ನವದೆಹಲಿ: ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆ 1,130 ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರು ಭಾನುವಾರ ಮಧುರೈಗೆ ಬಂದಿಳಿದಿದ್ದಾರೆ.
ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆಯ ದಿನಾಂಕ ಘೋಷಣೆಯಾದ ನಂತರ ಮಧುರೈ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಒಂಬತ್ತು ತಂಡಗಳಲ್ಲಿ ಬಿಎಸ್ಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಅಸ್ಸೋಂನಿಂದ ಮಧುರೈ ರೈಲ್ವೆ ನಿಲ್ದಾಣಕ್ಕೆ ಬಂದ ಬಿಎಸ್ಎಫ್ ಸಿಬ್ಬಂದಿಯನ್ನು ಕೂಡಲೇ ಕೋವಿಡ್ -19 ಪರೀಕ್ಷೆಗೆ ಒಳಪಡಿಸಲಾಯಿತು. ನಂತರ ಅವರನ್ನು ಚುನಾವಣಾ ಭದ್ರತೆಗಾಗಿ ವಿವಿಧ ಗುಂಪುಗಳಾಗಿ ವಿಗಂಡಿಸಿ ತೆಂಕಸಿ, ಟುಟಿಕೊರಿನ್ ಮತ್ತು ನಾಗರ್‌ಕೋಯಿಲ್ ಜಿಲ್ಲೆಗಳಿಗೆ ಕಳುಹಿಸಲಾಯಿತು.
ಓದಿ:ಹೇನಿನ ಸಮಸ್ಯೆಯೆ?.. ಈ ಮನೆಮದ್ದುಗಳನ್ನು ಬಳಸಿ..
ತಮಿಳುನಾಡಿನಲ್ಲಿ ನಿಗದಿತ ವಿಧಾನಸಭಾ ಚುನಾವಣೆಯ ಮುನ್ನ, ಮಧುರೈನ ಜಿಲ್ಲಾಧಿಕಾರಿ ಟಿ. ಅನ್ಬಳಗನ್ ಅವರ ನಿವಾಸದಲ್ಲಿ ಶನಿವಾರ ಸರ್ವಪಕ್ಷ ಸಭೆ ನಡೆಯಿತು.
234 ಸದಸ್ಯರ ತಮಿಳುನಾಡು ವಿಧಾನಸಭಾ ಚುನಾವಣೆ ಏಪ್ರಿಲ್ 6 ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಮತ ಎಣಿಕೆ ಮೇ 2 ರಂದು ನಡೆಯಲಿದೆ.