ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ದೆಹಲಿ ಪಾದಯಾತ್ರೆಯನ್ನು ರೈತ ಸಂಘಟನೆಗಳು ಮುಂದೂಡಲು ನಿರ್ಧಾರ ತೆಗೆದುಕೊಂಡಿವೆ.
ಜನವರಿ 26ರಂದು ಗಣರಾಜ್ಯ ದಿನ ಆಚರಣೆ ವೇಳೆ ರೈತ ಪ್ರತಿಭಟನೆಯಲ್ಲಿ ಹಿಂಸಾಚಾರ ನಡೆದ ಕಾರಣದಿಂದ ಫೆಬ್ರವರಿ 1ರಂದು ನಡೆಬೇಕಿದ್ದ ಪಾದಯಾತ್ರೆಯನ್ನು ಮುಂದೂಡಲಾಗಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು)ನ ನಾಯಕ ಬಲ್ಬೀರ್ ಎಸ್. ರಾಜೇವಾಲ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಭಾಗಿ: ಕೊಟ್ಟ ಮಾತಿಗೆ ತಪ್ಪಿ ಹಿಂಸಾಚಾರದಲ್ಲಿ ರೈತ ಮುಖಂಡರೂ ಭಾಗಿ: ದೆಹಲಿ ಪೊಲೀಸ್ ಆಯುಕ್ತ
ರೈತರ ಪ್ರತಿಭಟನೆ ಬದಲಾಗಿ ಹುತಾತ್ಮರ ದಿನದಂದು ದೇಶಾದ್ಯಂತ ಸಾರ್ವಜನಿಕರ ರ್ಯಾಲಿಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದಿರುವ ಬಲ್ಬೀರ್ ಎಸ್. ರಾಜೇವಾಲ್ ಫೆಬ್ರವರಿ 1ರಂದು ನಡೆಯಬೇಕಿದ್ದ ಪಾದಯಾತ್ರೆಯನ್ನು ಮುಂದೂಡಲಾಗಿದೆ ಎಂದಿದ್ದಾರೆ.
ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟವನ್ನು ಕೊನೆಗೊಳಿಸಲು ಕೇಂದ್ರ ಸರ್ಕಾರ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿರುವ ಬಲ್ಬೀರ್, ಟ್ರ್ಯಾಕ್ಟರ್ ಪರೇಡ್ 99.9ರಷ್ಟು ಶಾಂತಿಯುತವಾಗಿ ನಡೆದಿದೆ. ಕೆಲವೇ ಕೆಲವು ಕಡೆಗಳಲ್ಲಿ ಮಾತ್ರ ಹಿಂಸಾಚಾರ ನಡೆದಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.