ETV Bharat / bharat

ಅಜ್ಮೀರ್- ಜೈಪುರ ಹೆದ್ದಾರಿಯಲ್ಲಿ ಭೀಕರ ಅಪಘಾತ; ಐವರು ಸಜೀವ ದಹನ, ಜಾನುವಾರುಗಳೂ ಸುಟ್ಟು ಕರಕಲು - ಟ್ರಕ್‌ನ ಕ್ಯಾಬಿನ್‌

ಜೈಪುರ ಜಿಲ್ಲೆಯ ದುಡು ಬಳಿಯ ಅಜ್ಮೀರ್​ ಹಾಗೂ ಜೈಪುರ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಐವರು ಸಜೀವ ದಹನವಾಗಿದ್ದಾರೆ ಎಂಬುದು ತಿಳಿದುಬಂದಿದೆ.

ಅಜ್ಮೀರ್ ಜೈಪುರ ಹೆದ್ದಾರಿಯಲ್ಲಿ ಭೀಕರ ಅಪಘಾತ
ಅಜ್ಮೀರ್ ಜೈಪುರ ಹೆದ್ದಾರಿಯಲ್ಲಿ ಭೀಕರ ಅಪಘಾತ
author img

By

Published : Jun 28, 2023, 9:24 PM IST

ಜೈಪುರ: ರಾಜಸ್ಥಾನದ ಜೈಪುರ ಜಿಲ್ಲೆಯ ದುಡು ಬಳಿಯ ಅಜ್ಮೀರ್- ಜೈಪುರ ಹೆದ್ದಾರಿಯಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಸಜೀವ ದಹನವಾಗಿದ್ದಾರೆ. ಅಪಘಾತ ಎಷ್ಟು ಭೀಕರವಾಗಿತ್ತೆಂದರೆ, ಟ್ರಕ್‌ ಕ್ಯಾಬಿನ್‌ನಲ್ಲಿ ಕುಳಿತಿದ್ದ ಚಾಲಕ ಮತ್ತು ಸಹಾಯಕ ಸೇರಿದಂತೆ ಐವರು ಅವಘಡದ ವೇಳೆ ಪಾರಾಗಲೂ ಸಹ ಸಾಧ್ಯವಾಗಿಲ್ಲ. ಗಂಟೆಗಳ ಪರಿಶ್ರಮದ ನಂತರ ಬೆಂಕಿ ನಿಯಂತ್ರಿಸಲಾಗಿದೆ. ಅವಘಡದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಟ್ರಕ್‌ನಲ್ಲಿ ಜಾನುವಾರುಗಳೂ ಸಹ ಇದ್ದವು. ಅವೂ ಸಹ ಬೆಂಕಿಯಿಂದ ಸಾವನ್ನಪ್ಪಿವೆ.

ಮೃತರಲ್ಲಿ ಹರಿಯಾಣದ ಹಂಸಿ ನಿವಾಸಿ ಪವನ್ (28) ಪುತ್ರ ಅಮರ್ ಸಿಂಗ್, ಸಂಜಯ್ (18) ಪುತ್ರ ಜಿಲೆ ಸಿಂಗ್, ಧರಂವೀರ್ (34) ಪುತ್ರ ಭಲೇರಾಮ್ ಯಾದವ್, ಬಿಹಾರದ ಛಾಪ್ರಾ ನಿವಾಸಿ ಜಾನ್ವಿಜಯ್ (35) ಪುತ್ರ ದೇವನಂದನ್ ಮತ್ತು ಬಿಜ್ಲಿ (26) ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಲಾರಿ ಮಾಲೀಕರೊಂದಿಗೆ ಮಾತನಾಡಿ ಗುರುತು ಪತ್ತೆ : ಅಪಘಾತದಲ್ಲಿ ಐವರೂ ಕೂಡ ಗುರುತು ಹಿಡಿಯಲಾಗದಷ್ಟು ಸುಟ್ಟು ಕರಕಲಾಗಿದ್ದರು. ಇಂತಹ ಸಂದರ್ಭದಲ್ಲಿ ಅವರನ್ನು ಗುರುತಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬೆಂಕಿ ನಂದಿಸಿದ ಬಳಿಕ ಪೊಲೀಸರು ಲಾರಿ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಲಾರಿ ಮಾಲೀಕರನ್ನು ಪತ್ತೆ ಹಚ್ಚಿದ್ದಾರೆ. ಆತನೊಂದಿಗೆ ಮಾತುಕತೆ ನಡೆಸಿದ ಬಳಿಕ ಮೃತರ ಗುರುತು ಪತ್ತೆಯಾಯಿತು. ಟ್ರಕ್‌ನಲ್ಲಿ ಜಾನುವಾರುಗಳನ್ನು ಕೂಡ ತುಂಬಿಸಲಾಗಿತ್ತು, ಅವುಗಳು ಸಹ ಬೆಂಕಿಯಲ್ಲಿ ಸಜೀವ ದಹನವಾಗಿವೆ.

ಅಪಘಾತದ ಬಗ್ಗೆ ಮಾಹಿತಿ ಪಡೆದ ದುಡು ಪೊಲೀಸ್ ಠಾಣೆ ಹಾಗೂ ದುಡು ಎಎಸ್‌ಪಿ ದಿನೇಶ್ ಶರ್ಮಾ, ಜೈಪುರ ಜಿಲ್ಲಾಧಿಕಾರಿ ಪ್ರಕಾಶ್ ರಾಜಪುರೋಹಿತ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಎಫ್‌ಎಸ್‌ಎಲ್‌ ತಂಡವೂ ಘಟನಾ ಸ್ಥಳಕ್ಕೆ ಆಗಮಿಸಿದ್ದು, ಸ್ಥಳದಿಂದ ಸಾಕ್ಷ್ಯ ಸಂಗ್ರಹಿಸಿದೆ. ಈ ವೇಳೆ ಹೆದ್ದಾರಿಯ ಒಂದು ಪಥವನ್ನು ಬಂದ್ ಮಾಡಲಾಗಿದ್ದು, ಎರಡೂ ಕಡೆಯ ವಾಹನಗಳನ್ನು ಇನ್ನೊಂದು ಮಾರ್ಗಕ್ಕೆ ತಿರುಗಿಸಲಾಗಿದೆ. ಇದರಿಂದಾಗಿ ಹಲವು ಬಾರಿ ಜಂಜಾಟದ ಪರಿಸ್ಥಿತಿಯೂ ನಿರ್ಮಾಣವಾಗಿತ್ತು.

ಮೂರೂ ವಾಹನಗಳು ಬೆಂಕಿಗೆ ಆಹುತಿ: "ರಾಮನಗರ ತಿರುವಿನ ಡುಡು ಬಳಿ ಎರಡು ಟ್ರೇಲರ್‌ಗಳು ನಿಂತಿದ್ದವು. ಚಾಲಕ ಮತ್ತು ಸಹಾಯಕ ಇಬ್ಬರು ಅದರ ಬಳಿ ಚಹಾ ಕುಡಿಯುತ್ತ ಕುಳಿತಿದ್ದರು. ಈ ವೇಳೆ ಜೈಪುರದಿಂದ ವೇಗವಾಗಿ ಬಂದ ಟ್ರಕ್ ರಸ್ತೆ ಬದಿ ನಿಂತಿದ್ದ ಎರಡು ಟ್ರೇಲರ್‌ಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೂರೂ ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಅಪಘಾತದ ನಂತರ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಯಿತು. ಜನರು ಪೊಲೀಸ್ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರು ಹಾಗೂ ಪೊಲೀಸರ ನೆರವಿನಿಂದ ಹಲವು ಗಂಟೆಗಳ ಪರಿಶ್ರಮದ ಬಳಿಕ ಬೆಂಕಿಯನ್ನು ಹತೋಟಿಗೆ ತಂದರು" ಎಂದು ದುಡು ಎಎಸ್ಪಿ ದಿನೇಶ್ ಶರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ: ಒಡಿಶಾದಲ್ಲಿ ಮದುವೆ ಮೆರವಣಿಗೆಗೆ ಟ್ರಕ್ ನುಗ್ಗಿ 6 ಮಂದಿ ದಾರುಣ ಸಾವು: 6 ಜನರ ಸ್ಥಿತಿ ಗಂಭೀರ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.