ನಾರಾಯಣಪುರ(ಛತ್ತೀಸ್ಗಡ): ರಾಜ್ಯದ ಸೋನ್‌ಪುರ ಎಂಬಲ್ಲಿ ನಡೆದಿದ್ದ ಭೀಕರ ಸ್ಫೋಟ ಪ್ರಕರಣ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಐವರು ನಕ್ಸಲರನ್ನು ನಾರಾಯಣಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸುಖ್ರಾಮ್ ಕುಮೆತಿ, ನರಸಿಂಗ್ ಪೊಯಮ್, ಸಿಬೊರಮ್ ಪೊಯಮ್, ಗೊಂಚುರಾಮ್ ಪೊಯಮ್ ಮತ್ತು ಮಂಗ್ಲುರಾಮ್ ಪೊಯಮ್ ಎಂದು ಗುರುತಿಸಲಾಗಿದೆ.
4 ದಿನದಲ್ಲಿ 15 ನಕ್ಸಲರು ಅರೆಸ್ಟ್
ಈ ಕುರಿತು ಮಾಹಿತಿ ನೀಡಿದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ನೀರಜ್ ಚಂದ್ರಕರ್, ಕಳೆದ ನಾಲ್ಕು ದಿನಗಳಲ್ಲಿ 15 ಮಂದಿ ನಕ್ಸಲರನ್ನು ಬಂಧಿಸಲಾಗಿದೆ. ಇವರೆಲ್ಲರೂ ಐಇಡಿ ಸ್ಫೋಟದಲ್ಲಿ ಭಾಗಿಯಾಗಿದ್ದಾರೆ. ಇಂಡೋ-ಟಿಬೇಟಿಯನ್ ಬಾರ್ಡರ್ನ ಪೊಲೀಸ್(ಐಟಿಬಿಪಿ) ಸಿಬ್ಬಂದಿ ಇವರು ನಡೆಸಿದ ದುಷ್ಕೃತ್ಯದಲ್ಲಿ ಪ್ರಾಣ ಕಳೆದುಕೊಂಡಿದ್ದರು. ಈ ಎಲ್ಲಾ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಛತ್ತೀಸ್ಗಡ ನಕ್ಸಲ್ ದಾಳಿ: ಕೃತ್ಯದ ರೂವಾರಿ ಹಿಡ್ಮಾ ಹಿನ್ನೆಲೆ ಗೊತ್ತಾ?
ಇದೇ ರೀತಿ ಮತ್ತೊಂದು ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ಮುರಲಿ ಟತಿ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದ ಬಿಜಾಪುರ ಜಿಲ್ಲೆಯ ನಕ್ಸಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಬಿಜಾಪುರ ನಿವಾಸಿ ಸುಖ್ರಾಮ್ ಅಲಿಯಾಸ್ ಪಾಂಡು (22) ಎಂದು ಗುರುತಿಸಲಾಗಿದೆ.