ETV Bharat / bharat

ಸ್ವಂತಿಕೆ ಗೀಳಿಗೆ ಹೋಯ್ತು ಪ್ರಾಣ.. ಸೆಲ್ಫಿ ವೇಳೆ ನದಿಗೆ ಬಿದ್ದ ಒಂದೇ ಕುಟುಂಬದ ನಾಲ್ವರು ಹುಡುಗಿಯರು

ಸೆಲ್ಫಿ ತೆಗೆದುಕೊಳ್ಳಲು ಹೋಗಿ ನಾಲ್ವರು ಹುಡುಗಿಯರು ನದಿಯಲ್ಲಿ ಬಿದ್ದಿದ್ದು, ಇದರಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನಿಬ್ಬರು ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

four-girls-falling-into-river-
ಸ್ವಂತಿ ಗೀಳಿಗೆ ಹೋಯ್ತು ಪ್ರಾಣ.
author img

By

Published : Oct 16, 2022, 7:32 AM IST

ಮುಂಬೈ, ಮಹಾರಾಷ್ಟ್ರ: ಪ್ರಾಣಕ್ಕಿಂತಲೂ ಸ್ವಂತಿಕೆ(ಸೆಲ್ಫಿ) ದೊಡ್ಡದಲ್ಲ. ಅಪಾಯಕಾರಿ ಪ್ರದೇಶಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಅದೆಷ್ಟೋ ಯುವಜನತೆ ಪ್ರಾಣ ಕಳೆದುಕೊಂಡಿದ್ದು ವರಿದಿಯಾಗುತ್ತಲೇ ಇರುತ್ತವೆ. ಈಗ ಅಂಥದ್ದೇ ಘಟನೆ ಮಹಾರಾಷ್ಟ್ರದಲ್ಲಿ ಶನಿವಾರ ನಡೆದಿದೆ.

ನದಿ ಸೇತುವೆಯ ಮೇಲೆ ಸೆಲ್ಫಿ ತೆಗೆದುಕೊಳ್ಳುವಾಗ ಆಯತಪ್ಪಿ ಒಂದೇ ಕುಟುಂಬದ ನಾಲ್ವರು ಹುಡುಗಿಯರು ಕಾಲು ಜಾರಿ ನದಿಯಲ್ಲಿ ಬಿದ್ದಿದ್ದು, ಇದರಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನಿಬ್ಬರು ಹೇಗೋ ಈಜುತ್ತಾ ಪ್ರಾಣ ಉಳಿಸಿಕೊಂಡಿದ್ದಾರೆ.

ವಿರಾರ್​ ಪ್ರದೇಶದ ವೈತ್ರಾನ್​ ಜಟ್ಟಿಯಲ್ಲಿ ನಾಲ್ವರು ಹುಡುಗಿಯರು ನದಿ ದಡಕ್ಕೆ ವಾಕಿಂಗ್​ ಬಂದಿದ್ದಾರೆ. ಈ ವೇಳೆ ಸೆಲ್ಫಿ ತೆಗೆದುಕೊಳ್ಳುತ್ತಿರುವಾಗ ಇಬ್ಬರು ನೀರಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಇನ್ನಿಬ್ಬರು ಹುಡುಗಿಯರು ನೀರಿಗೆ ಇಳಿದಾಗ ಅವರು ನದಿಯಲ್ಲಿ ಮುಳುಗಿದ್ದಾರೆ. ಬಳಿಕ ಇನ್ನಿಬ್ಬರು ಈಜುತ್ತಾ ದಡ ಸೇರಿದ್ದಾರೆ.

ನದಿಯಲ್ಲಿ ಮುಳುಗಿದ ಹುಡುಗಿಯರಿಗೆ ಈಜು ಬಾರದ ಕಾರಣ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ದಡ ಸೇರಿದ ಹುಡುಗಿಯರು ಘಟನೆಯ ಬಗ್ಗೆ ತಿಳಿಸಿದಾಗ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಈಜುಗಾರರು ಎರಡು ಹುಡುಗಿಯರ ಮೃತದೇಹಗಳನ್ನು ರಾತ್ರಿಯಾದರೂ ಕಾರ್ಯಾಚರಣೆ ನಡೆಸಿ ಹೊರತೆಗೆದಿದ್ದಾರೆ.

ಓದಿ: ಬ್ರೇಕ್​ ಫೇಲ್​ ಆಗಿ ಉರುಳಿ ಬಿದ್ದ ಬಸ್​... 20 ಮಂದಿ ದಾರುಣ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.