ETV Bharat / bharat

ಜಾರ್ಖಂಡ್‌: ಕಾಲುವೆಗೆ ಬಿದ್ದ ವಾಹನ; ಒಂದೇ ಕುಟುಂಬದ 5 ಮಂದಿ ಸಾವು - ಶರತ್​ ಪೊಲೀಸ್​ ಠಾಣಾ ವ್ಯಾಪ್ತಿ

ಜಾರ್ಖಂಡ್‌ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಗಾಯಾಳು ಚಾಲಕನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.

Borello fall into canal in Deoghar
ಕಾಲುವೆಗೆ ಬಿದ್ದ ಬೊರೆಲೋ ವಾಹನ
author img

By ETV Bharat Karnataka Team

Published : Oct 24, 2023, 3:43 PM IST

ದಿಯೋಘರ್ (ಜಾರ್ಖಂಡ್​)​: ಬೊಲೆರೊ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದು ಒಂದೇ ಕುಟುಂಬದ ಐವರು ಸಾವನ್ನಪ್ಪಿ, ಒಬ್ಬ ಗಾಯಗೊಂಡಿರುವ ಘಟನೆ ದಿಯೋಘರ್​ ಜಿಲ್ಲೆಯ ಶರತ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಸಿಕಾಟಿಯಾ ಬ್ಯಾರೇಜ್​ ಕಾಲುವೆಗೆ ವಾಹನ ಬಿದ್ದಿದೆ. ಮೃತರಲ್ಲಿ ಇಬ್ಬರು ಮಕ್ಕಳಿದ್ದಾರೆ.

ದುಮ್ದುಮಿಯ ಅಸನ್ಸೋಲ್​ ಎಂಬಲ್ಲಿನ ನಿವಾಸಿ ಮನೋಜ್​ ಚೌಧರಿ ಅವರ ಪುತ್ರಿ ಲವ್ಲಿ ಕುಮಾರಿ ತಮ್ಮ ಪತಿ, ಸಹೋದರ ಹಾಗೂ ಇಬ್ಬರು ಮಕ್ಕಳೊಂದಿಗೆ ಗಿರಿದಿಹ್​ನ ಬನ್ಸ್​ದಿಹ್​ನಲ್ಲಿರುವ ತಮ್ಮ ಅತ್ತೆಯ ಮನೆಗೆ ಹೋಗುತ್ತಿದ್ದರು. ಸಿಕಾಟಿಯಾ ಬ್ಯಾರೇಜ್​ ಬಳಿ ಚಾಲಕನ ನಿಯಂತ್ರಣ ತಪ್ಪಿದ ವಾಹನ ಕಾಲುವೆಗೆ ಬಿದ್ದಿದೆ.

ಸ್ಥಳೀಯರ ನೆರವಿನಿಂದ ನೀರಿನಿಂದ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಘಟನೆಯ ಬಗ್ಗೆ ಶರತ್​ ಪೊಲೀಸ್​ ಠಾಣೆಗೆ ಮಾಹಿತಿ ನೀಡಲಾಗಿದ್ದು, ಪ್ರಭಾರಿ ಶೈಲೇಶ್​ ಕುಮಾರ್​ ಹಾಗೂ ಎಸ್​ಡಿಪಿಒ ವೀರೇಂದ್ರ ಕುಮಾರ್​ ಬಂಕಾ ಸ್ಥಳಕ್ಕೆ ಭೇಟಿ ನೀಡಿದರು.

ಎಸ್​ಡಿಪಿಒ ವಿರೇಂದ್ರ ಕುಮಾರ್​ ಬಂಕಾ ಮಾಧ್ಯಮಗಳ ಜತೆ ಮಾತನಾಡಿ, ಲವ್ಲಿ ಕುಮಾರಿ ತನ್ನ ಪತಿ, ಸಹೋದರ ಹಾಗೂ ಇಬ್ಬರು ಮಕ್ಕಳೊಂದಿಗೆ, ದಶಮಿ ತಿಥಿ ಆಚರಣೆಗೆ ಚಿತ್ರಾ ಪ್ರದೇಶದ ಫತೇಪುರ್​ ಗ್ರಾಮದಿಂದ ಗಿರಿದಿಹ್​ ಜಿಲ್ಲೆಯ ಸಖೋ ಬನ್ಸ್​ಡಿಹ್​ಗೆ ಬೊಲೆರೊ ವಾಹನದಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಲವ್ಲಿ ಕುಮಾರಿ, ಪತಿ ಮುಕೇಶ್​ ರೈ, ಸಹೋದರ, ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಗ್ರಾಮಸ್ಥರು ಚಾಲಕ ಗೌತಮ್​ ಕುಮಾರ್​ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಸ್ಲೀಪರ್ ಕೋಚ್ ಬಸ್ ಪಲ್ಟಿ: ಪ್ರಯಾಣಿಕರಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.