ಮಥುರಾ (ಉತ್ತರ ಪ್ರದೇಶ): ಏಪ್ರಿಲ್ 11 ರಂದು ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದ ಅಪರಿಚಿತ ಮಹಿಳೆಯ ಅಂತ್ಯಕ್ರಿಯೆಯನ್ನು ಮಹಿಳಾ ಕಾನ್ಸ್ಟೇಬಲ್ ನೆರವೇರಿಸಿದ್ದಾರೆ.
ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಸಿಕ್ಕಿತ್ತು. ಆಕೆಗೆ ಗೌರವಯುತ ವಿದಾಯ ಹೇಳಲು ನಾನೇ ಅಂತ್ಯಕ್ರಿಯೆ ನಡೆಸಿರುವೆ. ಪ್ರತಿಯೊಬ್ಬ ಮೃತ ವ್ಯಕ್ತಿಯು ಗೌರವಕ್ಕೆ ಅರ್ಹ ಎಂದು ಉತ್ತರ ಪ್ರದೇಶದ ಮಥುರಾದ ಕೋಸಿ ಕಲಾನ್ ಪೊಲೀಸ್ ಠಾಣೆಯ ಶಾಲಿನಿ ವರ್ಮಾ (25) ಹೇಳುತ್ತಾರೆ.
ಇದನ್ನೂ ಓದಿ: ಭೋಪಾಲ್ನ ಆಸ್ಪತ್ರೆಯಿಂದ 800 ರೆಮ್ಡೆಸಿವಿರ್ ಚುಚ್ಚುಮದ್ದು ಕಳವು
ಶವಕ್ಕೆ ಬೆಂಕಿ ಇಡಲು ಸ್ಮಶಾನದ ಸಿಬ್ಬಂದಿ ನನ್ನನ್ನು ತಡೆದರು. ಆದರೂ ವಾದ ಮಾಡಿ ಕಾರ್ಯ ಪೂರ್ಣಗೊಳಿಸಿರುವೆ. ಮಹಿಳೆಯರು ಭಯದಿಂದಾಗಿ ಸ್ಮಶಾನಕ್ಕೆ ಭೇಟಿ ನೀಡುವುದಿಲ್ಲ ಎಂದು ನಾನು ಪುಸ್ತಕಗಳಲ್ಲಿ ಓದಿದ್ದೇನೆ. ಜನರ ಮನಸ್ಥಿತಿಯನ್ನು ಬದಲಾಯಿಸುವ ಅವಶ್ಯಕತೆಯಿದೆ. ನನಗೆ ಈ ಹಿಂದೆ ಕೊರೊನಾ ಸೋಂಕು ಕೂಡ ತಗುಲಿತ್ತು. ಆದರೆ ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಮತ್ತೊಬ್ಬರ ಅಂತ್ಯಕ್ರಿಯೆಯನ್ನು ಧೈರ್ಯದಿಂದ ಮಾಡಬೇಕಿದೆ ಎನ್ನುತ್ತಾರೆ ಶಾಲಿನಿ.
ಒಬ್ಬ ರೈತನ ಮಗಳಾಗಿರುವ ಶಾಲಿನಿ ವರ್ಮಾ 2016ರಲ್ಲಿ ಕಾನ್ಸ್ಟೇಬಲ್ ಆಗಿ ನೇಮಕಗೊಂಡಿದ್ದು, 2017ರಿಂದ ಕೋಸಿ ಕಲಾನ್ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.