ಕರೂರು(ತಮಿಳುನಾಡು): ಯುಟ್ಯೂಬ್ನಲ್ಲಿ ಆಲ್ಕೋಹಾಲ್ ತಯಾರಿಸುವ ವಿಡಿಯೋ ನೋಡಿಕೊಂಡು ಎಣ್ಣೆ ತಯಾರಿಸುತ್ತಿದ್ದ ತಂದೆ-ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಕರೂರು ಜಿಲ್ಲೆಯ ಕುಪ್ಪುಚಿಪಾಲಯಂನ ಗುಣಶೇಖರನ್ ಮತ್ತು ಆತನ ಮಗ ಜಗದೀಶ್ನನ್ನು ಪೊಲೀಸರು ಮದ್ಯ ಸಮೇತ ಬಂಧಿಸಿದ್ದಾರೆ.
ಮನೆಯಲ್ಲಿ ತಯಾರಿಸಿರುವ ಮದ್ಯವನ್ನ ಹೊರಗಡೆ ಮಾರಾಟ ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 8 ಮದ್ಯ ತುಂಬಿದ ಬಾಟಲಿಗಳು ಹಾಗೂ ಮದ್ಯ ತಯಾರಿಕೆಗೆ ಬಳಸಲಾಗುತ್ತಿದ್ದ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ.
ಲಾಕ್ಡೌನ್ ಘೋಷಣೆಯಾದ ಬಳಿಕ ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ಪ್ರಕರಣ ಹೆಚ್ಚಾಗಿದ್ದು, ಪೊಲೀಸರು ಜಿಲ್ಲೆಯಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ.