ವಾರಾಣಸಿ: ಜ್ಞಾನವಾಪಿ ಶೃಂಗಾರ ಗೌರಿ ವಿವಾದದ ನಡುವೆಯೇ ಎರಡನೇ ಶುಕ್ರವಾರ ಶಾಂತಿಯುತವಾಗಿ ನಮಾಜ್ ಮಾಡಲಾಯಿತು. ಮಸೀದಿ ಆವರಣದಲ್ಲಿ ಶಿವಲಿಂಗ ದಂತಹ ರಚನೆ ಕಂಡು ಬಂದ ಬಳಿಕ ವಾರಾಣಸಿ ಸಿವಿಲ್ ನ್ಯಾಯಾಲಯವು ಮಸೀದಿ ಆವರಣದಲ್ಲಿರುವ ವುಜುಖಾನಾ ಮತ್ತು ಇಸ್ತಿಂಜಖಾನಾ (ಶೌಚಾಲಯ) ಗಳಿಗೆ ಬೀಗ ಹಾಕುವಂತೆ ಆದೇಶ ನೀಡಿತ್ತು. ಆದರೆ ಆಡಳಿತ ಮಂಡಳಿ ಆವರಣದೊಳಗೆ ವುಜುಗಾಗಿ ಪರ್ಯಾಯ ಸೌಲಭ್ಯದ ವ್ಯವಸ್ಥೆ ಮಾಡಿತ್ತು.
ಪ್ರಕರಣದ ಗಂಭೀರತೆ ಅರಿತ ಭದ್ರತಾ ಸಿಬ್ಬಂದಿ ನಮಾಜ್ಗಾಗಿ ಬಂದವರನ್ನು ಮತ್ತು ಮಾಧ್ಯಮದವರನ್ನು ಗೇಟ್ ಸಂಖ್ಯೆ 4 ರ ಮುಂದೆ ನಿಲ್ಲಿಸಲಾಯಿತು. ಬಳಿಕ ನಮಾಜ್ಗಾಗಿ ಸರತಿ ಸಾಲಿನಲ್ಲಿ ಒಬ್ಬೊಬ್ಬರನ್ನು ಒಳಗೆ ಕಳುಹಿಸಲಾಯಿತು. ಇದಕ್ಕೂ ಮೊದಲು, ಅಂಜುಮನ್ ಇಂತಜಾಮಿಯಾ ಮಸಾಜಿದ್ ಸಮಿತಿಯು ಮುಸ್ಲಿಮರು ಜ್ಞಾನವಾಪಿ ಆವರಣಕ್ಕೆ ಭೇಟಿ ನೀಡುವ ಬದಲು ತಮ್ಮ ಮನೆಗಳಿಗೆ ಸಮೀಪ ಇರುವ ಮಸೀದಿಗಳಲ್ಲಿ ಶುಕ್ರವಾರ ನಮಾಜ್ ಮಾಡುವಂತೆ ಒತ್ತಾಯಿಸಿತ್ತು.
ಇದನ್ನೂ ಓದಿ: ಸ್ಕೂಟರ್ನಲ್ಲಿ ಡ್ರಗ್ಸ್ ತರಿಸಿಕೊಂಡಿದ್ದ ಉದ್ಯಮಿ ಪುತ್ರನಿಗೆ ನ್ಯಾಯಾಂಗ ಬಂಧನ
ಮತ್ತೊಂದೆಡೆ, ವಿಶ್ವ ವೈದಿಕ್ ಸನಾತನ ಸಂಘದ ಮುಖ್ಯಸ್ಥ ಜಿತೇಂದ್ರ ಸಿಂಗ್ ಬಿಸೆನ್ ಅವರು ಮಸೀದಿ ಆಡಳಿತ ಸಮಿತಿ ವಿರುದ್ಧ 1991 ರ ವಿಶೇಷ ಆರಾಧನಾ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ದೂರನ್ನು ಪೋಸ್ಟ್ ಮಾಡಿದ್ದಾರೆ. ಚೌಕ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಬಿಸೆನ್ ಈ ರೀತಿ ಆರೋಪಿಸಿದ್ದಾರೆ. ಜ್ಞಾನವಾಪಿ ನಿರ್ವಹಣಾ ಸಮಿತಿಯು 1991 ರ ವಿಶೇಷ ಆರಾಧನಾ ಕಾಯಿದೆ ಮತ್ತು 1991ರ ಪೂಜಾ ಸ್ಥಳದ ಕಾಯ್ದೆಯ ಸೆಕ್ಷನ್ 3/6 ಅನ್ನು ಉಲ್ಲಂಘಿಸಿದೆ.
ಇದೇ ವೇಳೆ, ಚೌಕ್ ಇನ್ಸ್‌ಪೆಕ್ಟರ್ ಪ್ರತಿಕ್ರಿಯಿಸಿ, ನನಗೆ ಇದುವರೆಗೆ ಅಂತಹ ಯಾವುದೇ ಪತ್ರ ಬಂದಿಲ್ಲ. ಪತ್ರ ಬಂದ ನಂತರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.