ETV Bharat / bharat

ಆಲಿ ಕಡಲ್ ಶ್ರೀನಗರದಲ್ಲಿ ಬೆಂಕಿ: ಐದು ಮನೆಗಳು ಸುಟ್ಟು ಭಸ್ಮ, ಗ್ಯಾಸ್​ ಸ್ಫೋಟವಾಗಿ ಮಹಿಳೆ ಸಾವು - ಬೆಂಕಿಗೆ ಐದು ಮನೆಗಳು ಸುಟ್ಟು ಭಸ್ಮವಾಗಿ ಓರ್ವ ಮಹಿಳೆ ಸಾವು

ಬೆಂಕಿ ವ್ಯಾಪಿಸಿದ ನಂತರ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಓರ್ವ ಮಹಿಳೆ ಸಾವಿಗೀಡಾಗಿದ್ದಾಳೆ.

ಆಲಿ ಕಡಲ್ ಶ್ರೀನಗರದಲ್ಲಿ ಗ್ಯಾಸ್​ ಸ್ಫೋಟ
ಆಲಿ ಕಡಲ್ ಶ್ರೀನಗರದಲ್ಲಿ ಗ್ಯಾಸ್​ ಸ್ಫೋಟ
author img

By

Published : Jan 21, 2022, 1:07 AM IST

ಶ್ರೀನಗರ: ಇಲ್ಲಿನ ಹಳೇ ನಗರದ ಜನನಿಬಿಡ ಪ್ರದೇಶವಾದ ಆಲಿ ಕಡಲ್‌ನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡು ಐದು ವಸತಿ ಮನೆಗಳು ಭಸ್ಮವಾಗಿವೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಬೆಂಕಿ ವ್ಯಾಪಿಸಿದ ನಂತರ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ. ಹಾಗೆ ಓರ್ವ ಮಹಿಳೆ ಸಾವಿಗೀಡಾಗಿದ್ದಾಳೆ.

ಇನ್ನು ವಸತಿಯಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಬೆಂಕಿಯನ್ನು ನಂದಿಸಲು ಮುಂದಾಗಿದ್ದಾರೆ. ಈ ಸಮಯದಲ್ಲಿಯೇ ಮನೆಯೊಳಗಿನ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಪರಿಣಾಮ ಬೆಂಕಿ ಮತ್ತೇ ವ್ಯಾಪಕವಾಗಿದೆ.

ಆಲಿ ಕಡಲ್ ಶ್ರೀನಗರದಲ್ಲಿ ಗ್ಯಾಸ್​ ಸ್ಫೋಟ

ಏಳು ಅಗ್ನಿಶಾಮಕ ವಾಹನಗಳ ಸಹಾಯದಿಂದ ಒಂದು ಗಂಟೆಯೊಳಗೆ ಬೆಂಕಿಯನ್ನು ಹತೋಟಿಗೆ ತರಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಬೆಂಕಿಯ ಕೆನ್ನಾಲಿಗೆಗೆ ನಾಲ್ಕು ಮನೆಗಳು ಆದಾಗಲೇ ಸಂಪೂರ್ಣ ಭಸ್ಮವಾಗಿದ್ದು, ಒಂದು ಮನೆ ಭಾಗಶಃ ಹಾನಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.