ಜಾಜರ್ ಕೋಟ್ಲಿ: (ಜಮ್ಮು): ಜಮ್ಮುವಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದೆ. ಇಂದು (ಶುಕ್ರವಾರ) ಶ್ರೀನಗರದಿಂದ ರಾಜಸ್ಥಾನಕ್ಕೆ ಹೋಗುತ್ತಿದ್ದ ಟ್ರಕ್ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾಜರ್ ಕೋಟ್ಲಿ ಪ್ರದೇಶದಲ್ಲಿ ಸಂಚರಿಸುತ್ತಿದ್ದ ವೇಳೆಯಲ್ಲಿ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದ್ದು, ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಭೀಕರ ಅಪಘಾತ ಸಂಭವಿಸಿರುವುದರಿಂದ ಟ್ರಕ್ ಸಂಪೂರ್ಣವಾಗಿ ನಜ್ಜು - ಗುಜ್ಜಾಗಿದೆ.
-
#WATCH | Jammu, J&K: Four people died after a truck going to Rajasthan from Srinagar plunged into a gorge at Jammu-Srinagar National Highway in the Jhajjar Kotli area last night
— ANI (@ANI) October 20, 2023 " class="align-text-top noRightClick twitterSection" data="
(Video Source: J&K Police) pic.twitter.com/8h26WcwYjD
">#WATCH | Jammu, J&K: Four people died after a truck going to Rajasthan from Srinagar plunged into a gorge at Jammu-Srinagar National Highway in the Jhajjar Kotli area last night
— ANI (@ANI) October 20, 2023
(Video Source: J&K Police) pic.twitter.com/8h26WcwYjD#WATCH | Jammu, J&K: Four people died after a truck going to Rajasthan from Srinagar plunged into a gorge at Jammu-Srinagar National Highway in the Jhajjar Kotli area last night
— ANI (@ANI) October 20, 2023
(Video Source: J&K Police) pic.twitter.com/8h26WcwYjD
ಹೆಚ್ಚಿನ ತನಿಖೆ ಕೈಗೊಂಡ ಪೊಲೀಸರು: ಪೊಲೀಸ್ ಮಾಹಿತಿ ಪ್ರಕಾರ, ಜಮ್ಮುನ ರಾಷ್ಟ್ರೀಯ ಹೆದ್ದಾರಿ (NH44)ನಲ್ಲಿ ಶುಕ್ರವಾರ ಟ್ರಕ್ ಚಾಲಕನ ನಿಯಂತ್ರಣ ತಪ್ಪಿದ್ದ ಪರಿಣಾಮ ಟ್ರಕ್ ಸೇತುವೆಯ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ನಂತರ ಕಂದಕಕ್ಕೆ ಉರುಳಿ ಬಿದ್ದಿದೆ. ಟ್ರಕ್‌ನ ಚಾಲಕ ಮತ್ತು ನಿರ್ವಾಹಕರು ಸೇರಿದಂತೆ ಒಟ್ಟು ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿದ್ದು, ಮೃತದೇಹಗಳನ್ನು ಹೊರತೆಗೆದ ಪೊಲೀಸರು ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ನಂತರ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ. ಈ ಅಪಘಾತದ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಟ್ರಕ್ ಡಿಕ್ಕಿಯಾಗಿ ಕ್ರೂಸರ್ ಜಖಂ, ಏಳು ಜನ ಸಾವು: ಮತ್ತೊಂದೆಡೆ, ಟ್ರಕ್ ಹಾಗೂ ಕ್ರೂಸರ್ ಜೀಪ್ ನಡುವೆ ಭೀಕರ ಅಪಘಾತ ನಡೆದಿತ್ತು. ಈ ಅಪಘಾತದಲ್ಲಿ ಏಳು ಜನರು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಡುಂಗಾರಪುರ ಜಿಲ್ಲೆಯಲ್ಲಿ ಅಕ್ಟೋಬರ್ 15ರಂದು ಸಂಭವಿಸಿತ್ತು. ಹತ್ತು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಯಲ್ಲಿ ಕ್ರೂಸರ್ ಸಂಪೂರ್ಣ ಜಖಂಗೊಂಡಿತ್ತು.
ಬಿಚ್ಚಿವಾಡ ಪೊಲೀಸ್ ಠಾಣಾ ವ್ಯಾಪ್ತಿಯ ರತನ್ಪುರ ಗಡಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ಘಟನೆ ಜರುಗಿತ್ತು. ಟ್ರಕ್ ಡಿಕ್ಕಿ ಹೊಡೆದಿದ್ದ ರಭಸಕ್ಕೆ ಕ್ರೂಸರ್ ಪಲ್ಟಿ ಹೊಡೆದು ನಜ್ಜುಗುಜ್ಜಾಗಿ ಹೋಗಿತ್ತು. ಪರಿಣಾಮ ಎಲ್ಲ ಏಳು ಜನರು ಸ್ಥಳದಲ್ಲೇ ಸಾವಿಗೀಡಾಗಿದ್ದರು. ಜೊತೆಗೆ ಹತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಡುಂಗಾರಪುರಕ್ಕೆ ಆಸ್ಪತ್ರೆಗೆ ರವಾನಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದರು. ಜಿಲ್ಲಾಧಿಕಾರಿ ಲಕ್ಷ್ಮೀ ನಾರಾಯಣ ಮಂತ್ರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಂದನ್ ಕನ್ವರಿಯಾ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು, ಪರಿಶೀಲನೆ ನಡೆಸಿದ್ದರು. ಆಸ್ಪತ್ರೆಗೂ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದರು.
ಇದನ್ನೂ ಓದಿ: ರಾಮಲೀಲಾ ವೀಕ್ಷಿಸಲು ತೆರಳಿದ್ದ ಯುವಕನ ಗುಂಡಿಕ್ಕಿ ಹತ್ಯೆ