ETV Bharat / bharat

ಬಠಿಂಡಾ ಮಿಲಿಟರಿ ಠಾಣೆ ಮೇಲೆ ದಾಳಿ ಘಟನೆ: ಕರ್ನಾಟಕದ ಇಬ್ಬರು ಸೇರಿ ನಾಲ್ವರು ಯೋಧರು ಸಾವು - ಪಂಜಾಬ್​ನಲ್ಲಿ ಯೋಧರ ಹತ್ಯೆ

ಪಂಜಾಬ್​ನ ಬಠಿಂಡಾದ ಮಿಲಿಟರಿ ಠಾಣೆಯಲ್ಲಿ ಆಗುಂತಕರು ನಡೆಸಿದ ದಾಳಿ ವೇಳೆ ನಾಲ್ವರು ಯೋಧರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.

ಭಟಿಂಡಾ ಮಿಲಿಟರಿ ಠಾಣೆ ಮೇಲೆ ಗುಂಡಿನ ದಾಳಿ
ಭಟಿಂಡಾ ಮಿಲಿಟರಿ ಠಾಣೆ ಮೇಲೆ ಗುಂಡಿನ ದಾಳಿ
author img

By

Published : Apr 12, 2023, 10:50 AM IST

Updated : Apr 13, 2023, 12:44 PM IST

ಬಠಿಂಡಾ (ಪಂಜಾಬ್): ಪಂಜಾಬ್​ನ ಬಠಿಂಡಾ ಮಿಲಿಟರಿ ಠಾಣೆ ಮೇಲೆ ನಡೆದ ದಾಳಿಯಲ್ಲಿ ನಾಲ್ವರು ಯೋಧರು ಸಾವನ್ನಪ್ಪಿದ್ದಾರೆ. ಈ ವೇಳೆ ಹಲವರು ಗಾಯಗೊಂಡಿದ್ದಾರೆ. ತಕ್ಷಣವೇ ಠಾಣೆಗೆ ಭದ್ರತೆ ನೀಡಲಾಗಿದ್ದು, ಸೈನಿಕರು ಇಡೀ ಪ್ರದೇಶವನ್ನು ಸುತ್ತುವರೆದಿದ್ದಾರೆ.

ಇಂದು ಬೆಳಗ್ಗೆ 4.35 ರ ಸುಮಾರಿಗೆ ಠಾಣೆಯ ಮೇಲೆ ಅಪರಿಚಿತರು ದಾಳಿ ನಡೆಸಿದ್ದಾರೆ ಎಂದು ಈ ಮೊದಲು ವರದಿಯಾಗಿತ್ತು. ಆದರೆ ದಾಳಿ ಆಂತರಿಕವಾಗಿ ನಡೆದಿದೆ ಎಂದು ನಂತರ ತಿಳಿದು ಬಂದಿತ್ತು. ಅಪರಿಚಿತರ ದಾಳಿ ವೇಳೆ ನಾಲ್ವರು ಯೋಧರು ಮೃತಪಟ್ಟಿದ್ದಾರೆ. ಈ ವೇಳೆ ಮೃತ ಯೋಧರೆಲ್ಲ ಮಲಗಿದ್ದರು ಎಂದು ತಿಳಿದು ಬಂದಿದೆ. ಘಟನೆ ತಿಳಿದ ತಕ್ಷಣ ಕ್ಷಿಪ್ರ ಕಾರ್ಯಾಚರಣೆಗೆ ಸೇನಾ ಪಡೆಗಳು ಸ್ಥಳಕ್ಕೆ ಆಗಮಿಸಿದ್ದು, ಶೋಧ ಕಾರ್ಯಾಚರಣೆ ಕೈಗೊಂಡಿದ್ದವು. ಠಾಣೆಯ ಮೇಲೆ ದಾಳಿ ಮಾಡಿದವರ ಬಗ್ಗೆ ಪತ್ತೆ ಮಾಡಲಾಗುವುದು ಎಂದು ಸೌತ್ ವೆಸ್ಟರ್ನ್ ಕಮಾಂಡ್​ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಈ ಪ್ರಕರಣದಲ್ಲಿ ಶಂಕಿತನನ್ನು ಬಂಧಿಸಲಾಗಿದೆ. ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ಹಿಂದೆ ಪಂಜಾಬ್ ಪೊಲೀಸರು ಘಟನೆ ಭಯೋತ್ಪಾದಕರ ದಾಳಿಯಲ್ಲ ಎಂದು ಹೇಳಿದ್ದರು. ಗುಂಡು ಹಾರಿಸಿದ ಪಾತಕಿಗಳನ್ನು ಹೆಡೆಮುರಿ ಕಟ್ಟಲಾಗುವುದು ಎಂದು ಸೇನಾಧಿಕಾರಿಗಳು ಹೇಳಿದ್ದಾರೆ. ಬಂಠಿಡಾದಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ.

ಘಟನೆಯಲ್ಲಿ ಕರ್ನಾಟಕದ ಇಬ್ಬರು ಯೋಧರು ಮೃತ: ಮಾಹಿತಿ ಪ್ರಕಾರ ಮೃತ ಯೋಧರಲ್ಲಿ ಕರ್ನಾಟಕದ ಇಬ್ಬರು ಮತ್ತು ತಮಿಳುನಾಡಿನ ಇಬ್ಬರು ಎಂದು ಗುರುತಿಸಲಾಗಿದೆ. ಮೃತ ಯೋಧರನ್ನು ಚಾಲಕ ಎಂ.ಟಿ.ಸಂತೋಷ್ ಎಂ.ನಾಗರ ಹಾಗೂ ಎಂ.ಟಿ.ಕಮಲೇಶ್ ಆರ್, ಎಂ.ಟಿ.ಸಾಗರ್ ಬನ್ನೆ ಹಾಗೂ ಗನ್ನರ್ ಯೋಗೀಶ್ ಕುಮಾರ್ ಜೆ ಎಂದು ಗುರುತಿಸಲಾಗಿದೆ. ಈ ಘಟನೆ ಕುರಿತು ಸಂಬಂಧಿಕರಿಗೆ ಯೋಧರ ಸಾವಿನ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದೂ ಸೇನಾಧಿಕಾರಿಗಳು ತಿಳಿಸಿದ್ದಾರೆ. ಮೃತ ದೇಹಗಳನ್ನು ವೈದ್ಯಕೀಯ ಪರೀಕ್ಷೆಗಾಗಿ ಭಠಿಂಡಾ ಸಿವಿಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ದಾಳಿಯ ಪ್ರಮುಖ ಅಂಶಗಳು:

1. ನಿನ್ನೆಯಷ್ಟೇ ಸೇನೆಯಿಂದ ರೈಫಲ್‌ಗಳು ನಾಪತ್ತೆಯಾಗಿರುವ ಬಗ್ಗೆ ದೂರು ಬಂದಿರುವುದಾಗಿ ಬಂಠಿಡಾ ಕ್ಯಾಂಪ್​​​ನ ಎಸ್‌ಎಚ್‌ಒ ಗುರುದೀಪ್ ಸಿಂಗ್ ಹೇಳಿದ್ದಾರೆ. ಈ ನಡುವೆ ಇಂದು ಗುಂಡಿನ ದಾಳಿ ಪ್ರಕರಣ ದಾಖಲಾಗಿದೆ.

2. ಇಂದು ನಡೆದ ಘಟನೆ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಶೇಷವಾಗಿ ಗಮನ ಹರಿಸಿದ್ದು, ಪ್ರಕರಣದ ಸಂಪೂರ್ಣ ತನಿಖೆಗೆ ಆದೇಶಿಸಿದ್ದಾರೆ.

3. ಈ ನಡುವೆ ಇಂದು ಸೇನಾ ನೆಲೆಯಲ್ಲಿ ನಡೆದ ಎಲ್ಲಾ ಅಂಶಗಳನ್ನು ತನಿಖೆ ಮಾಡುತ್ತೇವೆ ಎಂದು ಸೇನೆ ಕೂಡಾ ಹೇಳಿದೆ. ಇದರಲ್ಲಿ ಐಎನ್‌ಎಸ್‌ಎಎಸ್ ರೈಫಲ್ ಮತ್ತು 2 ದಿನಗಳ ಹಿಂದೆ ಘಟಕದ ಸಿಬ್ಬಂದಿ ಕೊಠಡಿಯಿಂದ ನಾಪತ್ತೆಯಾಗಿದ್ದ ಬುಲೆಟ್‌ಗಳ ಬಗ್ಗೆಯೂ ಪರಿಶೀಲನೆ ನಡೆಯುತ್ತಿದ್ದು, ಈ ರೈಫಲ್ ಅನ್ನು ಗುಂಡಿನ ದಾಳಿಗೆ ಬಳಸಿರಬಹುದು ಎಂದು ಪೊಲೀಸರು ಮತ್ತು ಸೇನೆ ಶಂಕಿಸಿದೆ.

4. ಗುಂಡಿನ ದಾಳಿಯ ನಂತರ, ಸೇನಾ ಠಾಣೆಯನ್ನು ಸೀಲ್ ಮಾಡಲಾಗಿದೆ ಮತ್ತು ಜನರ ಸಂಚಾರವನ್ನು ನಿಷೇಧಿಸಲಾಗಿದೆ. ಕಂಟೋನ್ಮೆಂಟ್ ಶಾಲೆಗಳನ್ನು ಮುಚ್ಚಲಾಗಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಠಿಂಡಾ ಪೊಲೀಸ್ ಠಾಣೆ ಕ್ಯಾಂಟ್, ಸ್ಟೇಷನ್ ಹೌಸ್ ಅಧಿಕಾರಿ ಗುರುದೀಪ್ ಸಿಂಗ್, ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಗುಂಡು ಹಾರಿಸಿದವರು ಯಾರು ಎಂಬ ಪ್ರಶ್ನೆ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ಹೇಳಿದ್ದಾರೆ. ಎಫ್‌ಐಆರ್ ದಾಖಲಿಸಲಾಗಿದೆಯೇ ಎಂದು ಕೇಳಿದಾಗ, ನಾವು ಎಫ್‌ಐಆರ್ ದಾಖಲಿಸುತ್ತೇವೆ ಎಂದು ಎಸ್‌ಎಚ್‌ಒ ಮಾಹಿತಿ ನೀಡಿದ್ದಾರೆ.

ಇದು ಭಯೋತ್ಪಾದಕ ದಾಳಿ ಅಲ್ಲ ಎಂದ ಪೊಲೀಸ್​ ಅಧೀಕ್ಷಕ: ಬಠಿಂಡಾದ ಹಿರಿಯ ಪೊಲೀಸ್ ಅಧೀಕ್ಷಕ ಗುಲ್ನೀತ್ ಸಿಂಗ್ ಖುರಾನಾ ಸುದ್ದಿಗಾರರೊಂದಿಗೆ ಮಾತನಾಡಿ, "ಇದು ಭಯೋತ್ಪಾದಕರು ನಡೆಸಿರುವ ಕೃತ್ಯ ಅಲ್ಲ ಇದು ಆಂತರಿಕ ಸಮಸ್ಯೆಯಾಗಿದೆ. ಈ ಬಗ್ಗೆ ನಮ್ಮ ತನಿಖಾ ತಂಡಗಳು ಎಲ್ಲಾ ವಿಧಿವಿಜ್ಞಾನ ಸಾಧನಗಳೊಂದಿಗೆ ಮಿಲಿಟರಿ ಕ್ಯಾಂಪ್​​​ ತಲುಪಿದ್ದು, ಎಲ್ಲ ತನಿಖೆಗಳನ್ನು ನಡೆಸುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.

ಓದಿ: ಬೆಂಗಳೂರು ಟೂ ಹಳೇ ಮೈಸೂರು: ಗುರು-ಶಿಷ್ಯರ ನಡುವೆ ಸೋಮಣ್ಣ ಫೈಟ್!!

Last Updated : Apr 13, 2023, 12:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.