ಔರಂಗಾಬಾದ್ (ಬಿಹಾರ) : ಬಿಹಾರದ ಔರಂಗಾಬಾದ್‌ನಲ್ಲಿ ನಾಲ್ವರು ಯುವತಿಯರು ವಿಷ ಸೇವಿಸಿದ್ದಾರೆ. ಇವರಲ್ಲಿ ಇಬ್ಬರು ಸಹೋದರಿಯರು ಎಂಬುದು ತಿಳಿದು ಬಂದಿದೆ. ವಿಷ ಸೇವಿಸಿದ ಒಬ್ಬ ಯುವತಿ ಸಾವನ್ನಪ್ಪಿದ್ದು, ಉಳಿದ ಮೂವರು ಯುವತಿಯರ ಸ್ಥಿತಿ ಚಿಂತಾಜನಕವಾಗಿದೆ. ಎಲ್ಲರಿಗೂ ಗಯಾ ಮಗಧ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ರೀತಿ 2022ರಲ್ಲಿ ಔರಂಗಾಬಾದ್‌ನಲ್ಲಿ 6 ಯುವತಿಯರು ಒಟ್ಟಿಗೆ ವಿಷ ಸೇವಿಸಿ ಮೃತಪಟ್ಟಿದ್ದರು.
ನಾಲ್ವರು ಯುವತಿಯರು ವಿಷ ಸೇವನೆ : ಭಾನುವಾರ ಸಂಜೆ ಔರಂಗಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದಲ್ಲಿ ನಾಲ್ವರು ಯುವತಿಯರು ಒಟ್ಟಿಗೆ ಕುಳಿತು ವಿಷ ಸೇವಿಸಿದ್ದಾರೆ. ವಿಷಕಾರಿ ಪದಾರ್ಥಗಳನ್ನು ಸೇವಿಸಿದ ಇಬ್ಬರು ಯುವತಿಯರು ಸಹೋದರಿಯರು ಎಂಬುದು ತಿಳಿದು ಬಂದಿದೆ. ಎಲ್ಲರ ವಯಸ್ಸು 18 ರಿಂದ 20 ವರ್ಷ ಎಂದು ಹೇಳಲಾಗುತ್ತಿದೆ.
ನಾಲ್ವರಲ್ಲಿ ಒಬ್ಬ ಯುವತಿ ಸಾವು : ವಿಷ ಸೇವಿಸಿದ ಬಗ್ಗೆ ಮಾಹಿತಿ ಬಂದ ತಕ್ಷಣ ಕುಟುಂಬಸ್ಥರು ಎಲ್ಲರನ್ನು ಔರಂಗಾಬಾದ್ ಸದರ್ ಆಸ್ಪತ್ರೆಗೆ ಕರೆದೊಯ್ದಿದ್ದು, ಪರಿಸ್ಥಿತಿ ಗಂಭೀರತೆ ಕಂಡ ವೈದ್ಯರು ಉನ್ನತ ಕೇಂದ್ರಕ್ಕೆ ಕಳುಹಿಸಿದ್ದಾರೆ. ಕುಟುಂಬದವರು ಎಲ್ಲ ಯುವತಿಯರನ್ನು ಗಯಾದ ಮಗಧ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ದರು. ಆದರೆ, ದಾರಿಯಲ್ಲಿ ಒಬ್ಬ ಯುವತಿ ಸಾವನ್ನಪ್ಪಿದ್ದಾರೆ. ಆದರೆ, ಈ ಘಟನೆ ಬಗ್ಗೆ ಮಾಹಿತಿ ನೀಡಲು ಕುಟುಂಬಸ್ಥರು ನಿರಾಕರಿಸುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಪ್ರಕರಣದ ತನಿಖೆಯಲ್ಲಿ ನಿರತರಾಗಿರುವ ಪೊಲೀಸರು: 'ಯುವತಿಯರು ಏನು ತಿಂದಿದ್ದಾರೆ, ಯಾಕೆ ಹೀಗೆ ಮಾಡಿದ್ದಾರೆ ಎಂಬ ಬಗ್ಗೆ ತನಗೆ ತಿಳಿದಿಲ್ಲ ಎಂದು ಮೃತ ಯುವತಿಯ ತಂದೆ ತಿಳಿಸಿದ್ದಾರೆ. ಈ ವಿಚಾರ ತನ್ನ ಗಮನಕ್ಕೆ ಬಂದಿದೆ. ಅದನ್ನು ಪರಿಶೀಲಿಸಲಾಗುತ್ತಿದೆ. ಯುವತಿಯರು ಯಾವುದೋ ಕಾರಣಕ್ಕೆ ವಿಷ ಸೇವಿಸಿದ್ದಾರೆಯೇ ಅಥವಾ ತಿಳಿಯದೇ ವಿಷ ಸೇವಿಸಿದ್ದಾರೆಯೇ? ಎಂಬುದು ತನಿಖೆಯ ನಂತರವಷ್ಟೇ ತಿಳಿಯಲಿದೆ' ಎಂದು ಔರಂಗಾಬಾದ್ ಸದರ್ ಉಪವಿಭಾಗೀಯ ಪೊಲೀಸ್ ಅಧಿಕಾರಿ ಅಮಾನುಲ್ಲಾ ಖಾನ್ ತಿಳಿಸಿದ್ದಾರೆ.
"ವಿಷ ಸೇವಿಸಿದವರು ನಾಲ್ವರೂ ಸ್ನೇಹಿತರು. ಅವರಲ್ಲಿ ನನ್ನ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇವರು ಏಕೆ ಇಂತಹ ಹೆಜ್ಜೆ ಇಟ್ಟಿದ್ದಾರೆ ಎಂದು ನನಗೆ ತಿಳಿಯುತ್ತಿಲ್ಲ. ಅವರು ಏನು ತಿಂದಿದ್ದಾರೆ ಎಂದು ನನಗೆ ಅರ್ಥವಾಗುತ್ತಿಲ್ಲ" ಎಂದು ಯುವತಿಯ ತಂದೆ ಹೇಳಿದ್ದಾರೆ.
2022ರಲ್ಲಿ ವಿಷ ಸೇವಿಸಿದ್ದ 6 ಯುವತಿಯರು : ಸುಮಾರು ಒಂದೂವರೆ ವರ್ಷಗಳ ಹಿಂದೆ, ಔರಂಗಾಬಾದ್‌ನ ರಫಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹುಡುಗನೊಬ್ಬ ತನ್ನನ್ನು ಮದುವೆಯಾಗಲು ನಿರಾಕರಿಸಿದ ಎಂದು ಮನನೊಂದ ಹುಡುಗಿ ವಿಷ ಸೇವಿಸಿದ್ದಳು. ಅದರ ನಂತರ ಅವಳ ಐವರು ಸ್ನೇಹಿತೆಯರು ವಿಷ ಸೇವಿಸಿದ್ದರು. ಅದರಲ್ಲಿ ನಾಲ್ವರು ಸಾವನ್ನಪ್ಪಿದ್ದರು ಎಂಬುದಾಗಿ ತಿಳಿದು ಬಂದಿತ್ತು.
ಇದನ್ನೂ ಓದಿ : ಪರಸ್ಪರ ಪ್ರೀತಿ ಸಾಬೀತಿಗೆ ನಿರ್ಧಾರ: ವಿಷ ಸೇವನೆ ಮಾಡಿದ ಜೋಡಿ!