ದುರ್ಗಾಪುರ (ಪಶ್ಚಿಮ ಬಂಗಾಳ) : ಇಲ್ಲಿನ ಪಶ್ಚಿಮ ಬುರ್ದ್ವಾನ್ ಜಿಲ್ಲೆಯ ದುರ್ಗಾಪುರದ ಕೈಗಾರಿಕಾ ಟೌನ್‌ಶಿಪ್‌ನ ನಿವಾಸವೊಂದರಲ್ಲಿ ಭಾನುವಾರ ನಿಗೂಢ ಸ್ಥಿತಿಯಲ್ಲಿ ದಂಪತಿ ಮತ್ತು ಅವರ ಇಬ್ಬರು ಮಕ್ಕಳ ಶವಗಳು ಪತ್ತೆಯಾಗಿವೆ. ಈ ಶವಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.
ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ನೇಮಕಾತಿ ಹಗರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳೇ ನಮ್ಮ ಸಾವಿಗೆ ಕಾರಣ ಎಂದು ಮೃತರು ಬರೆದಿಟ್ಟಿದ್ದಾರೆ ಎನ್ನಲಾದ ಆತ್ಮಹತ್ಯೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಇದೊಂದು ಕೊಲೆ ಪ್ರಕರಣ. ಆಸ್ತಿ ವಿವಾದಕ್ಕಾಗಿ ಕುಟುಂಬವನ್ನು ಹತ್ಯೆ ಮಾಡಲಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಇದನ್ನೂ ಓದಿ : ರಾಜ್ಕೋಟ್ದಲ್ಲಿ ಕ್ರಿಕೆಟ್ ಆಡುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು
ಮೃತ ದಂಪತಿಯನ್ನು ಅಮಿತ್ ಕುಮಾರ್ ಮೊಂಡಲ್ (35) ಮತ್ತು ರೂಪಾ ಮೊಂಡಲ್ (31) ಎಂದು ಗುರುತಿಸಲಾಗಿದೆ. ನಿಮಿತ್ ಕುಮಾರ್ ಮೊಂಡಲ್ (6) ಮತ್ತು ಒಂದೂವರೆ ವರ್ಷದ ನಿಕಿತಾ ಮೊಂಡಲ್ ಸಾವಿಗೀಡಾದ ಮಕ್ಕಳು. ಅಮಿತ್ ಶವ ಕಟ್ಟಡದ ಸೀಲಿಂಗ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿದ್ದರೆ, ಪತ್ನಿ ಮತ್ತು ಮಕ್ಕಳ ಮೃತದೇಹಗಳು ನೆಲದ ಮೇಲೆ ಬಿದ್ದಿದ್ದವು.
ಇದನ್ನೂ ಓದಿ: ಪಿಎಂಒ ಅಧಿಕಾರಿ ಎಂದು ಹೇಳಿ ವಂಚನೆ ಪ್ರಕರಣ: ಪ್ರೋಟೋಕಾಲ್ಗೆ ಅನುಕೂಲ ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮ
ಮಾಹಿತಿ ಪಡೆದ ನಂತರ ಡಿಸಿಪಿ (ಪೂರ್ವ) ಕುಮಾರ್ ಗೌತಮ್ ತಮ್ಮ ತಂಡದೊಂದಿಗೆ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಅಮಿತ್ ಅವರ ಮೊಬೈಲ್‌ನಿಂದ ಆತ್ಮಹತ್ಯೆ ಸಂದೇಶ ಪತ್ತೆಯಾಗಿದೆ. ಅವರ ಸಾವಿಗೆ ಟಿಇಟಿ ನೇಮಕಾತಿ ಹಗರಣದಲ್ಲಿ ಭಾಗಿಯಾಗಿರುವ ಹಲವರು ಕಾರಣ ಎಂಬ ಉಲ್ಲೇಖ ಅದರಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ನಿಖರ ಕಾರಣ ತಿಳಿದುಬಂದಿಲ್ಲ.
ಇದನ್ನೂ ಓದಿ: ಪರಾರಿಯಾದ ಅಮೃತಪಾಲ್ ಸಿಂಗ್ ಪತ್ತೆಗೆ ಪೊಲೀಸರ ಶೋಧ ಕಾರ್ಯ: ನಾಳೆಯೂ ಇಂಟರ್ನೆಟ್ ಸ್ಥಗಿತ
ಅಮಿತ್ ತಾಯಿ ಮತ್ತು ತಾಯಿಯ ಮನೆಯ ಸಂಬಂಧಿಕರ ವಿರುದ್ಧ ದೂರು ದಾಖಲಿಸಲಾಗಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕುಟುಂಬವನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ರೂಪಾ ಅವರ ಸೋದರ ಸಂಬಂಧಿ ಸುದೀಪ್ತ ಘೋಷ್ ಆರೋಪಿಸಿದ್ದಾರೆ. "ನನ್ನ ಸೋದರ ಮಾವನ ಕುತ್ತಿಗೆಯ ಮೇಲಿನ ಗುರುತು ಇದು ಕೊಲೆಯೇ ಹೊರತು ಆತ್ಮಹತ್ಯೆಯಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಅವರ ಕೈಗಳನ್ನು ಕಟ್ಟಿ ಹಾಕಲಾಗಿದೆ ಮತ್ತು ಸಿಸಿಟಿವಿ ಕ್ಯಾಮರಾವನ್ನು ಪಾಲಿಥಿನ್‌ನಿಂದ ಮುಚ್ಚಲಾಗಿದೆ. ಅವರ ತಾಯಿ ಮತ್ತು ಇತರ ಸಂಬಂಧಿಕರು ಅವರನ್ನು ಕೊಲೆ ಮಾಡಿದ್ದಾರೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜಾಗಿಂಗ್ ವೇಳೆ ಹಿಂಬದಿಯಿಂದ ಗುದ್ದಿದ ಕಾರು: ಟೆಕ್ ಕಂಪನಿ ಮಹಿಳಾ ಸಿಇಒ ಸ್ಥಳದಲ್ಲೇ ಸಾವು