ಬಂದಿತ್ತು.

ಆ ಒಂದು ಗೆಲುವು ಹಲವು ಕಾರ್ಪೋರೇಷನ್​ಗಳ ಜಯಕ್ಕೆ ಕಾರಣವಾಯ್ತು: ಶಿಂಧೆ ನೇತೃತ್ವದಲ್ಲಿ ಕಲ್ಯಾಣ್-ಡೊಂಬಿವಲಿ ಮುನ್ಸಿಪಲ್ ಕಾರ್ಪೊರೇಷನ್, ಉಲ್ಲಾಸನಗರ ಮುನ್ಸಿಪಲ್ ಕಾರ್ಪೊರೇಷನ್, ಭಿವಾಂಡಿ ಮುನ್ಸಿಪಲ್ ಕಾರ್ಪೊರೇಷನ್, ಅಂಬರನಾಥ್ ಮುನ್ಸಿಪಲ್ ಕಾರ್ಪೊರೇಷನ್‌ಗಳಲ್ಲಿ ಮತ್ತು ಬದ್ಲಾಪುರ್ ಮುನ್ಸಿಪಲ್ ಕೌನ್ಸಿಲ್​ನಲ್ಲಿ ಶಿವಸೇನೆ ಅಧಿಕಾರ ಹಿಡಿಯಲು ನೆರವಾಯಿತು. ಶಿವಸೇನೆ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಮತ್ತು ಸೇನಾ ಥಾಣೆ ಜಿಲ್ಲಾ ಮುಖ್ಯಸ್ಥ ಆನಂದ್ ದಿಘೆ ಅವರಿಂದ ಪ್ರಭಾವಿತರಾದ ಅವರು 1980 ರ ದಶಕದಲ್ಲಿ ಶಿವಸೇನೆಯ ಮೂಲಕ ರಾಜಕೀಯ ಪ್ರವೇಶಿಸಿದರು.

ಓದಿ: ಸರ್ಕಾರ ಕುಸಿಯುವ ಭೀತಿ: 160 ಪಸ್ತಾವನೆಗಳಿಗೆ ಮಹಾ ಸರ್ಕಾರ ಅನುಮೋದನೆ... ಆರೋಪ - ಪ್ರತ್ಯಾರೋಪ

ಆರಂಭದ ದಿನಗಳಲ್ಲಿ ಏಕನಾಥ್ ಶಿಂಧೆ ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದರು. 1984 ರಲ್ಲಿ, ಅವರು ಕಿಸಾನಗರ್ ಶಾಖೆಯ ಮುಖ್ಯಸ್ಥರಾಗಿ ನೇಮಕಗೊಂಡರು. ಗಡಿ ಆಂದೋಲನದ ಸಂದರ್ಭದಲ್ಲಿ ಶಿಂಧೆ ಜೈಲು ಪಾಲಾದರು. 1997 ರಲ್ಲಿ, ಅವರು ಮೊದಲ ಬಾರಿಗೆ ಥಾಣೆ ಮುನ್ಸಿಪಲ್ ಕಾರ್ಪೊರೇಟರ್ ಆಗಿ ಆಯ್ಕೆಯಾದರು. ಇದಾದ ಬಳಿಕ 2001 ರಲ್ಲಿ ಸಭಾನಾಯಕರಾಗಿ ಆಯ್ಕೆಯಾದರು. ಸತತ ಮೂರು ವರ್ಷಗಳ ಕಾಲ ಅಧಿಕಾರ ನಡೆಸಿದರು.

ಮೊದಲ ಬಾರಿಗೆ ಶಾಸಕ: 2004 ರಲ್ಲಿ ಅವರು ಅಂದಿನ ಥಾಣೆ ವಿಧಾನಸಭಾ ಕ್ಷೇತ್ರದಿಂದ ಮೊದಲ ಭಾರಿಗೆ ಶಾಸಕರಾದರು. 2005 ರಲ್ಲಿ, ಶಿವಸೇನೆಯನ್ನು ಠಾಣೆಯ ಜಿಲ್ಲಾ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. 2009ರಲ್ಲಿ ಕ್ಷೇತ್ರಗಳ ಪುನರ್‌ವಿಂಗಡಣೆ ಬಳಿಕ ಕೊಪಾರಿ - ಪಂಚಖಾಡಿ ಕ್ಷೇತ್ರದಿಂದ ಮತ್ತೆ ಶಾಸಕರಾಗಿ ಆರಿಸಿ ಬಂದರು. 2014ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಆರಿಸಿ ಬರುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದರು. ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದರು.

ಡಿಸೆಂಬರ್ 2014 ರಲ್ಲಿ ಅವರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. MSRDC ಯ ಸಚಿವರಾಗಿ ಕಾರ್ಯ ನಿರ್ವಹಿಸಿದರು. 2019ರ ಜನವರಿಯಲ್ಲಿ ಆರೋಗ್ಯ ಸಚಿವ ಹುದ್ದೆ ಅವರ ಕೊರಳಿಗೆ ಬಿದ್ದಿತ್ತು. ಈಗ ತಮ್ಮ ಪಕ್ಷದ ವಿರುದ್ಧ ಬಂಡಾಯ ಎದ್ದಿರುವ ಶಿಂಧೆ ಶಾಸಕಾಂಗ ಸಭೆಯ ನಾಯಕರಾಗಿ ಹೊರ ಹೊಮ್ಮಿದ್ದಾರೆ.

ಸದಾ ಒಟ್ಟಿಗೆ ಇರುತ್ತೇವೆ: ನಾವು ನಿನ್ನೆ ಒಟ್ಟಿಗೆ ಇದ್ದೆವು, ಇಂದು ನಾವು ಒಟ್ಟಿಗೇ ಇದ್ದೇವೆ ಮತ್ತು ಭವಿಷ್ಯದಲ್ಲಿ ನಾವು ಒಟ್ಟಿಗೆ ಇರುತ್ತೇವೆ’ ಎಂದು ಏಕನಾಥ್ ಶಿಂಧೆ ಹಳೆಯ ಸ್ನೇಹಿತರು ಹೇಳುತ್ತಿದ್ದಾರೆ. 1990ರಲ್ಲಿ ಏಕನಾಥ್ ಶಿಂಧೆಗೆ ಕಠಿಣ ಸಮಯವಾಗಿತ್ತು. ಈ ಸಮಯದಲ್ಲಿ ಅವರು ತಮ್ಮ ಕುಟುಂಬವನ್ನು ಪೋಷಿಸಲು ಕಷ್ಟಪಡಬೇಕಾಯಿತು.

ಸಾರಿಗೆ ವ್ಯವಹಾರದಲ್ಲಿ ನಿತ್ಯ ಸಾವಿರಾರು ಜನರೊಂದಿಗೆ ಸಂಪರ್ಕ ಬೆಳಸುತ್ತಿದ್ದರು. ಮಹಾರಾಷ್ಟ್ರ ರಾಜಕಾರಣದಲ್ಲಿ ಇವತ್ತಿಗೂ ಇಷ್ಟು ದೊಡ್ಡ ನಾಯಕತ್ವ ಹೊಂದಿದ್ದರೂ ವ್ಯಾಪಾರಸ್ಥರಿಗೆ ಯಾರಾದ್ರೂ ತೊಂದ್ರೆ ಕೊಟ್ಟಿರುವ ಅವರಿಗೆ ಗೊತ್ತಾದ್ರೆ ಎಂದಿನಂತೆ ಏಕನಾಥ್ ಶಿಂಧೆ ಅವರ ನೆರವಿಗೆ ಬರುತ್ತಾರೆ. ನಾವು ಅವರ ಜೊತೆ ಸದಾ ಇರುತ್ತೇವೆ ಎಂದು ಶಿಂಧೆ ಅವರ ಹಳೆಯ ಗೆಳೆಯರ ಬಳಗ ಹೆಮ್ಮೆಯಿಂದ ಹೇಳಿ ಕೊಳ್ಳುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.