ETV Bharat / bharat

ತಿಹಾರ್​ ಜೈಲಿನಲ್ಲಿ ಐವರು ಕೈದಿಗಳಿಂದ ಸಾಮೂಹಿಕ ಆತ್ಮಹತ್ಯೆ ಯತ್ನ.. ಜೈಲಾಡಳಿತಕ್ಕೆ ಅಚ್ಚರಿ! - ದೆಹಲಿ ಸುದ್ದಿ

ಐವರು ಕೈದಿಗಳು ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿರುವುದು ಘಟನೆ ದೆಹಲಿಯ ತಿಹಾರ್ ಜೈಲಿನಲ್ಲಿ ನಡೆದಿದ್ದು, ಇದರಿಂದ ಜೈಲಿನ ಆಡಳಿತಕ್ಕೂ ಅಚ್ಚರಿ ಮೂಡಿಸಿದೆ.

five prisoners attempt suicide in tihar jail  five prisoners attempt suicide in delhi  tihar jail prisoners news  ತಿಹಾರ್ ಜೈಲಿನಲ್ಲಿ ಕೈದಿಗಳು ಸಾಮೂಹಿಕ ಆತ್ಮಹತ್ಯೆಗೆ ಯತ್ನ  ದೆಹಲಿಯಲ್ಲಿ ಕೈದಿಗಳು ಸಾಮೂಹಿಕ ಆತ್ಮಹತ್ಯೆಗೆ ಯತ್ನ  ದೆಹಲಿ ಸುದ್ದಿ  ತಿಹಾರ್​ ಜೈಲಿನ ಕೈದಿಗಳ ಸುದ್ದಿ
ತಿಹಾರ್​ ಜೈಲಿನಲ್ಲಿ ಐವರು ಕೈದಿಗಳು ಸಾಮೂಹಿಕ ಆತ್ಮಹತ್ಯೆಗೆ ಯತ್ನ
author img

By

Published : Jan 6, 2022, 10:28 AM IST

ನವದೆಹಲಿ: ದೆಹಲಿಯ ತಿಹಾರ್ ಜೈಲಿನಿಂದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. 5 ಕೈದಿಗಳು ಹರಿತವಾದ ಆಯುಧಗಳಿಂದ ತಮ್ಮನ್ನು ತಾವೇ ಗಾಯಗೊಳಿಸಿಕೊಂಡು ಬಳಿಕ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜೈಲು ಸಂಖ್ಯೆ 3 ರಲ್ಲಿ ನಡೆದಿದೆ.

five prisoners attempt suicide in tihar jail  five prisoners attempt suicide in delhi  tihar jail prisoners news  ತಿಹಾರ್ ಜೈಲಿನಲ್ಲಿ ಕೈದಿಗಳು ಸಾಮೂಹಿಕ ಆತ್ಮಹತ್ಯೆಗೆ ಯತ್ನ  ದೆಹಲಿಯಲ್ಲಿ ಕೈದಿಗಳು ಸಾಮೂಹಿಕ ಆತ್ಮಹತ್ಯೆಗೆ ಯತ್ನ  ದೆಹಲಿ ಸುದ್ದಿ  ತಿಹಾರ್​ ಜೈಲಿನ ಕೈದಿಗಳ ಸುದ್ದಿ
ತಿಹಾರ್​ ಜೈಲಿನಲ್ಲಿ ಐವರು ಕೈದಿಗಳು ಸಾಮೂಹಿಕ ಆತ್ಮಹತ್ಯೆಗೆ ಯತ್ನ

ಮಾಹಿತಿ ಪ್ರಕಾರ, ಜನವರಿ 3 ರಂದು ತಿಹಾರ್ ಜೈಲಿನಲ್ಲಿ ಈ ಘಟನೆ ನಡೆದಿದೆ. ಮೂರನೇ ಜೈಲಿನಲ್ಲಿದ್ದ ಐವರು ಕೈದಿಗಳು ಒಟ್ಟಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮೊದಲು ಹರಿತವಾದ ಆಯುಧದಿಂದ ಗಾಯ ಮಾಡಿಕೊಂಡು ತಮ್ಮ ವಾರ್ಡ್​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಓದಿ: ಹೆಂಡತಿಗೆ ವಾರಕ್ಕೊಮ್ಮೆ ಹೋಟೆಲ್ ಊಟ ತಿನ್ನುವ ಆಸೆ: ಕೊಡಿಸದ ಗಂಡ, 2 ಮಕ್ಕಳ ಜೊತೆ ಆತ್ಮಹತ್ಯೆಗೆ ಶರಣಾದ ಪತ್ನಿ

ಇದನ್ನು ತಕ್ಷಣ ಅಲ್ಲಿದ್ದ ಸಿಬ್ಬಂದಿ ಗಮನಿಸಿ ಗಲಾಟೆ ಮಾಡುತ್ತಿದ್ದ ಕೈದಿಗಳನ್ನು ಹಿಡಿದಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡ ಕೈದಿಗಳನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲೊಬ್ಬ ಕೈದಿಯ ಸ್ಥಿತಿ ಗಂಭೀರವಾಗಿರುವುದರಿಂದ ದೀನದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಏಕಕಾಲಕ್ಕೆ ಐವರು ಕೈದಿಗಳು ಆತ್ಮಹತ್ಯೆಗೆ ಯತ್ನಿಸಿರುವುದು ಜೈಲು ಆಡಳಿತಕ್ಕೂ ಅಚ್ಚರಿ ಮೂಡಿಸಿದೆ. 5 ಕೈದಿಗಳಿಗೆ ಗಾಯಗಳಾಗಿವೆ. ಸಾಮೂಹಿಕವಾಗಿ ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.