ETV Bharat / bharat

ಹಿರಿಯ ವಕೀಲ, ಮಾಜಿ ಕಾನೂನು ಸಚಿವ ಶಾಂತಿ ಭೂಷಣ್​​ ನಿಧನ

author img

By

Published : Feb 1, 2023, 7:05 AM IST

Updated : Feb 1, 2023, 7:43 AM IST

ಮಾಜಿ ಕೇಂದ್ರ ಕಾನೂನು ಸಚಿವ ಶಾಂತಿ ಭೂಷಣ್ ನಿಧನ -ಮೊರಾರ್ಜಿ ದೇಸಾಯಿ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಶಾಂತಿ ಭೂಷಣ್​​ - ದೆಹಲಿಯ ಸ್ವಗೃಹದಲ್ಲಿ ನಿಧನ

Former law minister and senior lawyer Shanti Bhushan dies at 97
ಹಿರಿಯ ವಕೀಲ, ಮಾಜಿ ಕಾನೂನು ಸಚಿವ ಶಾಂತಿ ಭೂಷಣ್​​ ನಿಧನ

ನವದೆಹಲಿ : ಹಿರಿಯ ವಕೀಲ ಹಾಗೂ ಮಾಜಿ ಕೇಂದ್ರ ಕಾನೂನು ಸಚಿವ ಶಾಂತಿ ಭೂಷಣ್ ಅವರು ದೆಹಲಿಯ ತಮ್ಮ ಸ್ವಗೃಹದಲ್ಲಿ ನಿಧನರಾದರು. ಇವರಿಗೆ 97 ವರ್ಷ ವಯಸ್ಸಾಗಿತ್ತು. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದ ಇವರು ನಾಗರೀಕರ ಸ್ವಾತಂತ್ರ್ಯಗಳ ಧುರೀಣರಾಗಿದ್ದರು.

ಅನೇಕ ಪ್ರಮುಖ ಪ್ರಕರಣಗಳಲ್ಲಿ ವಾದಿಸಿದ್ದ ಶಾಂತಿ ಭೂಷಣ್​ ಅವರು, ಅಲಹಾಬಾದ್​​ ಹೈಕೋರ್ಟ್​ನಲ್ಲಿ ರಾಜ್​ ನಾರಾಯಣ್​​ ಅವರನ್ನು ಪ್ರತಿನಿಧಿಸಿ ಪ್ರಸಿದ್ಧಿ ಪಡೆದಿದ್ದರು. ಈ ಪ್ರಕರಣದಲ್ಲಿ ನ್ಯಾಯಾಲಯವು ಇಂದಿರಾ ಗಾಂಧಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಿತ್ತು. ಅಷ್ಟೇ ಅಲ್ಲದೆ 1974ರಲ್ಲಿ ಇಂದಿರಾಗಾಂಧಿಯವರನ್ನು ಪ್ರಧಾನಿ ಸ್ಥಾನದಿಂದ ಪದಚ್ಯುತಗೊಳಿಸಿ ಆದೇಶ ಹೊರಡಿಸಿತ್ತು. ಇದು ದೇಶಾದ್ಯಂತ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲದೆ ಇದು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲು ಕಾರಣವಾಗಿತ್ತು.

ಕಾನೂನು ಸಚಿವರಾಗಿದ್ದ ಶಾಂತಿ ಭೂಷಣ್​ : ಸದಾ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುತ್ತಿದ್ದ ಶಾಂತಿ ಭೂಷಣ್ ಅವರು ಮೊರಾರ್ಜಿ ದೇಸಾಯಿ ಅವರ ಸಚಿವ ಸಂಪುಟದಲ್ಲಿ ಕಾನೂನು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಇವರು 1977 ರಿಂದ 1979ರವರೆಗೆ ಕಾನೂನು ಸಚಿವರಾಗಿದ್ದರು.

1980ರಲ್ಲಿ ಇವರು 'ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್' ಎಂಬ ಎನ್‌ಜಿಒವನ್ನು ಸ್ಥಾಪಿಸಿದರು. ಈ ಎನ್​​ಜಿಒ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಪ್ರಮುಖ ಪಿಐಎಲ್‌ಗಳನ್ನು ಸಲ್ಲಿಸಿತ್ತು. ಅಷ್ಟೇ ಅಲ್ಲದೆ 2018ರಲ್ಲಿ, 'ಮಾಸ್ಟರ್ ಆಫ್ ರೋಸ್ಟರ್' ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಕೋರಿ ಇವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

44ನೇ ಸಂವಿಧಾನ ತಿದ್ದುಪಡಿ ಮಾಡಿ ಹೆಸರುವಾಸಿ: ಇಂದಿರಾ ಗಾಂಧಿ ಸರ್ಕಾರ ಮಾಡಿದ್ದ ಅನೇಕ ಕಾನೂನಿನ ನಿಬಂಧನೆಗಳನ್ನು ರದ್ದುಗೊಳಿಸಿ ಭಾರತದ ಸಂವಿಧಾನದ 44ನೇ ತಿದ್ದುಪಡಿ ಪರಿಚಯಿಸಿ ಹೆಸರುವಾಸಿಯಾಗಿದ್ದರು.ದೇಶದ ಪ್ರಮುಖ ಕಾನೂನು ತಜ್ಞರಲ್ಲಿ ಒಬ್ಬರಾಗಿದ್ದ ಭೂಷಣ್​ ಅವರು ಕಾನೂನುಗಳಲ್ಲಿ ಹಲವು ಸುಧಾರಣೆಗಳನ್ನು ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಕಾಂಗ್ರೆಸ್​ನಿಂದ ರಾಜಕೀಯ ಜೀವನ ಆರಂಭ: ಕಾಂಗ್ರೆಸ್​ನಿಂದ ತಮ್ಮ ರಾಜಕೀಯ ವೃತ್ತಿ ಜೀವನ ಆರಂಭಿಸಿದ್ದ ಭೂಷಣ್​​ ಅವರು, ಬಳಿಕ ಜನತಾ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಇವರು 1977ರಿಂದ 1980ರವರೆಗೆ ರಾಜ್ಯಸಭೆ ಸದಸ್ಯರಾಗಿದ್ದರು. 1980 ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದ ಇವರು ನಂತರ 1986 ರಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ್ದರು. ಬಳಿಕ ಆಮ್ ಆದ್ಮಿ ಪಕ್ಷ ಕಟ್ಟಿದ ಇವರು, ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ಇವರ ಮಗ ಅಡ್ವೊಕೇಟ್ ಪ್ರಶಾಂತ್ ಭೂಷಣ್ ಕೂಡ ಪ್ರಸಿದ್ಧ ವಕೀಲರಾಗಿದ್ದಾರೆ.

ಸಂತಾಪ ಸೂಚಿಸಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು, ಉಪರಾಷ್ಟ್ರಪತಿ ಧನ್​ಕರ್​ : ಮಾಜಿ ಕಾನೂನು ಸಚಿವ ಶಾಂತಿ ಭೂಷಣ್​ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಉಪರಾಷ್ಟ್ರಪತಿ ಜಗದೀಪ್​ ಧನ್​ಕರ್​ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

  • In the demise of the legendary lawyer and former Union Law Minister Shanti Bhushan Ji, an era has passed. He always stood up for his beliefs. He leaves his imprint as much on politics as on jurisprudence. Condolences to his family and friends.

    — President of India (@rashtrapatibhvn) January 31, 2023 " class="align-text-top noRightClick twitterSection" data=" ">

"ಶ್ರೀ ಶಾಂತಿ ಭೂಷಣ್ ಜಿ ಅವರು ಕಾನೂನು ಕ್ಷೇತ್ರಕ್ಕೆ ನೀಡಿದ ಕೊಡುಗೆ ಮತ್ತು ಹಿಂದುಳಿದವರ ಪರವಾಗಿ ಮಾತನಾಡುವ ಉತ್ಸಾಹಕ್ಕಾಗಿ ಸ್ಮರಿಸಲ್ಪಡುತ್ತಾರೆ. ಅವರ ನಿಧನದಿಂದ ತುಂಬಾ ನೋವಾಗಿದೆ. ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ ಎಂದು ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.

  • Shri Shanti Bhushan Ji will be remembered for his contribution to the legal field and passion towards speaking for the underprivileged. Pained by his passing away. Condolences to his family. Om Shanti.

    — Narendra Modi (@narendramodi) January 31, 2023 " class="align-text-top noRightClick twitterSection" data=" ">

''ಮಾಜಿ ಕೇಂದ್ರ ಕಾನೂನು ಸಚಿವ ಶಾಂತಿ ಭೂಷಣ್ ಜಿ ಅವರ ನಿಧನದಿಂದ ಒಂದು ಯುಗಾಂತ್ಯವಾಗಿದೆ. ಅವರು ಯಾವಾಗಲೂ ತಮ್ಮ ನಂಬಿಕೆಗಳ ಪರವಾಗಿ ನಿಂತಿದ್ದರು. ನ್ಯಾಯಶಾಸ್ತ್ರದಂತೆಯೇ ರಾಜಕೀಯದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ '' ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಾಪ ಸೂಚಿಸಿದ್ದಾರೆ.

"ಪ್ರತಿಷ್ಠಿತ ನ್ಯಾಯಶಾಸ್ತ್ರಜ್ಞ, ಹಿರಿಯ ವಕೀಲ ಮತ್ತು ಮಾಜಿ ಕೇಂದ್ರ ಕಾನೂನು ಸಚಿವ ಶ್ರೀ ಶಾಂತಿ ಭೂಷಣ್ ಜಿ ಅವರು ನ್ಯಾಯಶಾಸ್ತ್ರ ಮತ್ತು ಸಾರ್ವಜನಿಕ ವ್ಯವಹಾರಗಳಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಅವರ ನಿಧನವು ಭಾರತದ ಕಾನೂನು ಭ್ರಾತೃತ್ವಕ್ಕೆ ದೊಡ್ಡ ನಷ್ಟವಾಗಿದೆ" ಎಂದು ಉಪರಾಷ್ಟ್ರಪತಿ ಜಗದೀಪ್​ ಧನ್​ಕರ್​ ಹೇಳಿದ್ದಾರೆ.

ಕಾನೂನು ಸಚಿವ ಕಿರಣ್​ ರಿಜಿಜು ಸಂತಾಪ ಸೂಚಿಸಿದ್ದು, "ಮಾಜಿ ಕೇಂದ್ರ ಕಾನೂನು ಸಚಿವ ಶಾಂತಿ ಭೂಷಣ್ ಜಿ ಅವರು ಇನ್ನಿಲ್ಲ ಎಂಬ ಸುದ್ದಿ ಕೇಳಿ ತೀವ್ರ ನೋವಾಗಿದೆ"ಎಂದು ಹೇಳಿದ್ದಾರೆ.

ಇದನ್ನೂ ಓದಿ : ಅಪಾರ್ಟ್‌ಮೆಂಟ್​ನಲ್ಲಿ ಅಗ್ನಿ ದುರಂತ: ನಾಲ್ವರು ಮಕ್ಕಳು ಸೇರಿ 14 ಜನರ ಸಜೀವ ದಹನ

Last Updated : Feb 1, 2023, 7:43 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.