ನಬರಂಗಪುರ (ಒಡಿಶಾ): ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಸಂಸದ ಪ್ರದೀಪ್ ಮಾಝಿ ಅವರು ತಮ್ಮ ಬೆಂಬಲಿಗರೊಂದಿಗೆ ಆಡಳಿತಾರೂಢ ಬಿಜೆಡಿಗೆ ಸೇರುವುದಾಗಿ ಘೋಷಿಸಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಕಾಂಗ್ರೆಸ್ನಲ್ಲಿ ಜನರಿಗೆ ಕೆಲಸ ಮಾಡುವ ಯಾವುದೇ ಅವಕಾಶವಿಲ್ಲ. ಈ ಹಿನ್ನೆಲೆ ನನ್ನ ಬೆಂಬಲಿಗರೊಂದಿಗೆ, ಸಿಎಂ ನವೀನ್ ಪಟ್ನಾಯಕ್ ನೇತೃತ್ವದಲ್ಲಿ ನಾನು ಬಿಜೆಡಿಗೆ ಸೇರುತ್ತೇನೆ. ಅವರು ಕೋರಾಪುಟ್ ಪ್ರದೇಶದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಕೋನವನ್ನು ಹೊಂದಿದ್ದಾರೆ" ಎಂದು ಅವರು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ನಲ್ಲಿ ಪರಿಸ್ಥಿತಿ ಸರಿಯಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಹೇಳಿದರು. ಶುಕ್ರವಾರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಮಾಜಿ ಸಂಸದರು, ದಕ್ಷಿಣ ಒಡಿಶಾದ ಹಿಂದುಳಿದ ಜಿಲ್ಲೆಗಳ ಜನರಿಗಾಗಿ ಹೆಚ್ಚು ಕೆಲಸ ಮಾಡಲು ಬಯಸಿದ್ದು, ಬಿಜೆಡಿಗೆ ಸೇರಲು ನಿರ್ಧರಿಸಿದ್ದೇನೆ ಎಂದಿದ್ದಾರೆ.
ಮಾಝಿ, 2014 ಮತ್ತು 2019 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಸೋತಿದ್ದರು. ಅಕ್ಟೋಬರ್ 28 ರಂದು ಅವರು ಬಿಜೆಡಿಗೆ ಸೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಅಫ್ಘನ್ನಿಂದ ಭಾರತೀಯರ ಸ್ಥಳಾಂತರಿಸಿ: PMO, MEAಗೆ ಪತ್ರ