ನಂದೂರ್ಬಾರ್(ಮಹಾರಾಷ್ಟ್ರ): ಎರಡು ಬೈಕ್ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಐವರು ಮೃತಪಟ್ಟಿರುವ ಘಟನೆ ನಂದೂರ್ಬಾರ್ - ತಲೋಡಾ ತಾಲೂಕು ರಸ್ತೆಯಲ್ಲಿ ನಡೆದಿದೆ. ತುಲಾಜಾ ಮೂಲದ ಮೂವರು ಹಾಗೂ ತಲೋಡಾ ಮೂಲದ ಇಬ್ಬರು ಮೃತಪಟ್ಟಿದ್ದಾರೆ.
![Etv - Bharat.html](https://etvbharatimages.akamaized.net/etvbharat/prod-images/12391796_dfd.jpg)
ಮೃತರನ್ನು ದಾರಾಸಿಂಗ್ ಜಬೋರ್ (48), ಮದನ್ ದೀಪಾವಳಿ ನಾಯಕ್ (50), ಅಮಿತ್ ಮಗನ್ ನಾಯಕ್(10), ಉಮೇಶ್ ಶಾಂತಿಲಾಲ್ ಚವಾನ್, ಸುನಂದ ಚವಾನ್ ಪೂಜಾ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಯಮಸ್ವರೂಪಿ ಡಂಪರ್ ವಾಹನ: ಫುಟ್ಪಾತ್ ಮೇಲೆ ಮಲಗಿದ್ದ ಮೂವರು ಮಕ್ಕಳು ಸೇರಿ ಐವರು ದುರ್ಮರಣ
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.