ನೀಲಗಿರಿ (ತಮಿಳುನಾಡು): ಮದ್ಯದ ಅಮಲಿನಲ್ಲಿ ಅಪರಿಚಿತರ ಮನೆಗೆ ನುಗ್ಗಿದ ಆರೋಪದಡಿ ಮಾಜಿ ಸಂಸದ ಗೋಪಾಲಕೃಷ್ಣನ್ ಮೇಲೆ ಹಲ್ಲೆ ನಡೆದಿದೆ.
ಗೋಪಾಲಕೃಷ್ಣನ್ 2014-19ರಲ್ಲಿ ನೀಲಗಿರಿ ಕ್ಷೇತ್ರದ ಎಐಎಡಿಎಂಕೆ(AIADMK) ಸಂಸದರಾಗಿದ್ದರು. ಗುರುವಾರ ಗೋಪಾಲಕೃಷ್ಣನ್ ಅವರು ನೀಲಗಿರಿಯ ಮುತ್ಯಾಲಮ್ಮನಪೇಟೆಯಲ್ಲಿರುವ ಅಪರಿಚಿತರ ನಿವಾಸಕ್ಕೆ ಪ್ರವೇಶಿಸಿದ್ದರು ಎನ್ನಲಾಗ್ತಿದೆ. ಅವರ ವರ್ತನೆಯಿಂದ ಕೋಪಗೊಂಡ ಮನೆಯ ಮಾಲೀಕರು (ಅಪರಿಚಿತ) ಗೋಪಾಲಕೃಷ್ಣನ್ ಮೇಲೆ ಹಲ್ಲೆ ನಡೆಸಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಮನೆಯ ಮಾಲೀಕ ಕುನ್ನೂರು ಪೊಲೀಸರಿಗೂ ದೂರು ನೀಡಿದ್ದಾರೆ.
ಬಳಿಕ ಶುಕ್ರವಾರ ಕುನ್ನೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಗೋಪಾಲಕೃಷ್ಣ ಅವರು ಅಪರಿಚಿತ ವ್ಯಕ್ತಿಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.