ಲುಧಿಯಾನ : ಪಂಜಾಬ್ನಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಲುಧಿಯಾನದ ಹಂಬ್ರಾ ರಸ್ತೆಯ ಮಯೂರ್ ವಿಹಾರ್ ಪ್ರದೇಶದಲ್ಲಿ ಈ ಪ್ರಕರಣ ನಡೆದಿದೆ. ಕೊಲೆಯಾದವರನ್ನು ವ್ಯಾಪಾರಿ ಆಶಿಶ್ ಸುಂದಾ, ಅವರ ಪತ್ನಿ ಗರಿಮಾ ಸುಂದ, ತಾಯಿ ಸುನೀತಾ ಸುಂದಾ ಮತ್ತು 13 ವರ್ಷದ ಮಗ ಸಾಕೇತ್ ಎಂದು ಗುರುತಿಸಲಾಗಿದೆ.
ನಾಲ್ವರ ಭೀಕರ ಹತ್ಯೆ ಹಿನ್ನೆಲೆ ಈ ಪ್ರದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಹತ್ಯೆಗೆ ಬಳಸಲಾದ ಆಯುಧಗಳನ್ನು ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.