ETV Bharat / bharat

2028ರ ವೇಳೆಗೆ ಭಾರತದಲ್ಲಿ ಹಿಂದೂ-ಮುಸ್ಲಿಂ ಜನಸಂಖ್ಯೆ ಸಮ.. ದಿಗ್ವಿಜಯ್​ ಸಿಂಗ್

author img

By

Published : Sep 23, 2021, 3:37 PM IST

ದೇಶದಲ್ಲಿ ಸದ್ಯ ಮುಸ್ಲಿಂರ ಸಂತಾನೋತ್ಪತ್ತಿ ದರ ಶೇ. 2.7ರಷ್ಟಿದ್ದು, ಹಿಂದೂಗಳ ಪ್ರಮಾಣ ಶೇ. 2.3ರಷ್ಟಿದೆ. ಈ ಲೆಕ್ಕಾಚಾರದನ್ವಯ 2028ರ ವೇಳೆಗೆ ಹಿಂದೂ-ಮುಸ್ಲಿಂರ ಜನನ ಪ್ರಮಾಣ ಸರಿಸಮಾನವಾಗಿರುತ್ತದೆ ಎಂದು ದಿಗ್ವಿಜಯ್ ಸಿಂಗ್​ ಅಭಿಪ್ರಾಯಪಟ್ಟಿದ್ದಾರೆ.

Digvijaya Singh
Digvijaya Singh

ಭೋಪಾಲ್​​(ಮಧ್ಯಪ್ರದೇಶ): ಸದಾ ಒಂದಿಲ್ಲೊಂದು ವಿವಾದಿತ ಹೇಳಿಕೆ ನೀಡಿ ಸುದ್ದಿಯಲ್ಲಿರುವ ಕಾಂಗ್ರೆಸ್​​ನ ಹಿರಿಯ ಮುಖಂಡ ದಿಗ್ವಿಜಯ್​ ಸಿಂಗ್​ ಸದ್ಯ ಮತ್ತೊಂದು ಹೇಳಿಕೆ ನೀಡಿದ್ದು, ಅದು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

2028ರ ವೇಳೆಗೆ ಭಾರತದಲ್ಲಿ ಹಿಂದೂ-ಮುಸ್ಲಿಂ ಜನಸಂಖ್ಯೆ ಸಮವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 1951ರ ವೇಳೆ ಭಾರತದಲ್ಲಿ ಮುಸ್ಲಿಂರ ಜನನ ಪ್ರಮಾಣವು ಹಿಂದುಗಳಿಗಿಂತಲೂ ಕಡಿಮೆ ಇತ್ತು. ಆದರೆ ಸದ್ಯ ಮುಸ್ಲಿಂರ ಜನನ ಪ್ರಮಾಣ ಶೇ 2.7ರಷ್ಟಿದ್ದು, ಹಿಂದೂಗಳ ಜನನ ಪ್ರಮಾಣ ಶೇ. 2.3ರಷ್ಟಿದೆ. ಈ ಲೆಕ್ಕಾಚಾರ ನೋಡಿದರೆ 2028ರ ವೇಳೆಗೆ ಹಿಂದೂ-ಮುಸ್ಲಿಂರ ಜನನ ಪ್ರಮಾಣ ಸರಿಸಮಾನವಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿರಿ: ಪೆಟ್ರೋಲ್‌, ಡೀಸೆಲ್ ಬೆಲೆ ಏರಿಕೆಗೆ ರಾಜ್ಯ ಸರ್ಕಾರಗಳೇ ಕಾರಣ: ಕೇಂದ್ರ ಪೆಟ್ರೋಲಿಯಂ ಸಚಿವ

ಮಧ್ಯಪ್ರದೇಶದ ಸೆಹೋರೆಯಲ್ಲಿ ನಡೆದ ಕಿಸಾನ್ ಕ್ರಾಂತಿ ಪಾದಯಾತ್ರೆಯಲ್ಲಿ ಭಾಗಿಯಾಗಿ ಮಾತನಾಡಿದ ದಿಗ್ವಿಜಯ ಸಿಂಗ್ ಅವರು​, ಪ್ರಧಾನಿ ಮೋದಿ ಹಾಗೂ ಬಿಜೆಪಿ ಮತ ಪಡೆದುಕೊಳ್ಳಲು ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದು, ವೋಟ್​ ಬ್ಯಾಂಕ್​ಗೋಸ್ಕರ ಅವರು ರಾಜಕೀಯ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ಇದೇ ವೇಳೆ ಹೈದರಾಬಾದ್​ ಸಂಸದ ಅಸಾದುದ್ದೀನ್​ ಓವೈಸಿ ವಿರುದ್ಧ ಕೂಡ ಕಿಡಿಕಾರಿದರು. ಓವೈಸಿ ಸಾರ್ವಜನಿಕರ ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.