ಪೂರ್ವ ಗೋದಾವರಿ: ಬೇರೆಯವರ ಜೊತೆಗೆ ಇದ್ದ ತನ್ನ ಪತ್ನಿಯ ಅಶ್ಲೀಲ ವಿಡಿಯೋ ನೋಡಿದ ವ್ಯಕ್ತಿಯೊಬ್ಬ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಲ್ಲದೇ ತನ್ನ ಮಕ್ಕಳಿಗೂ ವಿಷ ಕುಡಿಸಿರುವ ಘಟನೆ ಜಿಲ್ಲೆಯ ವಂಗಲಪುಡಿ ಗ್ರಾಮದಲ್ಲಿ ನಡೆದಿದೆ. ಈ ಘಟನೆಯ ಸಂಪೂರ್ಣ ವಿವರವನ್ನು ಸೀತಾನಗರಂ ಎಸ್‌ಐ ಸುಭಾಶೇಖರ್ ಬಹಿರಂಗಪಡಿಸಿದ್ದಾರೆ.
ನಡೆದಿದ್ದೇನು?: ವಂಗಲಪುಡಿ ಮೂಲದ 30 ವರ್ಷದ ವಿವಾಹಿತ ಮಹಿಳೆ ಉದ್ಯೋಗಕ್ಕಾಗಿ ಕುವೈತ್‌ನಲ್ಲಿದ್ದಾರೆ. ಗಂಡನ ಊರಾದ ಗೋಕಾವರಂನಲ್ಲಿ ಇಬ್ಬರು ಗಂಡು ಮಕ್ಕಳು (13, 10 ವರ್ಷ) ಮತ್ತು ಒಬ್ಬ ಮಗಳು (12) ಅಜ್ಜಿಯ ಮನೆಯಲ್ಲಿ ವಾಸವಾಗಿದ್ದಾರೆ. ತಂದೆ ಆಗಾಗ ಅಲ್ಲಿಗೆ ಹೋಗಿ ಮಕ್ಕಳನ್ನು ನೋಡಿಕೊಳ್ಳುತ್ತಾರೆ.
ಓದಿ: ವಿರಾಟ್ ನಾಯಕತ್ವಕ್ಕೆ ಬೆದರಿಕೆ ಇತ್ತಾ..? ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಹೇಳಿದ್ದಿಷ್ಟು..
ಶನಿವಾರ ಸಂಜೆ ವಂಗಲಪುಡಿಗೆ ಬಂದ ತಂದೆ ಮಕ್ಕಳ ಬಳಿ ಬಂದು ಹೊರಗೆ ಕರೆದುಕೊಂಡು ಹೋಗಿದ್ದಾರೆ. ತೋಟಕ್ಕೆ ಕರೆದೊಯ್ದು ಮೊದಲು ಇಲಿಗೆ ಹಾಕುವ ವಿಷ ಸೇವಿಸಿದ್ದಾರೆ. ಬಳಿಕ ತನ್ನ ಮೂವರು ಮಕ್ಕಳಿಗೆ ವಿಷ ನೀಡಲು ಯತ್ನಿಸಿದ್ದಾನೆ.
ಹತ್ತು ವರ್ಷದ ಮಗ ವಿಷ ಸೇವಿಸಿದ್ದಾನೆ. ಆದರೆ ಇನ್ನಿಬ್ಬರು ಮಕ್ಕಳು ವಿಷ ಸೇವಿಸಲಿಲ್ಲ. ಅಷ್ಟರಲ್ಲಿ ತಂದೆ ಪ್ರಜ್ಞಾಹೀನ ಸ್ಥಿತಿಗೆ ತಲುಪುತ್ತಿದ್ದಂತೆ ಮಕ್ಕಳಿಬ್ಬರು ಸ್ಥಳದಿಂದ ಹೋಗಿದ್ದಾರೆ. ಇವರನ್ನು ಗಮನಿಸಿದ ಕೆಲ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಅಸ್ವಸ್ಥಗೊಂಡಿದ್ದವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವರಿಗೆಲ್ಲ ಹೆಚ್ಚಿನ ಚಿಕಿತ್ಸೆಗಾಗಿ ರಾಜಾಜಿನಗರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಇಬ್ಬರು ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ: ನನಗೆ ಹತ್ತಿರದ ಸಂಬಂಧಿಯಿಂದ ಸಾಮಾಜಿಕ ಮಾಧ್ಯಮದಲ್ಲಿ ನನ್ನ ಪತ್ನಿ ಬೇರೆಯವರೊಂದಿಗೆ ಇರುವ ಅಶ್ಲೀಲ ವಿಡಿಯೋವೊಂದು ಸಿಕ್ಕಿತು. ಇದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದೇನೆ ಎಂದು ಸಂತ್ರಸ್ತ ಹೇಳಿದ್ದಾರೆ. ಆದರೆ, ಆತ ಹೇಳುತ್ತಿದ್ದ ವಿಡಿಯೋಗಳನ್ನು ಪರಿಶೀಲಿಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಟೋ ಓಡಿಸುತ್ತಿದ್ದ ಈತನ ವಿರುದ್ಧ ಗೋಕಾವರಂನಲ್ಲಿ ಕಳ್ಳತನ ಮಾಡಿರುವ ಕೇಸ್ಗಳಿವೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್‌ಐ ಸುಭಾಶೇಖರ್ ಹೇಳಿದ್ದಾರೆ.
ವಿಷ ಸೇವಿಸುವಂತೆ ಒತ್ತಾಯ: ‘ನಮ್ಮ ತಂದೆ ನಮ್ಮ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅಜ್ಜಿಯ ಮನೆಯಲ್ಲಿಯೇ ಇದ್ದು ಓದುತ್ತೇವೆ. ಅವರು ಆಗಾಗ ಬಂದು ಹೋಗುತ್ತಾರೆ. ಹಬ್ಬದ ಹಿನ್ನೆಲೆ ತಂದೆ ನಮ್ಮ ಬಳಿಗೆ ಬಂದಿದ್ದರು. ಹೀಗಾಗಿ ನಾವು ಅವರ ಜೊತೆ ಹೊರಗೆ ಹೋಗಿದ್ದೆವು..’ ಎಂದು ಇನ್ನಿಬ್ಬರು ಮಕ್ಕಳು ಹೇಳಿದ್ದಾರೆ.
ಕಹಿ ಔಷಧಿಯನ್ನು ತನ್ನೊಂದಿಗೆ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಆದರೆ ನಾವಿಬ್ಬರೂ ವಿಷ ಕುಡಿಯಲು ನಿರಾಕರಿಸಿದೆವು ಎಂದು ಮಕ್ಕಳಿಬ್ಬರು ಹೇಳಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸ್ ತನಿಖೆಯಿಂದ ಸತ್ಯಾಸತ್ಯತೆ ಬಹಿರಂಗವಾಗಬೇಕಿದೆ.