ETV Bharat / bharat

ಕೊರೊನಾದಿಂದ ಸಾವಿನ ಸಂಖ್ಯೆ ಹೆಚ್ಚಳ: ಸೂರತ್​ನ ಶವಾಗಾರದ ಕುಲುಮೆಗಳಲ್ಲಿ ಬಿರುಕು - ಚಿಮಣಿಗಳು ಕರಗುತ್ತಿವೆ

ಕೊರೊನಾ ಹಿನ್ನೆಲೆಯಲ್ಲಿ ಸಾವನ್ನಪ್ಪಿರುವವರ ಸಂಖ್ಯೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಶವಾಗಾರಗಳಲ್ಲಿನ ಕುಲುಮೆಗಳನ್ನು ಅತಿಯಾಗಿ ಬಳಕೆ ಮಾಡುತ್ತಿರುವುದರಿಂದ ಹೆಚ್ಚು ಶಾಖೋತ್ಪತ್ತಿಯಾಗುತ್ತಿದ್ದು, ಚಿಮಣಿಗಳು ಕರಗುತ್ತಿವೆ ಮತ್ತು ಬಿರುಕು ಬಿಡುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೂರತ್​ನ ಶವಾಗಾರ
ಸೂರತ್​ನ ಶವಾಗಾರ
author img

By

Published : Apr 14, 2021, 10:51 AM IST

ಸೂರತ್ (ಗುಜರಾತ್): ಕೋವಿಡ್​ -19 ಪರಿಣಾಮ ಸಾವನ್ನಪ್ಪಿರುವವರ ಸಂಖ್ಯೆ ಏರಿಕೆಯಾಗಿದೆ. ಹೀಗಾಗಿ ಶವ ಸಂಸ್ಕಾರ ರಭಸದಿಂದ ಸಾಗುತ್ತಿದ್ದು ಹೆಚ್ಚಿನ ಶಾಖ ವರ್ಗಾವಣೆಯಾಗುತ್ತಿರುವುದರಿಂದ ಸೂರತ್‌ನ ಕೆಲ ಶವಾಗಾರಗಳಲ್ಲಿನ ಕುಲುಮೆಗಳು ಬಿರುಕು ಬಿಡಲು ಪ್ರಾರಂಭಿಸಿವೆ.

ಹೆಚ್ಚಿನ ಶಾಖ ವರ್ಗಾವಣೆಯಾಗುತ್ತಿರುವುದರಿಂದ ಬಿರುಕು ಬಿಡಲು ಪ್ರಾರಂಭಿಸಿದ ಕುಲುಮೆಗಳು

ಕಳೆದೊಂದು ವಾರದಿಂದ ಗುಜರಾತ್‌ನ ಕುರುಕ್ಷೇತ್ರ ಸ್ಮಶಾನ ಮತ್ತು ಅಶ್ವಿನಿ ಕುಮಾರ್ ಶವಾಗಾರದಲ್ಲಿ ಸುಮಾರು 16 ಅನಿಲ ಆಧಾರಿತ ಕುಲುಮೆಗಳು ಶವಸಂಸ್ಕಾರಕ್ಕಾಗಿ ದಿನದ 24 ಗಂಟೆಗಳ ಕಾಲವೂ ಕಾರ್ಯ ನಿರ್ವಹಿಸುತ್ತಿವೆ. ಕುಲುಮೆಗಳ ಮೇಲೆ ಲೋಹದ ಚೌಕಟ್ಟುಗಳನ್ನು ಇಡಲಾಗುತ್ತದೆ. ಅತಿಯಾದ ಬಳಕೆಯಿಂದಾಗಿ ಹೆಚ್ಚು ಶಾಖೋತ್ಪತ್ತಿಯಾಗುತ್ತಿದ್ದು, ಚಿಮಣಿಗಳು ಕರಗುತ್ತಿವೆ.

ಈ ಕುರಿತು ಮಾಹಿತಿ ನೀಡಿರುವ ಕುರುಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷ ಕಮಲೇಶ್ ಸೈಲರ್​, ಕಳೆದ ಒಂದೆರಡು ದಿನಗಳಲ್ಲಿ ಸೂರತ್ ನಗರದಲ್ಲಿ ಪ್ರತಿದಿನ ಕೋವಿಡ್​ ಸೋಂಕಿನಿಂದಾಗಿ 18 ರಿಂದ 19 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ವೈರಸ್ ಕಂಡುಬರುವುದಕ್ಕೂ ಮೊದಲು ಪ್ರತಿದಿನ ಸುಮಾರು 20 ಶವಗಳನ್ನು ಕುರುಕ್ಷೇತ್ರ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತಿತ್ತು. ಆದರೆ ಈಗ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಪ್ರಸ್ತುತ ನಾವು ದಿನಕ್ಕೆ ಸುಮಾರು 100 ದೇಹಗಳನ್ನು ಅಂತ್ಯಕ್ರಿಯೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.