ಫಿರೋಜಾಬಾದ್: ಆಲೂಗಡ್ಡೆ ತುಂಬಿದ ವಾಹನ ಪಂಕ್ಚರ್ ಆಗಿ ರಸ್ತೆ ಬದಿಯಲ್ಲಿ ನಿಂತಿತ್ತು. ಕಂಟೈನರ್ ಚಾಲಕ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನಿತರು ಗಾಯಗೊಂಡಿದ್ದಾರೆ. ಈ ಘಟನೆ ಜಿಲ್ಲೆಯ ತುಂಡ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಏನಿದು ಘಟನೆ: ತುಂಡ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾದು ಹೋಗುವ ಆಗ್ರಾ - ಕಾನ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಬುಧವಾರ ಬೆಳಗ್ಗೆ 2.30ರ ಸುಮಾರಿಗೆ ಆಲೂಗಡ್ಡೆ ತುಂಬಿದ ಲೋಡರ್ ವಾಹನ ಫಿರೋಜಾಬಾದ್‌ನ ಜಸ್ರಾನಾದಿಂದ ಆಗ್ರಾಕ್ಕೆ ಹೋಗುತ್ತಿತ್ತು. ಅದರಲ್ಲಿ ಅನೇಕ ಜನರು ಪ್ರಯಾಣಿಸುತ್ತಿದ್ದರು. ಮಾರ್ಗಮಧ್ಯೆ ಕಾರು ಪಂಕ್ಚರ್ ಆಗಿದ್ದು, ಟೋಲ್ ಪ್ಲಾಜಾ ಬಳಿಯಿರುವ ಪಂಕ್ಚರ್ ಅಂಗಡಿಯಲ್ಲಿ ವಾಹನವನ್ನು ನಿಲ್ಲಿಸಿದ್ದಾನೆ.
ಓದಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ: ಮಾಜಿ ಸಿಎಂ ಬಿಎಸ್ವೈ ಸ್ಪಷ್ಟನೆ
ಶಾಪ್ ಮಾಲೀಕ ಮೊಹಮ್ಮದ್ ಪಂಕ್ಚರ್ ತೆಗೆಯಲು ಕಾರ್ಯ ಆರಂಭಿಸಿದ್ದಾರೆ. ಅಷ್ಟೋತ್ತಿಗಾಗಲೇ ಲೋಡರ್ ವಾಹನಕ್ಕೆ ಅನಿಯಂತ್ರಿತ ಕಂಟೈನರ್ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಲೋಡರ್ ಪಲ್ಟಿಯಾಗಿದೆ. ಪರಿಣಾಮ ಐವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು.
ಘಟನೆ ಕುರಿತು ಮಾಹಿತಿ ಪಡೆದ ತುಂಡ್ಲಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪೊಲೀಸರು ಲೋಡರ್‌ನಲ್ಲಿ ಸಿಲುಕಿದ್ದ ಎಲ್ಲರನ್ನೂ ಹೊರ ತೆಗೆದು ಜಿಲ್ಲಾಸ್ಪತ್ರೆಗೆ ಸಾಗಿಸಿದರು. ಈ ವೇಳೆ, ಐವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಓದಿ: ಮದುವೆ ಸಮಾರಂಭದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಮಾಜಿ ಸೈನಿಕ.. ಆತಂಕಕ್ಕೊಳಗಾದ ಜನ!
ಅಪಘಾತದಲ್ಲಿ ಮೂವರು ಮೃತರನ್ನು ಗುರುತಿಸಲಾಗಿದ್ದು, ಇದರಲ್ಲಿ ಪಂಕ್ಚರ್ ಶಾಪ್ ಮಾಲೀಕ ಮೊಹಮ್ಮದ್ ಕೂಡ ಸೇರಿದ್ದಾರೆ. ಇನ್ನಿಬ್ಬರು ಜಸ್ರಾನಾ ನಿವಾಸಿಗಳಾದ ರಾಮ್ ಬಹದ್ದೂರ್ ಅಲಿಯಾಸ್ ಛೋಟು ಪುತ್ರ ವೀರಪಾಲ್, ರಾಹುಲ್ ಪುತ್ರ ಸತ್ಯರಾಮ್ ನಾಗಲಾ ಕನ್ಹಯ್ಯ ಎಂದು ಗುರುತಿಸಲಾಗಿದೆ.
ಲೋಡರ್ ಮಾಲೀಕ ರಾಜಕುಮಾರ್ ಮಗ ಹರದಯಾಳ್ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆಗಾಗಿ ಆಗ್ರಾಕ್ಕೆ ಕಳುಹಿಸಲಾಗಿದೆ. ಅಪಘಾತದ ನಂತರ ಮೃತರ ಕುಟುಂಬಗಳು ಆಕ್ರೋಶ ವ್ಯಕ್ತಪಡಿಸಿವೆ. ಕಂಟೈನರ್ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ತಲೆಮರೆಸಿಕೊಂಡಿರುವ ಚಾಲಕ ಹಾಗೂ ಸಹಾಯಕನ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಠಾಣೆ ಪ್ರಭಾರಿ ತುಂಡಲ ರಾಜೇಶ್ ಪಾಂಡೆ ತಿಳಿಸಿದ್ದಾರೆ.