ETV Bharat / bharat

ಆರು ವರ್ಷದ ಮಗನ ಕತ್ತು ಹಿಸುಕಿ ಕೊಲೆಗೈದು, ತಂದೆ ಆತ್ಮಹತ್ಯೆ

ಆರು ವರ್ಷದ ಗಂಡ ಮಗುವಿನ ಕೊಲೆ ಮಾಡಿರುವ ಪಾಪಿ ತಂದೆ ತಂದನಂತರ ಆತನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಜಲಗಾಂವ್​ನಲ್ಲಿ ನಡೆದಿದೆ.

author img

By

Published : Jan 7, 2022, 8:02 PM IST

Father suicide after murder his son
Father suicide after murder his son

ಜಲಗಾಂವ್​​(ಮಹಾರಾಷ್ಟ್ರ): ಆರು ವರ್ಷದ ಮಗನ ಕತ್ತು ಹಿಸುಕಿ ಕೊಲೆ ಮಾಡಿರುವ ತಂದೆಯೋರ್ವ ತಂದನಂತರ ಆತನೂ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಮಹಾರಾಷ್ಟ್ರದ ಜಲಗಾಂವ್​​​ನಲ್ಲಿ ನಡೆದಿದೆ. ಘಟನೆ ಹಿಂದಿನ ಕಾರಣ ಇಲ್ಲಿಯವರೆಗೂ ಸ್ಪಷ್ಟವಾಗಿಲ್ಲ.

ಜಲಗಾಂವ್​ನ ಫೈಜ್​ಪುರ ನಗರದ ಬಸ್​ ನಿಲ್ದಾಣದ ಹಿಂದುಗಡೆ ಪತ್ನಿ ಹಾಗೂ ಮಗುವಿನೊಂದಿಗೆ ವಾಸವಾಗಿದ್ದ ನೀಲೇಶ್​ ಘನಶ್ಯಾಮ್​​​ ತನ್ನ ಆರು ವರ್ಷದ ಮಗನ ಕತ್ತು ಹಿಸುಕಿ ಕೊಲೆ ಮಾಡಿದ್ದು, ತದನಂತರ ಆತನು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಪತ್ನಿ ದಿನಸಿ ಸಾಮಗ್ರಿ ತರಲು ಹೊರಗಡೆ ಹೋಗಿದ್ದಳು. ಈ ವೇಳೆ ಮನೆಯಲ್ಲಿ ಈ ಕೃತ್ಯವೆಸಗಿದ್ದಾನೆ. ಮಾರುಕಟ್ಟೆಯಿಂದ ಮನೆಗೆ ಬಂದಿರುವ ಪತ್ನಿ ಬಾಗಿಲು ತೆರೆಯಲು ಮುಂದಾಗಿದ್ದಾಳೆ. ಆದರೆ ಅದು ಒಳಗಡೆಯಿಂದ ಲಾಕ್​​ ಆಗಿರುವುದು ಗೊತ್ತಾಗಿದೆ. ಅಕ್ಕಪಕ್ಕದವರ ಸಹಾಯದಿಂದ ಬಾಗಿಲು ತೆರೆಯಲಾಗಿದ್ದು, ಈ ವೇಳೆ ಇಬ್ಬರ ಮೃತದೇಹ ಪತ್ತೆಯಾಗಿವೆ. ಇದನ್ನ ನೋಡಿರುವ ಹೆಂಡತಿ ಶಾಕ್​​ಗೊಳಗಾಗಿದ್ದಾಳೆ.

ಇದನ್ನೂ ಓದಿ: 16 ತಿಂಗಳ ಹಸುಳೆ ಮೇಲೆ ಲೈಂಗಿಕ ಕಿರುಕುಳ, ಕೊಲೆ: ತಂದೆ-ತಾಯಿ ಬಂಧನ

ಇಬ್ಬರ ಮೃತದೇಹಗಳನ್ನು ಈಗಾಗಲೇ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಫೈಜ್​ಪುರ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.