ETV Bharat / bharat

ಮಾನಸಿಕ ಅಸ್ವಸ್ಥನ ಕೈ - ಕಾಲು ಕಟ್ಟಿ ಹಾಕಿದ ಕುಟುಂಬ.. ಚಿಕಿತ್ಸೆಗೆ ನೆರವಾದ ಮಾಜಿ ಸಚಿವ

ಮಾನಸಿಕ ಅಸ್ವಸ್ಥನೊಬ್ಬನಿಗೆ ಚಿಕಿತ್ಸೆ ಕೊಡಿಲು ಮಾಜಿ ಸಚಿವರೊಬ್ಬರು ನೆರವಾಗಿದ್ದಾರೆ. ಅಲ್ಲದೇ, ಯುವಕ ಶೀಘ್ರ ಗುಣಮುಖರಾಗುತ್ತಾನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

author img

By

Published : Jul 30, 2021, 9:41 AM IST

Updated : Jul 30, 2021, 1:49 PM IST

ಮಾನಸಿಕ ಅಸ್ವಸ್ಥನ ಕೈ-ಕಾಲು ಕಟ್ಟಿ ಹಾಕಿದ ಕುಟುಂಬ

ಜಬಲ್​ಪುರ (ಮಧ್ಯಪ್ರದೇಶ): ನಗರದ 40 ಕಿಲೋ ಮೀಟರ್​ ದೂರದಲ್ಲಿರುವ ಬಾಗ್ರಾಜಿ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥ ಯುವಕನೊಬ್ಬನ ಕೈಕಾಲುಗಳನ್ನು ಹಲವಾರು ವರ್ಷಗಳಿಂದ ಸರಪಳಿಯಿಂದ ಕಟ್ಟಿ ಹಾಕಲಾಗಿದೆ. ಪೋಷಕರು ಕಡುಬಡವರಾಗಿರುವುದರಿಂದ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೇ, ಅನೇಕ ಬಾರಿ ಜಿಲ್ಲಾಡಳಿತ ನೆರವಿಗೆ ಬರುವಂತೆ ಮನವಿ ಮಾಡಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.

ಮಾನಸಿಕ ಅಸ್ವಸ್ಥನ ಕೈ - ಕಾಲು ಕಟ್ಟಿ ಹಾಕಿದ ಕುಟುಂಬ

ಯುವಕನ ಹೆಸರು ರಾಜೇಶ್​ ಚಕ್ರವರ್ತಿ. ಸುಮಾರು 10 ವರ್ಷಗಳಿದ್ದಾಗ ಆತನಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಈ ರೀತಿಯಾಗಿದ್ದಾನೆ ಎಂದು ಕುಟುಂಬಸ್ಥರು ಪ್ರತಿಕ್ರಿಯಿಸಿದ್ದಾರೆ. ಮೂರು ತಿಂಗಳ ಹಿಂದೆ ಪೋಷಕರು ಮೃತಪಟ್ಟಿದ್ದು, ಸಹೋದರ, ಸಹೋದರಿಯರು ಈತನ ಆರೈಕೆ ಮಾಡುತ್ತಿದ್ದಾರೆ.

ಇದೀಗ ಈ ವಿಚಾರ ಮಾಜಿ ಸಚಿವ ಲಖನ್​ ಘಂಘೋರಿಯಾ ಗಮನಕ್ಕೆ ಬಂದಿದ್ದು, ಯುವಕನಿಗೆ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವರು, ಇದೊಂದು ಅತ್ಯಂತ ಖಂಡನೀಯ ಕೃತ್ಯವಾಗಿದೆ. ಅವನು ಹುಟ್ಟುತ್ತಲೇ ಅನಾರೋಗ್ಯ ಪೀಡಿತನಾಗಿರಲಿಲ್ಲ. ಮಧ್ಯ ವಯಸ್ಸಿನಲ್ಲಿ ಕಾಣಿಸಿಕೊಂಡ ಯಾವುದೋ ರೋಗದಿಂದ ಈ ರೀತಿಯಾಗಿದ್ದಾನಷ್ಟೇ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಯುವಕನಿಗೆ ಚಿಕಿತ್ಸೆ ಕೊಡಿಸಲು ಸಹಕರಿಸುತ್ತಿವೆ. ರಾಜೇಶ್ ಚಕ್ರವರ್ತಿ ಮೊದಲಿನಂತಾಗಬಹುದು ಎಂದು ಮಾಜಿ ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಪ್ಪುಹಣ ಬಿಳಿ ಮಾಡುವ ಆಮಿಷಕ್ಕೆ ಬಲಿಯಾಗಿ 9.20 ಲಕ್ಷ ರೂ‌. ಕಳೆದುಕೊಂಡ ಗುತ್ತಿಗೆದಾರ

Last Updated : Jul 30, 2021, 1:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.