ETV Bharat / bharat

ಖುಲಾಯಿಸಿದ ಅದೃಷ್ಟ... ಮೀನುಗಾರನನ್ನು ಕೋಟ್ಯಧಿಪತಿಯನ್ನಾಗಿಸಿದ ಅಪರೂಪದ ಮೀನು! - ಮಹಾರಾಷ್ಟ್ರದ ಮೀನುಗಾರ ಕೋಟ್ಯಧಿಪತಿ

ಪಾಲ್ಗಾರ್​ ಜಿಲ್ಲೆಯ ಮೀನುಗಾರನೋರ್ವ ಹಿಡಿದಿರುವ ಅಪರೂಪದ ಮೀನುಗಳು ಆತನನ್ನ ಕೋಟ್ಯಧಿಪತಿಯನ್ನಾಗಿ ಮಾಡಿಸಿವೆ.

Fisherman from palghar caught 150 ghol fish earns crores
ಮೀನುಗಾರನಿಗೆ ಕೋಟ್ಯಧಿಪತಿಯನ್ನಾಗಿಸಿದ ಅಪರೂಪದ ಮೀನು!
author img

By

Published : Sep 2, 2021, 2:22 AM IST

Updated : Sep 2, 2021, 3:20 PM IST

ಮುಂಬೈ: ಮೀನುಗಾರನೋರ್ವ ಹಿಡಿದಿರುವ ಅಪರೂಪದ ಮೀನುಗಳಿಗೆ ಇನ್ನಿಲ್ಲದ ಬೆಲೆ ಸಿಕ್ಕಿದ್ದು, ಇದರಿಂದ ಆತ ಒಂದೇ ರಾತ್ರಿಯಲ್ಲಿ ಕೋಟ್ಯಧೀಪತಿಯಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಇದನ್ನೂ ಓದಿ: ಕೇರಳದಲ್ಲಿ ಕೋವಿಡ್ ಹೆಚ್ಚಳ: ಕರ್ನಾಟಕ, ತಮಿಳುನಾಡಿಗೆ ಕೇಂದ್ರ ಆರೋಗ್ಯ ಸಚಿವರ ಎಚ್ಚರಿಕೆ

ಚಂದ್ರಕಾಂತ್​ ತಾರೆ ಪಾಲ್ಗರ್​ ಜಿಲ್ಲೆ ಮುರ್ಬೆ ಗ್ರಾಮದ ಮೀನುಗಾರ. ಪ್ರತಿದಿನ ಸಮುದ್ರಕ್ಕೆ ಇಳಿದು ಮೀನು ಹಿಡಿದು, ಅದರಿಂದ ಬರುವ ಹಣದಿಂದ ತನ್ನ ಜೀವನ ಸಾಗಿಸುತ್ತಿದ್ದನು. ಅದೇ ರೀತಿ ಆಗಸ್ಟ್​​ 28ರಂದು ಸಿಬ್ಬಂದಿ ಜೊತೆ ಮೀನು ಹಿಡಿಯಲು ಸಮುದ್ರಕ್ಕೆ ಇಳಿದಾಗ ಆತನ ಅದೃಷ್ಟ ಖುಲಾಯಿಸಿದೆ.

ಮೀನುಗಾರನನ್ನು ಕೋಟ್ಯಧಿಪತಿಯನ್ನಾಗಿಸಿದ ಅಪರೂಪದ ಮೀನು!

ತನ್ನ ಸಹಚರರೊಂದಿಗೆ 150ಕ್ಕೂ ಅಧಿಕ ಘೋಲ್​ ಮೀನು ಹಿಡಿದಿದ್ದಾನೆ. ಈ ಮೀನುಗಳಿಗೆ ಮಾರುಕಟ್ಟೆಯಲ್ಲಿ ಇನ್ನಿಲ್ಲದ ಬೇಡಿಕೆ ಇದೆ. ಇವುಗಳನ್ನ ಮಾರುಕಟ್ಟೆಗೆ ತೆಗೆದುಕೊಂಡು ಬಂದು ಬಿಡ್​ ಮಾಡಿದಾಗ ಸುಮಾರು 1.33 ಕೋಟಿ ರೂಪಾಯಿಗೆ ಮಾರಾಟವಾಗಿರುವುದಾಗಿ ತಿಳಿದು ಬಂದಿದೆ.

ಘೋಲ್​ ಮೀನು ಸಮುದ್ರದಲ್ಲಿ ಸಿಗುವ ಅತ್ಯಂತ ಅಪರೂಪದ ಹಾಗೂ ದುಬಾರಿ ಮೀನುಗಳಲ್ಲಿ ಒಂದಾಗಿದ್ದು, ಔಷಧೀಯ ಗುಣ ಹೊಂದಿರುವ ಈ ಮೀನುಗಳ ಹೃದಯವನ್ನ ಸೀ ಗೋಲ್ಡ್​ ಎಂದು ಕರೆಯಲಾಗುತ್ತದೆ. ಜೊತೆಗೆ ಅತಿ ಹೆಚ್ಚು ರುಚಿಕರ ಮೀನುಗಳಲ್ಲಿ ಇದು ಒಂದು ಎನ್ನಲಾಗಿದೆ.

Last Updated : Sep 2, 2021, 3:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.