ETV Bharat / bharat

ಅಯೋಧ್ಯೆ ಶ್ರೀರಾಮ ಮಂದಿರದ ಬುನಾದಿ ಕೆಲಸ ಪ್ರಾರಂಭ - ಅಯೋಧ್ಯೆ ಶ್ರೀರಾಮ ಮಂದಿರ

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸೋಮವಾರ ರಾಮ ಜನ್ಮಭೂಮಿಯಲ್ಲಿ ಧಾರ್ಮಿಕ ವಿಧಿವಿಧಾನಗಳ ಬಳಿಕ ದೇವಾಲಯದ ಬುನಾದಿ ಕೆಲಸವನ್ನು ಪ್ರಾರಂಭಿಸಿದೆ. ದೇವಾಲಯದ ಅಡಿಪಾಯವನ್ನು ಸಮುದ್ರ ಮಟ್ಟದಿಂದ 107 ಅಡಿ ಎತ್ತರದಲ್ಲಿ ಕಲ್ಲುಗಳ ಪದರಗಳಿಂದ ನಿರ್ಮಿಸಲಾಗುತ್ತಿದೆ.

ಅಯೋಧ್ಯೆ ಶ್ರೀರಾಮ ಮಂದಿರದ ಬುನಾದಿ ಕೆಲಸ ಪ್ರಾರಂಭ

author img

By

Published : Apr 12, 2021, 10:40 AM IST

ಅಯೋಧ್ಯೆ (ಉತ್ತರ ಪ್ರದೇಶ): ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸೋಮವಾರ ರಾಮ ಜನ್ಮಭೂಮಿಯಲ್ಲಿ ಧಾರ್ಮಿಕ ವಿಧಿವಿಧಾನಗಳ ಬಳಿಕ ದೇವಾಲಯದ ಬುನಾದಿ ಕೆಲಸ ಶುರು ಮಾಡಿದೆ.

ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಇತರ ಸದಸ್ಯರು ಧಾರ್ಮಿಕ ಆಚರಣೆಗಳನ್ನು ಪೂರೈಸಿದರು. ನಂತರ ಅಡಿಪಾಯ ಕೆಲಸ ಪ್ರಾರಂಭಿಸಲಾಯಿತು.

ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್

ಈ ವರ್ಷದ ಆಗಸ್ಟ್ ವೇಳೆಗೆ ಸುಮಾರು 40 ಅಡಿ ಆಳದ ಅಡಿಪಾಯವನ್ನು ಭರ್ತಿ ಮಾಡಲಾಗುವುದು. ಈ ಬಗ್ಗೆ ಹೈದರಾಬಾದ್​ ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್​ಸ್ಟಿಟ್ಯೂಟ್​ ತಾಂತ್ರಿಕ ಸಮೀಕ್ಷೆ ನಡೆಸಿದೆ. ದೇಗುಲದ ಅಡಿಪಾಯದ ಸ್ಥಳದಲ್ಲಿ 12 ಅಡಿ ಅವಶೇಷಗಳಿರುವ ಬಗ್ಗೆ ನಮಗೆ ತಿಳಿಸಿದ್ದಾರೆ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದರು.

ಇದನ್ನೂ ಓದಿ: ಸುಪ್ರೀಂಕೋರ್ಟ್​ನ ಶೇ.50ರಷ್ಟು ಸಿಬ್ಬಂದಿಗೆ ಕೊರೊನಾ ಸೋಂಕು

ದೇವಾಲಯದ ಅಡಿಪಾಯವನ್ನು ಬಲಪಡಿಸಲು ಈ ಭಗ್ನಾವಶೇಷಗಳನ್ನು ತೆಗೆದುಹಾಕಲು ಎನ್‌ಜಿಆರ್‌ಐ ತಜ್ಞರು ಸಲಹೆ ನೀಡಿದ್ದರು ಎಂದು ರಾಯ್ ಹೇಳಿದರು.

ದೇವಾಲಯದ ಅಡಿಪಾಯವನ್ನು ಸಮುದ್ರ ಮಟ್ಟದಿಂದ 107 ಅಡಿ ಎತ್ತರದಲ್ಲಿ ಕಲ್ಲುಗಳ ಪದರಗಳಿಂದ ಮಾಡಲಾಗುವುದು. ಅಡಿಪಾಯವನ್ನು ತುಂಬಲು ಬೆಣಚುಕಲ್ಲು, ಒರಟಾದ ಮರಳು, ಹಾರೋ ಬೂದಿ (Fly Ash)​ ಮತ್ತು ಕಲ್ನಾರು (Asbestos) ಬಳಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.