ETV Bharat / bharat

ಬಿಹಾರದಲ್ಲಿ ಸಿಲಿಂಡರ್​ ಸ್ಫೋಟ.. ಒಂದೇ ಕುಟುಂಬದ ಐವರು ಮಕ್ಕಳು ಸಜೀವದಹನ - ಸಿಲಿಂಡರ್​​ ಸ್ಫೋಟಕ್ಕೆ ಐವರು ಮಕ್ಕಳು ದುರ್ಮರಣ

Cylinder Blast in Bihar: ಸಿಲಿಂಡರ್​ ಸ್ಫೋಟಗೊಂಡಿರುವ ಪರಿಣಾಮ ಒಂದೇ ಕುಟುಂಬದ ಐವರು ಮಕ್ಕಳು ದುರ್ಮರಣಕ್ಕೀಡಾಗಿದ್ದಾರೆ. ಬಿಹಾರದಲ್ಲಿ ಈ ದುರ್ಘಟನೆ ಸಂಭವಿಸಿದೆ.

FIVE CHILDRENS DEAD DUE TO CYLINDER BLAST

author img

By

Published : Dec 28, 2021, 8:35 PM IST

Updated : Dec 28, 2021, 10:28 PM IST

ಬಂಕಾ(ಬಿಹಾರ): ಬಿಹಾರದ ಬಂಕಾ ಜಿಲ್ಲೆಯ ರಾಜಾವರ್​ ಗ್ರಾಮದಲ್ಲಿ ಸಿಲಿಂಡರ್​ ಸ್ಫೋಟಗೊಂಡ ಪರಿಣಾಮ ಒಂದೇ ಕುಟುಂಬದ ಐವರು ಮಕ್ಕಳು ಸಜೀವ ದಹನವಾಗಿದ್ದಾರೆ. ಮಕ್ಕಳು ಸಾವನ್ನಪ್ಪಿರುವ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಘಟನೆಯಲ್ಲಿ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಡುಗೆ ಮಾಡುವ ಸಂದರ್ಭದಲ್ಲಿ ಗ್ಯಾಸ್ ಏಕಾಏಕಿಯಾಗಿ ಸ್ಫೋಟಗೊಂಡಿರುವ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯಲ್ಲಿ ಆಟವಾಡುತ್ತಿದ್ದ ಐವರು ಮಕ್ಕಳು ದುರ್ಮರಣಕ್ಕೀಡಾಗಿವೆ. ಮೃತರನ್ನ ಅಂಕುಶ್ ಕುಮಾರ್​(12), ಅಂಶು ಕುಮಾರಿ(8), ಸೀಮಾ ಕುಮಾರಿ(4), ಶಿವಾನಿ(6) ಮತ್ತು ಸೋನಿ(3) ಎಂದು ಗುರುತಿಸಲಾಗಿದೆ.

ಛೋಟಾ ಪಾಸ್ವಾನ್​​ ಅವರ ಪತ್ನಿ ಗ್ಯಾಸ್​ ಮೇಲೆ ಅಡುಗೆ ಮಾಡಲು ಇಟ್ಟು ಯಾವುದೋ ಕೆಲಸದ ನಿಮಿತ್ತ ಮನೆಯಿಂದ ಹೊರಗಡೆ ಹೋಗಿದ್ದರು. ಇದೇ ವೇಳೆ ಸಿಲಿಂಡರ್​​ ಸ್ಫೋಟಗೊಂಡಿದೆ. ಸಿಲಿಂಡರ್​​ ಸ್ಫೋಟದ ರಭಸಕ್ಕೆ ಐವರು ಮಕ್ಕಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಮತ್ತಿಬ್ಬರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಇದನ್ನೂ ಓದಿರಿ: ED ಬಲೆಗೆ ಬಿದ್ದ ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್​ ಮಾಜಿ ಅಧ್ಯಕ್ಷ: 293 ಕೋಟಿ ರೂ. ಆಸ್ತಿ ವಶಕ್ಕೆ

ಘಟನಾ ಸ್ಥಳಕ್ಕೆ ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿದ್ದಾರೆ. ರಕ್ಷಣಾ ಕಾರ್ಯದಲ್ಲಿ ಪೊಲೀಸ್, ಮತ್ತು ಅಗ್ನಿಶಾಮಕ ಸಿಬ್ಬಂದಿ ತೊಡಗಿದ್ದಾಗಿ ತಿಳಿದುಬಂದಿದೆ.

Last Updated : Dec 28, 2021, 10:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.