ಮೊರಾದಾಬಾದ್(ಉತ್ತರಪ್ರದೇಶ): ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥ ಸಂಚಲನದ ವೇಳೆ ಹೂವಿನ ಮಳೆಗರೆದ ಮುಸ್ಲಿಂ ವೈದ್ಯರ ವಿರುದ್ಧ ಮೊರಾದಾಬಾದ್‌ನಲ್ಲಿ ಫತ್ವಾ ಹೊರಡಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಫತ್ವಾ ಹೊರಡಿಸಿದ ಹಫೀಜ್ ಇಮ್ರಾನ್ ವಾರ್ಸಿ ವಿರುದ್ಧ ವೈದ್ಯರು ಎಫ್‌ಐಆರ್ ದಾಖಲಿಸಿದ್ದಾರೆ. ವೈದ್ಯರ ದೂರಿನ ಮೆರೆಗೆ ಆರೋಪಿಯನ್ನು ಬಂಧನ ಕೂಡಾ ಮಾಡಲಾಗಿದೆ.
ಮೊರಾದಾಬಾದ್‌ನ ಮನಾಥರ್ ಪೊಲೀಸ್ ಠಾಣೆ ವ್ಯಾಪ್ತಿಯ ಮಹಮೂದ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಏಪ್ರಿಲ್ 2 ರಂದು ಡಾ.ನಿಜಾಮ್ ಭಾರತಿ ಅವರು ಆರ್‌ಎಸ್‌ಎಸ್‌ನ ಪಥ ಸಂಚಲನದ ಮೇಲೆ ಪುಷ್ಪವೃಷ್ಟಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವೈದರ ವಿರುದ್ಧ ಇಮ್ರಾನ್ ವಾರ್ಸಿ ಪತ್ವಾ ಹೊರಡಿಸಿದ್ದರು. ಪುಷ್ಪವೃಷ್ಟಿ ಮಾಡಿದ ವೈದ್ಯರನ್ನು ಕೊಂದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು.
ಈ ಬಗ್ಗೆ ವೈದ್ಯರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿ ಹಫೀಜ್ ಇಮ್ರಾನ್ ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ವೈದ್ಯರು ಪುಷ್ಟವೃಷ್ಟಿ ಮಾಡಿದ್ದನ್ನು ವಿರೋಧಿಸಿ, ಫತ್ವಾ ಹೊರಡಿಸಿದ್ದಲ್ಲದೇ, ಗ್ರಾಮದಲ್ಲಿ ಕರಪತ್ರಗಳನ್ನು ಹಂಚಲಾಗಿತ್ತು ಎಂದು ವೈದ್ಯ ನಿಜಾಮ್ ದೂರಿನಲ್ಲಿ ವಿವರಿಸಿದ್ದರು.
ಸಂತ್ರಸ್ತರಿಗೆ ರಕ್ಷಣೆಗೆ ಆಗ್ರಹ: ಡಾ.ನಿಜಾಮ್ ಭಾರ್ತಿ ವಿರುದ್ಧ ಫತ್ವಾ ಹೊರಡಿಸಿ, ಕರಪತ್ರ ಹಂಚಿದ್ದರಿಂದ ಇಡೀ ಕುಟುಂಬ ಭಯಭೀತಗೊಂಡಿದೆ. ಡಾ.ನಿಜಾಮ ಭಾರತಿ ಅವರು ಮತ್ತು ಅವರ ಕುಟುಂಬ ಜೀವ ಬೆದರಿಕೆಯಲ್ಲಿದೆ. ಆರ್ಎಸ್ಎಸ್ ಪಥ ಸಂಚಲನದ ವೇಳೆ ಪುಷ್ಪವೃಷ್ಟಿ ಮಾಡಿರುವುದು ತಮ್ಮ ವ್ಯಕ್ತಿ ಸ್ವಾತಂತ್ರ್ಯ ಮತ್ತು ಬಯಕೆ ಎಂದಿರುವ ಡಾ.ನಿಜಾಮ್ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ತಮಗೆ ರಕ್ಷಣೆ ಕೊಡುವಂತೆ ಒತ್ತಾಯಿಸಿದ್ದಾರೆ.
ಎಸ್‌ಎಸ್‌ಪಿ ಹೇಳಿದ್ದೇನು?: ವೈದ್ಯ ನಿಜಾಮ್ ಭಾರ್ತಿ ಅವರು ದೂರು ನೀಡಿದ ತಕ್ಷಣವೇ ನಮ್ಮ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಎಸ್‌ಎಸ್‌ಪಿ ಬಬ್ಲು ಕುಮಾರ್ ಹೇಳಿದ್ದು, ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ:ಚಂದ್ರು ಕೊಲೆ ಪ್ರಕರಣ.. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರತಿಕ್ರಿಯೆ ಹೀಗಿದೆ..