ಖಾಂಡ್ವಾ (ಮಧ್ಯಪ್ರದೇಶ): ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಜರುಗಿದೆ. ಇಲ್ಲಿನ ಓಂಕಾರೇಶ್ವರ ಪ್ರದೇಶದಲ್ಲಿರುವ ಕೋಠಿ ಗ್ರಾಮದಲ್ಲಿ ಸಾಧ್ವಿ ಋತಂಬರ ಪೀತಾಂಬರೇಶ್ವರ ಆಶ್ರಮವಿದೆ. ಆಶ್ರಮದ ಬಳಿ ಓಂಕಾರೇಶ್ವರ ಅಣೆಕಟ್ಟಿನ ಕಾಲುವೆ ಹಾದು ಹೋಗಿದೆ. ಇಲ್ಲಿ ಬುಧವಾರ ಬೆಳಗ್ಗೆ 6 ಗಂಟೆಗೆ 6 ಬಾಲಕಿಯರು ಸ್ನಾನಕ್ಕೆ ತೆರಳಿದ್ದರು. ರೇಲಿಂಗ್ಗೆ ಕಟ್ಟಿದ್ದ ಚೈನ್ ಹಿಡಿದುಕೊಂಡು ಎಲ್ಲರೂ ಸ್ನಾನ ಮಾಡುತ್ತಿದ್ದರು. ಆಗ ಒಬ್ಬ ಹುಡುಗಿಯ ಕೈ ತಪ್ಪಿದೆ. ಕಾಲುವೆಯಲ್ಲಿ ಹರಿಯುವ ನೀರಿನ ವೇಗಕ್ಕೆ ಬಾಲಕಿ ಸಿಲುಕಿಕೊಂಡು ರಕ್ಷಣೆಗಾಗಿ ಕೂಗುತ್ತಿದ್ದಳು.
ನೀರಿನಲ್ಲಿ ಮುಳುಗುತ್ತಿರುವುದನ್ನು ನೋಡಿದ ಸ್ನೇಹಿತೆ ಆಕೆಯನ್ನು ಕಾಪಾಡಲು ಕಾಲುವೆಗೆ ಹಾರಿದಳು. ಆಕೆಯನ್ನು ರಕ್ಷಿಸಲು ಪ್ರಯತ್ನಿಸುವ ಭರದಲ್ಲಿ ಒಬ್ಬರಂತೆ ಒಬ್ಬರು ಕಾಲುವೆ ಹಾರಿದ್ದಾರೆ. ಅವರೆಲ್ಲರೂ ನೀರಿನಲ್ಲಿ ಮುಳುಗಲು ಪ್ರಾರಂಭಿಸಿದ್ದಾರೆ. ಇದನ್ನು ನೋಡಿದ ಕೆಲವರು ಕೂಡಲೇ ಬಾಲಕಿಯರನ್ನು ರಕ್ಷಿಸಲು ನೀರಿಗೆ ಹಾರಿದ್ದಾರೆ. ಇನ್ನೂ ಕೆಲವರು ಈ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಓದಿ: ಶಿಗ್ಗಾವಿಯಲ್ಲಿ ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಗುಂಡು ಹಾರಿಸಿದ ದುಷ್ಕರ್ಮಿ.. ಓರ್ವನಿಗೆ ಗಾಯ
ಸುದ್ದಿ ತಿಳಿದ ಕೂಡಲೇ ಮಾಂಧಾಟ ಮತ್ತು ಮೋರ್ಟಕ್ಕ ಠಾಣೆಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರು ಮತ್ತು ಮುಳುಗುಗಾರರ ಸಹಾಯದಿಂದ ಒಂದು ಗಂಟೆಗೂ ಹೆಚ್ಚು ಕಾಲ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಈ ಕಾಯಾಚರಣೆಯಲ್ಲಿ ಇಬ್ಬರು ಹುಡುಗಿಯರನ್ನು ಸುರಕ್ಷಿತವಾಗಿ ಕಾಲುವೆಯಿಂದ ರಕ್ಷಿಸಲಾಯಿತು. ಆದರೆ ಆ ನಾಲ್ವರು ಬಾಲಕಿಯರನ್ನು ಉಳಿಸಲು ಸಾಧ್ಯವಾಗಲಿಲ್ಲ. ಅವರೆಲ್ಲರೂ ಕಾಲುವೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತರು ಬಡಿಯಾ ಗ್ರಾಮದ ನವಲ್ ಪುತ್ರಿ ವೈಶಾಲಿ (12), ಸೋಮವಾಡ ಗ್ರಾಮದ ಕಾಂಚನಾ ರಮೇಶ್ (11) , ದಭಡ್ ಗ್ರಾಮದ ಪ್ರತೀಕ್ಷಾ ಛಾನಿಯಾ (12), ಇಂದ್ರಾಪುರ ರಹಾತಿಯಾ ಗ್ರಾಮದ ದಿವ್ಯಾನ್ಸಿ ಚೇತಕ್ (10) ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಓಂಕಾರೇಶ್ವರ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಡಿಒಪಿ ರಾಕೇಶ್ ಪೇಂದ್ರ ತಿಳಿಸಿದ್ದಾರೆ. ಈ ಅಪಘಾತದ ನಂತರ ಆಶ್ರಮದಲ್ಲಿ ಶೋಕ ಮಡುಗಟ್ಟಿದೆ.
ಓದಿ: ಲೈಫ್ ಗಾರ್ಡ್ ಸಿಬ್ಬಂದಿ ಮಾತು ಮೀರಿ ಸಮುದ್ರಕ್ಕಿಳಿದ ಯುವಕರು.. ಶವವಾಗಿ ಪತ್ತೆ
ಸಾಧ್ವಿ ಋತಂಭರಾ ಯಾರು: ಋತಂಭರಾ ಓರ್ವ ಸಾಧ್ವಿ, ರಾಜಕಾರಣಿ ಮತ್ತು ಧಾರ್ಮಿಕ ಕಥೆಗಾರ್ತಿ. 1992ರಲ್ಲಿ ಬಾಬರಿ ಮಸೀದಿ ವಿರುದ್ಧದ ಚಳವಳಿಯಲ್ಲಿ ಭಾಗವಹಿಸಿದ್ದರಿಂದ ಇಲ್ಲಿನ ಜನ ಅವರ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಅವರು ವಿಶ್ವ ಹಿಂದೂ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರೂ ಆಗಿದ್ದಾರೆ. ಅವರು ತಮ್ಮ ಕಥೆಗಳಲ್ಲಿ ರಾಮ್ ಕಥಾ ಮತ್ತು ಕೆಲವು ಧಾರ್ಮಿಕ ಕಥೆಗಳನ್ನು ವಿವರಿಸಿದ್ದಾರೆ. ಅವರು ಭಾರತದಲ್ಲಿ ಮಾತ್ರವಲ್ಲದೆ ಇತರ ದೇಶಗಳಲ್ಲಿಯೂ ಹಿಂದೂ ಧರ್ಮದ ಪ್ರಚಾರವನ್ನು ಹರಡುತ್ತಿದ್ದಾರೆ. ಅವರು ದೇಶದ ಅನೇಕ ಸ್ಥಳಗಳಲ್ಲಿ ಆಶ್ರಮಗಳನ್ನು ಹೊಂದಿದ್ದಾರೆ. ಅಲ್ಲಿ ಅನೇಕ ರೀತಿಯ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳನ್ನು ಮಾಡಲಾಗುತ್ತದೆ. ಸಾಧ್ವಿ ಋತಂಭರಾ ಅವರು ಖಾಂಡ್ವಾ ಬಳಿಯ ಓಂಕಾರೇಶ್ವರದಲ್ಲಿ ಸಹ ಆಶ್ರಮವನ್ನೂ ಹೊಂದಿದ್ದಾರೆ.