ಕುಪ್ವಾರ (ಜಮ್ಮು - ಕಾಶ್ಮೀರ): ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಸೇನೆ ಮತ್ತು ಪೊಲೀಸರ ಜಂಟಿ ತಂಡವು ಮಚ್ಚಲ್ ಪ್ರದೇಶದ ಗಡಿ ನಿಯಂತ್ರಣ ರೇಖೆ ಉದ್ದಕ್ಕೂ ಶೋಧ ಕಾರ್ಯಾಚರಣೆ ಕೈಗೊಂಡಿದೆ. ಈ ವೇಳೆ, ಭಾರತ ಗಡಿಯೊಳಗೆ ನುಸುಳಲು ಕಾಯುತ್ತಿದ್ದ ನಾಲ್ವರು ಉಗ್ರರನ್ನು ಸೇನೆ ಹೊಡೆದುರಳಿಸಿದೆ. ಹತರಾದ ಉಗ್ರರ ಗುರುತನ್ನು ಸೇನಾ ಮೂಲಗಳು ಇನ್ನೂ ಬಹಿರಂಗಪಡಿಸಿಲ್ಲ. ಗಡಿ ನಿಯಂತ್ರಣ ರೇಖೆಯ ಕಾಲಾ ಜಂಗಲ್ ಬಳಿ ಈ ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಸೇನೆ ಹೇಳಿಕೊಂಡಿದೆ.
ಕಾಶ್ಮೀರ ಪೊಲೀಸ್ ವಲಯವು ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಮಾಹಿತಿಯನ್ನು ನೀಡುತ್ತಾ, ಸೇನೆ, ಅರೆಸೇನಾ ಪಡೆಗಳು ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಕವರ್‌ನಲ್ಲಿ ಕುಪ್ವಾರ ಜಿಲ್ಲೆಯ ಮಚ್ಚಲ್ ಸೆಕ್ಟರ್‌ನ ಕಾಲಾ ಜಂಗಲ್‌ನಲ್ಲಿ ನಾಲ್ವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಈ ಉಗ್ರರು ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದರು ಎಂದು ಹೇಳಿದರು.
ಇದಕ್ಕೂ ಮೊದಲು, ಜೂನ್ 16 ರಂದು ಕುಪ್ವಾರ ಜಿಲ್ಲೆಯ ಜಮ್‌ಗುಂಡ್‌ನಲ್ಲಿ ಎಲ್‌ಒಸಿಯಾದ್ಯಂತ ನುಸುಳುವ ಪ್ರಯತ್ನದಲ್ಲಿ ಐವರು ವಿದೇಶಿ ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಭದ್ರತಾ ಪಡೆಗಳು ವಿಫಲಗೊಳಿಸಿದ ಈ ತಿಂಗಳಲ್ಲಿ ಇದು ಎರಡನೇ ಪ್ರಮುಖ ಒಳನುಸುಳುವಿಕೆ ಪ್ರಯತ್ನವಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. ಇನ್ನು ಈ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಸೇನೆ ತಿಳಿಸಿದೆ.
ಗಡಿ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಇದು ನಾಲ್ಕನೇ ಸೇನಾ ವಿರೋಧಿ ಕಾರ್ಯಾಚರಣೆ ಎಂಬುದು ಗಮನಿಸಬೇಕಾದ ಸಂಗತಿ. ಇದಕ್ಕೂ ಮುನ್ನ ಮಚ್ಚಲ್‌ನ ದೋಬಂದರ್ ಪ್ರದೇಶದಲ್ಲಿ ನುಸುಳಲು ಯತ್ನಿಸುತ್ತಿದ್ದ ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಇದರ ನಂತರ ಜೂನ್ 16 ರಂದು ಜಮಗುಂಡ್ ಪ್ರದೇಶಕ್ಕೆ ಗಡಿ ದಾಟಲು ಯತ್ನಿಸಿದ್ದ ಐವರು ಉಗ್ರರನ್ನು ಹೊಡೆದುರುಳಿಸಿರುವುದು ಗಮನಾರ್ಹ..
ಓದಿ: Encounter: ಕಣಿವೆ ನಾಡಿನಲ್ಲಿ ಐವರು ವಿದೇಶಿ ಉಗ್ರರನ್ನು ಹೊಡೆದುರುಳಿಸಿದ ಸೇನೆ!
ಇನ್ನು ಮಳೆ ಮತ್ತು ಕೆಟ್ಟ ಹವಾಮಾನದ ಲಾಭ ಪಡೆದು ಮೇ 30- 31 ರ ಮಧ್ಯರಾತ್ರಿ ಪೂಂಚ್ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆಯ ಬೇಲಿಯನ್ನು ಉಗ್ರರು ಅಕ್ರಮವಾಗಿ ದಾಟುತ್ತಿದ್ದರು. ಇದರ ಸುಳಿವು ಸಿಕ್ಕ ತಕ್ಷಣವೇ ಯೋಧರು ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆಗಿಳಿದಿತ್ತು. ಆಗ ಉಗ್ರರ ಮೇಲೆ ಗುಂಡಿನ ದಾಳಿ ನಡೆಸಿತ್ತು. ಕೀಚಕರು ಕೂಡ ಪ್ರತಿದಾಳಿ ನಡೆಸಿದರು. ಗುಂಡಿನ ಚಕಮಕಿಯಲ್ಲಿ ಭಯೋತ್ಪಾದಕರು ಗಾಯಗೊಂಡಿದ್ದರು. ನಂತರ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರೆದು, ಶೋಧ ಕಾರ್ಯಾಚರಣೆ ನಡೆಸಿದಾಗ ಮೂವರು ಸಿಕ್ಕಿಬಿದ್ದರು.
ಒಳನುಸುಳಲು ಯತ್ನಿಸಿದ ಸ್ಥಳದಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಐಇಡಿ ಮತ್ತು ಮಾದಕ ವಸ್ತು ಸೇರಿದಂತೆ ಕೆಲ ಶಸ್ತ್ರಾಸ್ತ್ರಗಳ ಸಮೇತ ಮೂವರು ಭಯೋತ್ಪಾದಕರನ್ನು ಬಂಧಿಸಲಾಗಿತ್ತು. ಆಗ ಉಗ್ರರ ಗುಂಡಿನ ದಾಳಿಯಲ್ಲಿ ಯೋಧ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಭಯೋತ್ಪಾದಕರ ಬಳಿ 10 ಕೆಜಿಯಷ್ಟು ಐಇಡಿ (ಸುಧಾರಿತ ಸ್ಫೋಟಕ ಸಾಧನ) ಸಿಕ್ಕಿದೆ ಎಂದು ಸೇನೆ ತಿಳಿಸಿತ್ತು.