ವಿಶಾಖಪಟ್ಟಣಂ : ಆಂಧ್ರಪ್ರದೇಶ ಪೊಲೀಸರಿಗೆ ಮತ್ತೆ ಐವರು ಮಾವೋವಾದಿಗಳು ಶರಣಾಗಿದ್ದು, ಒಂದು ತಿಂಗಳಲ್ಲಿ 13 ನಕ್ಸಲರು ಸರೆಂಡರ್ ಆದಂತಾಗಿದೆ.
ಆಂಧ್ರದ ವಿಶಾಖಪಟ್ಟಣಂನ ಚಿಂತಪಲ್ಲಿ ಪ್ರದೇಶದ ಮತ್ಸ್ಯರಾಜು, ಸನ್ಯಾಸಿ ರಾವ್, ಹರಿ, ಭಗತ್ ರಾಮ್ ಮತ್ತು ಪೂರ್ಣಚಂದರ್ ಶರಣಾದ ನಕ್ಸಲರಾಗಿದ್ದಾರೆ ಎಂದು ಚಿಂತಪಲ್ಲಿ ಎಎಸ್ಪಿ ವಿದ್ಯಾಸಾಗರ್ ನಾಯ್ಡು ತಿಳಿಸಿದ್ದಾರೆ.
ಇವರು ಸರ್ಕಾರ ನೀಡುವ ಸೌಲಭ್ಯಗಳಿಗೆ, ಯೋಜನೆಗಳಿಗೆ ಆಕರ್ಷಿತರಾಗಿ ಸರೆಂಡರ್ ಆಗುತ್ತಿದ್ದಾರೆ. ಸಾಮಾನ್ಯ ಜೀವನ ನಡೆಸಲು ಮುಂದಾಗುತ್ತಿದ್ದಾರೆ ಎಂದು ವಿದ್ಯಾಸಾಗರ್ ಹೇಳಿದ್ದಾರೆ.