ETV Bharat / bharat

ಕಾರು ಲಾರಿ ಮಧ್ಯೆ ಭೀಕರ ಅಪಘಾತ.. ಪುರಿಯ ಜಗನ್ನಾಥ ದರ್ಶನಕ್ಕೆ ತೆರಳುತ್ತಿದ್ದ ನಾಲ್ವರು ಸಾವು - ಲಾರಿಯ ಹಿಂಭಾಗಕ್ಕೆ ಕಾರು ಡಿಕ್ಕಿ

ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಒಡಿಶಾದ ಪುರಿ ಜಗನ್ನಾಥ ಮಂದಿರಕ್ಕೆ ತೆರಳುತ್ತಿದ್ದಾಗ ವಾಹನ ಅಪಘಾತ ಸಂಭವಿಸಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Four killed as car rams into stationary truck  car rams into stationary truck in Odisha  car hit to truck in Odisha  ಆಂಧ್ರ ಪಾಸಿಂಗ್​ ವಾಹನಗಳ ಮಧ್ಯೆ ಭೀಕರ ಅಪಘಾತ  ಪುರಿಯ ಜಗನ್ನಾಥ ದರ್ಶನಕ್ಕೆ ತೆರಳುತ್ತಿದ್ದ ನಾಲ್ವರು ಸಾವು  ಪುರಿಗೆ ಹೋಗುತ್ತಿದ್ದ ವೇಳೆ ರಸ್ತೆ ಅಪಘಾತ  ಭೀಕರ ರಸ್ತೆ ಅಪಘಾತ  ಲಾರಿಯ ಹಿಂಭಾಗಕ್ಕೆ ಕಾರು ಡಿಕ್ಕಿ  ಜಗನ್ನಾಥ ದೇವರ ದರ್ಶನ
ಆಂಧ್ರ ಪಾಸಿಂಗ್​ ವಾಹನಗಳ ಮಧ್ಯೆ ಭೀಕರ ಅಪಘಾತ
author img

By

Published : Dec 1, 2022, 11:24 AM IST

ಖುರ್ದಾ(ಒಡಿಶಾ): ಪುರಿಗೆ ಬರುತ್ತಿದ್ದಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 4 ಮಂದಿ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ ಖುರ್ದಾ ರಾಷ್ಟ್ರೀಯ ಹೆದ್ದಾರಿ 16ರಲ್ಲಿ ಬದ್ಪೋಖಾರಿಯಾ ಬಳಿ ಈ ಭೀಕರ ರಸ್ತೆ ಅಪಘಾತ ನಡೆದಿದೆ.

ಲಾರಿಯ ಹಿಂಭಾಗಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ 4 ಮಂದಿ ಸಾವನ್ನಪ್ಪಿದ್ದಾರೆ. ಮೃತರು ಪುರಿಯ ಜಗನ್ನಾಥ ದೇವರ ದರ್ಶನಕ್ಕೆಂದು ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಪುರಿಗೆ ಬರುತ್ತಿದ್ದರು. ಮೃತರಲ್ಲಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸೇರಿದ್ದು, ಎಲ್ಲರೂ 25 ರಿಂದ 35 ವಯಸ್ಸಿನೊಳಗಿನವರಾಗಿದ್ದಾರೆ ಎಂದು ತಿಳಿದುಬಂದಿದೆ.

ಮಾಹಿತಿ ಪ್ರಕಾರ ಕಾರು ಖುರ್ದಾ ಕಡೆಗೆ ಬರುತ್ತಿದ್ದಾಗ ಬಡಪೋಖಾರಿಯಾ ಬಳಿ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ನಿಂತ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ. ಈ ಎರಡೂ ವಾಹನಗಳು ಆಂಧ್ರಪ್ರದೇಶದ ಪಾಸಿಂಗ್​ ಹೊಂದಿವೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿ ತನಿಖೆ ಆರಂಭಿಸಿದ್ದಾರೆ.

ಓದಿ: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಎನ್​ಐಎಗೆ ಹಸ್ತಾಂತರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.