ಪಾಟ್ನಾ (ಬಿಹಾರ): ಕೇಂದ್ರದ ಆಡಳಿತರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ಸೇರಿದಂತೆ ಎಲ್ಲ ಪ್ರತಿಪಕ್ಷಗಳು ಒಗ್ಗಟ್ಟಾಗಬೇಕು. ಪ್ರತಿಪಕ್ಷಗಳು ಒಂದುಗೂಡಿದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 100 ಸ್ಥಾನಗಳನ್ನೂ ಗೆಲ್ಲಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಆದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳಬೇಕೆಂದು ಜೆಡಿಯು ಹಿರಿಯ ನಾಯಕ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದರು.
ಬಿಹಾರದ ಪಾಟ್ನಾದಲ್ಲಿ ಹಮ್ಮಿಕೊಂಡಿದ್ದ ಸಿಪಿಐ-ಎಂ ಪಕ್ಷದ 11ನೇ ಮಹಾ ಅಧಿವೇಶನದಲ್ಲಿ ಮಾತನಾಡಿದ ಸಿಎಂ ನಿತೀಶ್, 'ನಾವು ಬಯಸುತ್ತಿದ್ದೇವೆ. ನೀವು (ಕಾಂಗ್ರೆಸ್) ಶೀಘ್ರ ತೀರ್ಮಾನ ತೆಗೆದುಕೊಳ್ಳಬೇಕು. ನಿಮ್ಮ ಪಕ್ಷದ ನೇತೃತ್ವವನ್ನು ನಾವು ಅನುಮೋದನೆ ಮಾಡುತ್ತೇವೆ. ಆದಷ್ಟು ಬೇಗ ನಿರ್ಧಾರ ತೆಗೆದುಕೊಂಡು ನಮ್ಮೆಲ್ಲರೆನ್ನೂ ಕರೆದು ಮಾತುಕತೆ ನಡೆಸಿ. ಎಲ್ಲೆಲ್ಲಿ, ಯಾವ ಪಕ್ಷದ ಜೊತೆಗೆ ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕೆಂದು ತೀರ್ಮಾನಿಸಿ' ಎಂದು ವೇದಿಕೆ ಮೇಲಿದ್ದ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರಿಗೆ ಒತ್ತಾಯಿಸಿದರು.
-
#WATCH | I want you people (Congress) to take a quick decision. If they take my suggestion & fight together, they (BJP) will go below 100 seats, but if they don't take my suggestion, you know what will happen: Bihar CM Nitish Kumar at 11th General Convention of CPI-M, Patna pic.twitter.com/StbAEOjgWE
— ANI (@ANI) February 18, 2023 " class="align-text-top noRightClick twitterSection" data="
">#WATCH | I want you people (Congress) to take a quick decision. If they take my suggestion & fight together, they (BJP) will go below 100 seats, but if they don't take my suggestion, you know what will happen: Bihar CM Nitish Kumar at 11th General Convention of CPI-M, Patna pic.twitter.com/StbAEOjgWE
— ANI (@ANI) February 18, 2023#WATCH | I want you people (Congress) to take a quick decision. If they take my suggestion & fight together, they (BJP) will go below 100 seats, but if they don't take my suggestion, you know what will happen: Bihar CM Nitish Kumar at 11th General Convention of CPI-M, Patna pic.twitter.com/StbAEOjgWE
— ANI (@ANI) February 18, 2023
ಮುಂದುವರೆದು, 'ನಾವು ಮಾತುಕತೆ ನಡೆಸಿದ ದಿನವೇ ಎಲ್ಲರೂ ಒಟ್ಟುಗೂಡಬೇಕು. ನೀವು (ಕಾಂಗ್ರೆಸ್) ಬೇಗ ಆಲೋಚನೆ ಮಾಡಿ ತಿಳಿಸಿ. ನೀವು ನನ್ನ ಸಲಹೆಯನ್ನು ಅನುಸರಿಸಿ, ಎಲ್ಲ ಪತಿಪಕ್ಷಗಳು ಒಟ್ಟಾಗಿ ಹೋರಾಡಿದರೆ, ಅವರ (ಬಿಜೆಪಿ) ಸ್ಥಾನಗಳು 100ಕ್ಕಿಂತ ಕಡಿಮೆಗೆ ಕುಸಿಯುತ್ತವೆ ಎಂದು ನಿತೀಶ್ ಹೇಳಿದರು. ಇದೇ ವೇಳೆ 'ನೀವು ನನ್ನ ಸಲಹೆ ಅನುಸರಿಸದೇ ಹೋದರೆ, ಏನಾಗುತ್ತದೆ ಎಂಬುವುದೂ ನಿಮಗೆ ತಿಳಿದಿದೆ. ನಾವು ಕೂಡ ಕೆಲ ಪಕ್ಷಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ದೇಶದಲ್ಲಿ ಹಿತದಲ್ಲಿ ಆಲೋಚನೆ ಮಾಡಿ. ಇದರಿಂದ ನಿಮಗೂ (ಕಾಂಗ್ರೆಸ್) ಅನುಕೂಲವಾಗಲಿದೆ ಹಾಗೂ ದೇಶಕ್ಕೂ ಅನುಕೂಲವಾಗಲಿದೆ' ಎಂದು ಬಿಹಾರ ಸಿಎಂ ತಿಳಿಸಿದರು.
ಇಷ್ಟೇ ಅಲ್ಲ, 'ರಾಷ್ಟ್ರ ಒಗ್ಗಟ್ಟಾಗಿರಬೇಕು. ದೇಶವನ್ನು ತಪ್ಪು ಮಾಡುವವರಿಂದ ಮುಕ್ತಗೊಳಿಸಬೇಕೆಂಬ ಒಂದೇ ಒಂದು ಆಸೆ ಇದೆ. ಬಿಹಾರದಲ್ಲಿ ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿವೆ. ನಾವು ಎನ್‌ಡಿಎಯಿಂದ ದೂರ ಬಂದಾಗ ಎಲ್ಲ ಪ್ರತಿಪಕ್ಷಗಳ ನಾಯಕರು ನಮ್ಮ ನಿರ್ಧಾರವನ್ನು ಸ್ವಾಗತಿಸಿದರು. 2024ರಲ್ಲಿ ಎಲ್ಲರೂ ಒಗ್ಗಟ್ಟಾಗಿ ಹೋರಾಡುತ್ತೇವೆ. ಅಂದಾಗ ಮಾತ್ರ ಬಿಜೆಪಿ ಸರ್ವನಾಶವಾಗಲು ಸಾಧ್ಯವಾಗುತ್ತದೆ' ಎಂದು ಒತ್ತಿ ಹೇಳಿದರು.
'ಇವತ್ತು ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಬದಲಾಯಿಸುವ ಪ್ರಯತ್ನ ನಡೆಯುತ್ತಿದೆ. ಎಲ್ಲ ಧರ್ಮ, ಜಾತಿಯ ಜನರು ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ. ನನಗೆ ನಾಯಕತ್ವದ ವೈಯಕ್ತಿಕ ಆಸೆ ಇಲ್ಲ. ನಾವು ಬದಲಾವಣೆಯನ್ನು ಮಾತ್ರ ಬಯಸುತ್ತೇವೆ. ನಾವು ಬದುಕಿರುವವರೆಗೂ ನಿಮ್ಮೆಲ್ಲರಿಗೂ ಸಂಪೂರ್ಣ ಸಹಕಾರ ನೀಡುತ್ತೇವೆ. ನಾವು ಈ ಮೊದಲು ಒಟ್ಟಿಗೆ ಇದ್ದೆವು ಎಂಬುದನ್ನೂ ಮರೆಯಬೇಡಿ' ಎಂದು ಸಿಎಂ ನಿತೀಶ್ ನನೆಪಿಸಿದರು.
ಪಾಟ್ನಾದ ಎಸ್‌ಕೆ ಸ್ಮಾರಕ ಸಭಾಂಗಣದಲ್ಲಿ ನಡೆದ ಸಿಪಿಐ-ಎಂ ಪಕ್ಷದ ಈ ಅಧಿವೇಶನದಲ್ಲಿ ಎಡಪಕ್ಷಗಳ ನಾಯಕರು ಪಾಲ್ಗೊಂಡಿದ್ದರು. ಜೊತೆಗೆ ಕಾಂಗ್ರೆಸ್ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್, ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಲಾಲನ್ ಸಿಂಗ್ ಸೇರಿದಂತೆ ಅನೇಕ ರಾಜಕಾರಣಿಗಳು ಉಪಸ್ಥಿತರಿದ್ದರು.
ಇದನ್ನು ಓದಿ: ಶಾಸಕರ ಹತ್ಯೆ ಸಂಚು: ಮಹಿಳೆ ಮನೆಯಲ್ಲಿ 95 ಜಿಲೆಟಿನ್ ಕಡ್ಡಿಗಳು, 10 ಡಿಟೋನೇಟರ್ಗಳು ಪತ್ತೆ