ETV Bharat / bharat

ಬಿರುಗಾಳಿಯಿಂದ ಬಂಡೆಗಪ್ಪಳಿಸಿ ಬೋಟ್ ಮುಳುಗಡೆ: ನಾಲ್ವರು ಮೀನುಗಾರರ ಸಾವು - ಕೇರಳದ ಒಚಿರಾ ಕರಾವಳಿ

ಬಿರುಗಾಳಿಯಿಂದಾಗಿ ಬಂಡೆಯೊಂದಕ್ಕೆ ಅಪ್ಪಳಿಸಿದ ಬೋಟ್​ ಸಮುದ್ರದಲ್ಲಿ ಮುಳುಗಿ ನಾಲ್ವರು ಮೀನುಗಾರರು ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ.

Four fishermen die as boat sinks off in Kerala
ಬಿರುಗಾಳಿಗೆ ಬಂಡೆಗೆ ಅಪ್ಪಳಿಸಿ, ಬೋಟ್ ಮುಳುಗಡೆ: ನಾಲ್ವರು ಮೀನುಗಾರರ ಸಾವು
author img

By

Published : Sep 2, 2021, 4:57 PM IST

ಕೊಲ್ಲಂ(ಕೇರಳ): ಮೀನುಗಾರರ ಬೋಟ್ ಮುಳುಗಿ ನಾಲ್ಕು ಮಂದಿ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿರುವ ಘಟನೆ ಗುರುವಾರ ಬೆಳಗ್ಗೆ 10.30ಕ್ಕೆ ಕೇರಳದ ಒಚಿರಾ ಕರಾವಳಿಯಲ್ಲಿ ನಡೆದಿದೆ.

ಪ್ರಾಥಮಿಕ ಮಾಹಿತಿಯಂತೆ, ಓಂಕಾರಂ ಎಂಬ ಹೆಸರಿನ ಮೀನುಗಾರಿಕಾ ಬೋಟ್​ ಪ್ರಬಲವಾದ ಗಾಳಿಗೆ ಸಿಲುಕಿದ ನಂತರ ಬಂಡೆಯೊಂದಕ್ಕೆ ಅಪ್ಪಳಿಸಿದ ಪರಿಣಾಮ ದುರ್ಘಟನೆ ಸಂಭವಿಸಿದೆ.

ಈ ಘಟನೆ ಸಂಭವಿಸಿದ ವೇಳೆ ಬೋಟ್​ನಲ್ಲಿ 16 ಮಂದಿ ಇದ್ದರು. ಮೃತರನ್ನು ಅಝೀಕಲ್ ಮತ್ತು ಅಲಪ್ಪುಳ ನಿವಾಸಿಗಳಾದ ಸುನೀಲ್ ದತ್​, ಸುದೇವನ್, ತಂಕಪ್ಪನ್ ಮತ್ತು ಶ್ರೀಕುಮಾರ್ ಎಂದು ಗುರುತಿಸಲಾಗಿದೆ.

12 ಮಂದಿಗೆ ಗಾಯಗಳಾಗಿದ್ದು, ಅವರನ್ನು ಕಾಯಂಕುಲಂ, ಒಚಿರಾ ಮತ್ತು ಕರುನಾಗಪಲ್ಲಿ ಆಸ್ಪತ್ರೆಗಳಿಗೆ ಸಾಗಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಅವಳಿ ಮರಿಗಳಿಗೆ ಜನ್ಮ ನೀಡಿದ ಆನೆ: ಶ್ರೀಲಂಕಾದಲ್ಲಿ ಅಪರೂಪದ ವಿಸ್ಮಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.