ಹಜಾರಿಬಾಗ್ (ಜಾರ್ಖಂಡ್): ಎರಡು ಟ್ರಕ್‌ಗಳ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ರಸ್ತೆಯಲ್ಲಿ ಟ್ರಕ್ಗಳು ಹೊತ್ತಿ ಉರಿದಿವೆ.
ಹಜಾರಿಬಾಗ್ನ ಬಾರ್ಹಿ ಚೌಕ್‌ನಲ್ಲಿ ಈ ಘಟನೆ ನಡೆದಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಗಂಟೆಗಟ್ಟಲೆ ಸಮಯ ತೆಗೆದುಕೊಂಡಿದ್ದಾರೆ.
ಎರಡೂ ಟ್ರಕ್‌ಗಳಲ್ಲಿ ಕಲ್ಲಿದ್ದಲು ತುಂಬಿದ್ದರಿಂದ ಬೆಂಕಿ ಧಗಧಗಿಸಿದೆ . ಸದ್ಯ ಈ ಸಂಬಂಧ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿರುವ ವರದಿಯಾಗಿಲ್ಲ.