ETV Bharat / bharat

ತ್ರಿಪುರಾ ವಿಧಾನಸಭೆಯಲ್ಲಿ ರಣಾಂಗಣ ಸೃಷ್ಟಿ: ಐವರು ಶಾಸಕರ ಅಮಾನತು ಮಾಡಿದ ಸ್ಪೀಕರ್.. ವಿಡಿಯೋ ನೋಡಿ

ತ್ರಿಪುರಾ ವಿಧಾನಸಭೆ ಕಲಾಪದಲ್ಲಿ ಶಾಸಕರು ಕೋಲಾಹಲ ಉಂಟು ಮಾಡಿದ್ದಾರೆ. ಇದರಿಂದ ಐವರು ಶಾಸಕರನ್ನು ಸ್ಪೀಕರ್ ಅಮಾನತುಗೊಳಿಸಿದ್ದಾರೆ. ಸ್ಪೀಕರ್ ನಿರ್ಧಾರ ವಿರೋಧಿಸಿ ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ.

five tripura-mlas-suspended-from-assembly-for-disrupting-proceedings
ತ್ರಿಪುರಾ ವಿಧಾನಸಭೆಯಲ್ಲಿ ರಣಾಂಗಣ ಸೃಷ್ಟಿ: ಐವರು ಶಾಸಕರ ಅಮಾನತು ಮಾಡಿದ ಸ್ಪೀಕರ್
author img

By

Published : Jul 7, 2023, 4:10 PM IST

ತ್ರಿಪುರಾ ವಿಧಾನಸಭೆಯಲ್ಲಿ ರಣಾಂಗಣ ಸೃಷ್ಟಿ: ಐವರು ಶಾಸಕರ ಅಮಾನತು ಮಾಡಿದ ಸ್ಪೀಕರ್

ಅಗರ್ತಲಾ (ತ್ರಿಪುರಾ): ತ್ರಿಪುರಾ ವಿಧಾನಸಭೆ ಕಲಾಪದಲ್ಲಿ ಇಂದು ಆಡಳಿತಾರೂಢ ಬಿಜೆಪಿ ಮತ್ತು ತಿಪ್ರಾ ಮೋಥಾ ಪಕ್ಷ ಸೇರಿ ಪ್ರತಿಪಕ್ಷದ ಶಾಸಕರ ನಡುವೆ ವಾಗ್ವಾದ ನಡೆದಿದೆ. ಸದನದ ಬಾವಿಗೆ ಇಳಿದು ತಳ್ಳಾಟ, ನೂಕಾಟ ಉಂಟು ಮಾಡಿ ಶಾಸಕರು ರಣಾಂಗಣವನ್ನೇ ಸೃಷ್ಟಿಸಿದ್ದಾರೆ. ಹೀಗಾಗಿ ಐವರು ಶಾಸಕರನ್ನು ಸ್ಪೀಕರ್​ ಒಂದು ದಿನದ ಮಟ್ಟಿಗೆ ಕಲಾಪದಿಂದ ಅಮಾನತುಗೊಳಿಸಿದ್ದಾರೆ.

ಇಂದು ಬೆಳಗ್ಗೆ ಕಲಾಪದಲ್ಲಿ ಪ್ರತಿಪಕ್ಷದ ನಾಯಕ ಅನಿಮೇಶ್ ದೆಬ್ಬರ್ಮಾ ಅವರು ಬಾಗ್​ಬಾಶಾ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಜದಾವ್​ಲಾಲ್ ನಾಥ್ ಇತ್ತೀಚಿಗೆ ಸದನದಲ್ಲೇ ಅಶ್ಲೀಲ ಚಿತ್ರ ವೀಕ್ಷಣೆ ವಿಷಯದ ಬಗ್ಗೆ ಪ್ರಶ್ನೆಯನ್ನು ಎತ್ತಿದರು. ಆದರೆ, ಈ ಬಗ್ಗೆ ಚರ್ಚೆಗೆ ಅವಕಾಶ ನೀಡದ ಸ್ಪೀಕರ್​, ಕೆಲ ಪ್ರಮುಖ ವಿಷಯಗಳ ಚರ್ಚೆ ನಂತರ ತಮ್ಮ ಬಳಿಗೆ ಹಿಂತಿರುಗಿ ಎಂದು ಸೂಚಿಸಿದರು. ಇದರಿಂದ ಪ್ರತಿಪಕ್ಷಗಳ ಶಾಸಕರು ಘೋಷಣೆಗಳನ್ನು ಕೂಗಲು ಆರಂಭಿಸಿದರು.

ಅಲ್ಲದೇ, ಸದನದ ಬಾವಿಗೆ ಇಳಿದು ಶಾಸಕರು ಗದ್ದಲ ಸೃಷ್ಟಿಸಿದರು. ಮಹಿಳಾ ಶಾಸಕರು ಸೇರಿ ಮೇಜುಗಳನ್ನು ಕುಟುತ್ತಾ ಹಾಗೂ ಮೇಜುಗಳ ಮೇಲೆ ಹತ್ತಿ ಕೋಲಾಹಲ ಉಂಟು ಮಾಡಿದರು. ಹೀಗಾಗಿ ಇಡೀ ಕಲಾಪವು ಗೊಂದಲದ ಗೂಡಾಗಿ ರಣಾಂಗಣವಾಗಿ ಮಾರ್ಪಟ್ಟಿತು. ಅಷ್ಟೇ ಅಲ್ಲ, ಸ್ಪೀಕರ್​ ಪೀಠದತ್ತ ಕೂಡ ಶಾಸಕರು ನುಗ್ಗಲು ಯತ್ನಿಸಿದರು. ಈ ವೇಳೆ, ವಿಧಾನಸಭೆಯ ಸಿಬ್ಬಂದಿ ಸ್ಪೀಕರ್​ ಪೀಠದ ಬಳಿ ಭದ್ರತಾ ಕಲ್ಪಿಸಿ ಪೀಠದತ್ತ ತೆರಳದಂತೆ ತಡೆದರು.

ಸದನದಲ್ಲಿ ಶಾಸಕರ ವರ್ತನೆಯನ್ನು ಸ್ಪೀಕರ್​ ಬಿಸ್ವಬಂಧ್ ಸೇನ್ ಖಂಡಿಸಿದರು. ಅಲ್ಲದೇ, ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ತಿಪ್ರಾ ಮೋಥಾ ಪಕ್ಷದ ಮೂವರು ಹಾಗೂ ಸಿಪಿಐ(ಎಂ) ಮತ್ತು ಕಾಂಗ್ರೆಸ್​ ಪಕ್ಷದ ತಲಾ ಇಬ್ಬರು ಸೇರಿ ಐವರು ಶಾಸಕರನ್ನು ವಿಧಾನಸಭೆಯಿಂದ ಅಮಾನತುಗೊಳಿಸಿದರು. ತಿಪ್ರಾ ಮೋಥಾ ಪಕ್ಷದ ಬ್ರಿಸ್ವಕೇತು ದೆಬ್ಬರ್ಮಾ, ನಂದಿತಾ ರಿಯಾಂಗ್ ಮತ್ತು ರಂಜಿತ್ ದೆಬ್ಬರ್ಮಾ ಹಾಗೂ ಸಿಪಿಐ(ಎಂ) ಶಾಸಕ ನಯನ್ ಸರ್ಕಾರ್, ಕಾಂಗ್ರೆಸ್‌ನ ಸುದೀಪ್ ರಾಯ್ ಬರ್ಮನ್ ಅವರನ್ನು ಸ್ಪೀಕರ್​ ಒಂದು ದಿನದ ಮಟ್ಟಿಗೆ ಅಮಾನತು ಮಾಡಿದರು. ಆದರೆ, ಸ್ಪೀಕರ್ ಅವರ ನಿರ್ಧಾರ ವಿರೋಧಿಸಿ ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದರು.

ಇನ್ನು, ಸದನದೊಳಗೆ ಕುಳಿತುಕೊಂಡೇ ಬಿಜೆಪಿ ಶಾಸಕ ಜದಾವ್​ಲಾಲ್ ನಾಥ್ ತಮ್ಮ ಮೊಬೈಲ್​ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದಾಗಲೇ ಸಿಕ್ಕಿ ಬಿದ್ದಿದ್ದರು. ಇದರ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಶಾಸಕ ಅಶ್ಲೀಲ ಚಿತ್ರ ವೀಕ್ಷಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಇದನ್ನೂ ಓದಿ: ತ್ರಿಪುರಾ ವಿಧಾನಸಭೆಯಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿದ ಬಿಜೆಪಿ ಶಾಸಕ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.