ETV Bharat / bharat

ಸೈಕಲ್​ನಲ್ಲಿ ಫುಡ್​ ಡೆಲಿವರಿ ಮಾಡುತ್ತಿದ್ದ ಯುವಕ: ವಿದ್ಯಾರ್ಥಿಯ ಕಷ್ಟ ನೋಡಿ ಬೈಕ್​ ಕೊಟ್ಟ ಸಂಸ್ಥೆ!

ಹೈದರಾಬಾದ್‌ನ ಮುಹಮ್ಮದ್ ಅಕೀಲ್ ಎಂಬ ಯುವಕ ಸೈಕಲ್​ ಮೂಲಕ ಆಹಾರವನ್ನು ಗ್ರಾಹಕರಿಗೆ ತಲುಪಿಸುತ್ತಿದ್ದ ಸುದ್ದಿ ಮಾಧ್ಯಮದಲ್ಲಿ ಪ್ರಕಟವಾಗಿತ್ತು. ಇದೀಗ ಆತನಿಗೆ 'ದಿ ಗ್ರೇಟ್ ಹೈದರಾಬಾದ್ ಫುಡ್ ಆ್ಯಂಡ್ ಟ್ರಾವೆಲ್ ಕ್ಲಬ್' ತಂಡದ ಸದಸ್ಯರು ಟಿವಿಎಸ್ ಎಕ್ಸ್‌ಎಲ್ ಬೈಕ್​ ನೀಡಿದ್ದಾರೆ.

Food delivery boy
ಬೈಕ್​ ಕೊಡುಗೆ
author img

By

Published : Jun 18, 2021, 7:18 PM IST

ಹೈದರಾಬಾದ್: ಸೈಕಲ್​ ಮೂಲಕ ಆಹಾರವನ್ನು ಗ್ರಾಹಕರಿಗೆ ತಲುಪಿಸುತ್ತಿದ್ದ ಯುವಕನ ಸುದ್ದಿ ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಅಷ್ಟೇ ಅಲ್ಲದೆ, ಸೋಷಿಯಲ್​ ಮೀಡಿಯಾದಲ್ಲೂ ವಿಡಿಯೋ ವೈರಲ್​ ಆಗಿತ್ತು. ಇದೀಗ ಆ ಯುವಕನಿಗೆ 'ದಿ ಗ್ರೇಟ್ ಹೈದರಾಬಾದ್ ಫುಡ್ ಆ್ಯಂಡ್​ ಟ್ರಾವೆಲ್ ಕ್ಲಬ್ ಬೈಕ್​ ನೀಡಿ ಆತನ ಕೆಲಸಕ್ಕೆ ಸಹಾಯ ಮಾಡಿದೆ.

ಹೈದರಾಬಾದ್‌ನ ಮುಹಮ್ಮದ್ ಅಕೀಲ್ ಎಂಬ ಯುವಕ ಕಳೆದ ವಾರ ಇಲ್ಲಿನ ಕೋಟಿ ಪ್ರದೇಶದ ಜೊಮ್ಯಾಟೋ ಗ್ರಾಹಕರಿಗೆ ಆಹಾರವನ್ನು ತಲುಪಿಸುವಾಗ ತಡವಾಗಿತ್ತು. ಈ ಬಳಿಕ ಗ್ರಾಹಕರಾದ ರಾಬಿನ್ ಮುಖೇಶ್ ಎಂಬವರು ಆರ್ಡರ್​ ಮಾಡಿದ ಆಹಾರ ತಕ್ಷಣ ಬರದಿದ್ದನ್ನು ಪ್ರಶ್ನಿಸಿದಾಗ, ಅಕೀಲ್​ ಬಳಿ ಬೈಕ್​ ಇಲ್ಲ ಬದಲಾಗಿ ಆತ ಸೈಕಲ್​ ಮುಖಾಂತರ ಆರ್ಡರ್​ ಪೂರೈಸಿರುವುದಾಗಿ ತಿಳಿದುಬಂದಿತ್ತು.

ಈ ಬಳಿಕ ಮುಖೇಶ್ ಸೋಷಿಯಲ್ ಮೀಡಿಯಾದಲ್ಲಿ ಅಕೀಲ್ ಬಗ್ಗೆ ಪೋಸ್ಟ್​ ಹಾಕಿದ್ದರು. ಇನ್ನು ಈ ಹಿಂದೆ ಈಟಿವಿ ಭಾರತ ಮಾಧ್ಯಮವೂ ಸಹ ಅಕೀಲ್​ ಬಗ್ಗೆ ಸುದ್ದಿ ಪ್ರಕಟ ಮಾಡಿತ್ತು. ಇನ್ನು ಮುಹಮ್ಮದ್ ಅಕೀಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಶಿಕ್ಷಣ ಮುಂದುವರೆಸಲು ಆಹಾರ ವಿತರಣಾ ಹುಡುಗನಾಗಿ ಅರೆಕಾಲಿಕ ಕೆಲಸ ಮಾಡುತ್ತಿದ್ದಾನೆ.

ಇನ್ನು ಅಕೀಲ್​ ವಿಡಿಯೋ ವೈರಲ್​ ಆಗಿದ್ದನ್ನು ಕಂಡ 'ದಿ ಗ್ರೇಟ್ ಹೈದರಾಬಾದ್ ಫುಡ್ ಆ್ಯಂಡ್ ಟ್ರಾವೆಲ್ ಕ್ಲಬ್' ತಂಡದ ಸದಸ್ಯರು ತಕ್ಷಣ ಸಹಾಯಕ್ಕಾಗಿ ಧಾವಿಸಿ, ಆತನಿಗೆ ಟಿವಿಎಸ್ ಎಕ್ಸ್‌ಎಲ್ ಬೈಕ್​ನ್ನು ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.