ಜಮ್ಮು: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಭದರ್ವಾಹ್ ಪಟ್ಟಣದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಪತಿ ಮತ್ತು ಪತ್ನಿ, ತಾಯಿ ಮತ್ತು ಮಗ ಸೇರಿದಂತೆ ಐವರು ಸಾವನ್ನಪ್ಪಿದ್ದು, ಒಬ್ಬರು ನಾಪತ್ತೆಯಾಗಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ.
ದೋಡಾದ ಗಿಲ್ಗುಂದರ್ ಸೇತುವೆ ಬಳಿ ಕಾರೊಂದು ಆಳವಾದ ಚರಂಡಿಗೆ ಬಿದ್ದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಅಪಘಾತ ಸಂಭವಿಸಿದ ಕೂಡಲೇ ಪೊಲೀಸರು ಹಾಗೂ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಗಾಯಾಳುಗಳನ್ನು ಚರಂಡಿಯಿಂದ ಹೊರತೆಗೆದು ತಕ್ಷಣ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಮೃತರನ್ನು ಶಿವನಗರದ ನಿವಾಸಿಗಳಾದ ನಸೀಬ್ ಸಿಂಗ್ ಅವರ ಪತ್ನಿ ಸತ್ಯದೇವಿ, ಅವರ ಪುತ್ರ ವಿಕ್ರಮ್ ಸಿಂಗ್, ಲಕ್ಷ್ ರಾಜ್ ಮತ್ತು ಅವರ ಪತ್ನಿ ಸತೀಶಾ ದೇವಿ ಎಂದು ಗುರುತಿಸಲಾಗಿದ್ದು, ಗಾಯಗೊಂಡವರನ್ನು ನಸೀಬ್ ಸಿಂಗ್ ಎಂದು ಗುರುತಿಸಲಾಗಿದೆ.
ಎರಡನೇ ಅಪಘಾತದಲ್ಲಿ ಸೇತುವೆ ದೋಡಾದಿಂದ ಭದೇರ್ವಾಹ್ ಕಡೆಗೆ ಹೋಗುತ್ತಿದ್ದ ವಾಹನವು ಮೊಘಲ್ ಮಾರ್ಕೆಟ್ ಪರ್ನು ಎಂಬಲ್ಲಿ ರಸ್ತೆಯಿಂದ ಉರುಳಿ ಧರೆಗೆ ಧುಮುಕಿದೆ. ಈ ಅವಘಡದಲ್ಲಿ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೃತರನ್ನು ಭದರ್ವಾಹ ನಿವಾಸಿ ಸಜ್ಜದ್ ಅಹ್ಮದ್ ಎಂದು ಗುರುತಿಸಲಾಗಿದ್ದು, ಗಾಯಗೊಂಡವರನ್ನು ಹಮೋತ್ ಭದರ್ವಾಹ ನಿವಾಸಿ ಆರ್. ಕುಮಾರ್ ಅವರ ಪುತ್ರ ಪಿಯೂಷ್ ಮಿನ್ಹಾಸ್ ಎಂದು ಗುರುತಿಸಲಾಗಿದೆ. ಈ ವಾಹನದ ಚಾಲಕ ರವೀಂದರ್ ಕುಮಾರ್ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದರು.
ಓದಿ: ಅಯೋಧ್ಯಾ ದೀಪೋತ್ಸವದಲ್ಲಿ ಬೆಳಗಲಿವೆ 18 ಲಕ್ಷ ಹಣತೆ: ದಾಖಲಾಗಲಿದೆ ಹೊಸ ಗಿನ್ನೆಸ್ ರೆಕಾರ್ಡ್