ಸತ್ನಾ(ಮಧ್ಯಪ್ರದೇಶ): ಕಾರು-ಟ್ರಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ದುರ್ಮರಣಕ್ಕೀಡಾಗಿರುವ ಪ್ರಕರಣ ಮಧ್ಯಪ್ರದೇಶದ ಸತ್ನಾದಲ್ಲಿ ನಡೆದಿದೆ.
ಅಪಘಾತದಲ್ಲಿ 40 ವರ್ಷದ ಸತ್ಯಂ ಉಪಾಧ್ಯಾಯ, ಪತ್ನಿ ಮನಿಕಾ ಹಾಗೂ 10 ವರ್ಷದ ಇಶಾನಿ ಹಾಗೂ 8 ವರ್ಷದ ಸ್ನೇಹ ದುರ್ಮರಣಕ್ಕೀಡಾಗಿದ್ದಾರೆ. ಮಧ್ಯಪ್ರದೇಶದ ಸತ್ನಾದ ಜಿತ್ ನಗರ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ.
ಸತ್ಯಂ ಉಪಾಧ್ಯಾಯ ತನ್ನ ಕುಟುಂಬದೊಂದಿಗೆ ಶಾಪಿಂಗ್ ಮುಗಿಸಿ, ಸತ್ನಾದಲ್ಲಿನ ತಮ್ಮ ನಿವಾಸಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿತು. ಟ್ರಕ್ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
-
सतना जिले में सतना-मैहर मार्ग पर सड़क हादसे की खबर पीड़ाजनक है। हादसे में मृतकों को श्रद्धांजलि अर्पित करता हूं। ईश्वर से प्रार्थना है कि दिवंगत आत्माओं को शांति प्रदान करें। पीड़ित परिवारों के प्रति मेरी संवेदनाएं हैं।
— Shivraj Singh Chouhan (@ChouhanShivraj) November 25, 2021 " class="align-text-top noRightClick twitterSection" data="
।। ॐ शांति ।।
">सतना जिले में सतना-मैहर मार्ग पर सड़क हादसे की खबर पीड़ाजनक है। हादसे में मृतकों को श्रद्धांजलि अर्पित करता हूं। ईश्वर से प्रार्थना है कि दिवंगत आत्माओं को शांति प्रदान करें। पीड़ित परिवारों के प्रति मेरी संवेदनाएं हैं।
— Shivraj Singh Chouhan (@ChouhanShivraj) November 25, 2021
।। ॐ शांति ।।सतना जिले में सतना-मैहर मार्ग पर सड़क हादसे की खबर पीड़ाजनक है। हादसे में मृतकों को श्रद्धांजलि अर्पित करता हूं। ईश्वर से प्रार्थना है कि दिवंगत आत्माओं को शांति प्रदान करें। पीड़ित परिवारों के प्रति मेरी संवेदनाएं हैं।
— Shivraj Singh Chouhan (@ChouhanShivraj) November 25, 2021
।। ॐ शांति ।।
ಇದನ್ನೂ ಓದಿ: 60 ಸಾವಿರ ರೂ. ನಾಣ್ಯಗಳ ಠೇವಣಿಗೆ ನಿರಾಕರಿಸಿದ ಬ್ಯಾಂಕ್.. ಮುಂದೆ ನಡೆದಿದ್ದೇನು?
ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಸತ್ನಾ ಜಿಲ್ಲೆಯಲ್ಲಿ ನಡೆದಿರುವ ರಸ್ತೆ ಅಪಘಾತ ಸುದ್ದಿ ಕೇಳಿ ತುಂಬಾ ಆಘಾತವಾಗಿದ್ದು, ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಸ್ಥರಿಗೆ ಭಗವಂತ ಈ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.