ETV Bharat / bharat

ಮಾಜಿ ಪ್ರಧಾನಿ ರಾಜೀವ್ ಗಾಂಧಿ 30ನೇ ಪುಣ್ಯತಿಥಿ: ರಾಹುಲ್‌, ಪ್ರಿಯಾಂಕ ಸೇರಿ ಗಣ್ಯರಿಂದ ನಮನ - ಮಾಜಿ ಪ್ರಧಾನಿ ರಾಜೀವ್ ಗಾಂಧಿ

ಇಂದು ದೇಶದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 30ನೇ ಪುಣ್ಯತಿಥಿ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ತಂದೆ ರಾಜೀವ್ ಗಾಂಧಿಯವರ ಫೋಟೋ ಹಂಚಿಕೊಂಡಿದ್ದು, ಗೌರವ ಸಲ್ಲಿಸಿದ್ದಾರೆ.

Rahul pays floral tribute to former PM and father Rajiv Gandhi on his death anniversary
ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 30 ನೇ ಪುಣ್ಯತಿಥಿ
author img

By

Published : May 21, 2021, 1:06 PM IST

Updated : May 21, 2021, 1:51 PM IST

ನವದೆಹಲಿ: ಇಂದು ದೇಶದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 30 ನೇ ಪುಣ್ಯತಿಥಿ. ಈ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರು ರಾಜೀವ್ ಗಾಂಧಿ ಅವರಿಗೆ ಗೌರವ ಸಲ್ಲಿಸಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮ ತಂದೆ ರಾಜೀವ್ ಗಾಂಧಿಯವರ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗೆ ಸತ್ಯ, ಸಹಾನುಭೂತಿ, ಪ್ರಗತಿ ಎಂದು ಕ್ಯಾಪ್ಶನ್​ ನೀಡಿದ್ದಾರೆ.

ರಾಜೀವ್ ಗಾಂಧಿ ಅವರಿಗೆ ಗೌರವ ಸಲ್ಲಿಸಿದ ರಾಹುಲ್​

ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ತನ್ನ ತಂದೆಗೆ ಗೌರವ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ. ರಾಜೀವ್ ಗಾಂಧಿಯವರ ಚಿತ್ರವನ್ನು ಹಂಚಿಕೊಂಡ ಅವರು, ಪ್ರೀತಿಗಿಂತ ದೊಡ್ಡ ಶಕ್ತಿ ಇಲ್ಲ, ಕರುಣೆಗಿಂತ ದೊಡ್ಡ ಧೈರ್ಯವಿಲ್ಲ, ಸಹಾನುಭೂತಿಗಿಂತ ದೊಡ್ಡ ಶಕ್ತಿ ಇಲ್ಲ ಮತ್ತು ನಮ್ರತೆಗಿಂತ ದೊಡ್ಡ ಗುರುಗಳಿಲ್ಲ ಎಂದು ಬರೆದಿದ್ದಾರೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ 1991 ರ ಮೇ 21 ರಂದು ಆತ್ಮಾಹತ್ಯಾ ಬಾಂಬ್ ಸ್ಫೋಟದಲ್ಲಿ ನಿಧನರಾದರು. ತಮಿಳುನಾಡಿನ ಶ್ರೀಪೆರುಂಬುದೂರಿನಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದ ವೇಳೆ ಎಲ್‌ಟಿಟಿಇ ಕಡೆಯ ಯುವತಿ ರಾಜೀವ್ ಗಾಂಧಿಗೆ ಹೂವಿನ ಹಾರ ಹಾಕುವ ನೆಪದಲ್ಲಿ ಬಂದು ಅವರ ಹತ್ತಿರ ಹೋಗಿ ತನ್ನನ್ನು ಸ್ಫೋಟಿಸಿಕೊಂಡಿದ್ದರು.

Rahul pays floral tribute to former PM and father Rajiv Gandhi on his death anniversary
ಗೌರವ ಸಲ್ಲಿಸಿದ ರಾಹುಲ್​

Last Updated : May 21, 2021, 1:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.