ದೌಸಾ(ರಾಜಸ್ಥಾನ): ನಗರದಲ್ಲಿ ತಂದನೇ ಮಗಳನ್ನು ಅಪಹರಿಸಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಮಾಹಿತಿಗಳ ಪ್ರಕಾರ
ರಾಮಕುಂಡ್ ನಿವಾಸಿ ಪಿಂಕಿ ದಲಿತ ಯುವಕ ರೋಷನ್ ಮಹಾವರ್ ಜೊತೆ ಲವ್ನಲ್ಲಿದ್ದಳು. ಇವರ ಪ್ರೀತಿಗೆ ಪಿಂಕಿ ಪೋಷಕರು ನಿರಾಕರಿಸಿದ್ದಾರೆ. ಬಳಿಕ ಪಿಂಕಿ ವಿರೋಧದ ನಡುವೆಯೂ ಆಕೆಯ ಪೋಷಕರು ಬಲವಂತವಾಗಿ ಫೆಬ್ರವರಿ 16ರಂದು ಮದುವೆ ಮಾಡಿಸಿದ್ದಾರೆ.
ಆದ್ರೆ ಪಿಂಕಿ ಫೆಬ್ರುವರಿ 21ರಂದು ತನ್ನ ಲವರ್ ರೋಷನ್ನೊಂದಿಗೆ ಮನೆಬಿಟ್ಟು ಓಡಿ ಹೋಗಿದ್ದಾಳೆ. ಬಳಿಕ ರಾಜಸ್ಥಾನದ ಹೈಕೋರ್ಟ್ನಲ್ಲಿ ನಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಅದರಂತೆ ನ್ಯಾಯಾಲಯ ಇವರ ಪ್ರಕರಣವನ್ನು ಆಲಿಸಿ ಇವರಿಗೆ ರಕ್ಷಣೆ ನೀಡುವಂತೆ ದೌಸಾ ಮತ್ತು ಜಯ್ಪುರಿನ ಅಶೋಕ್ ನಗರ ಪೊಲೀಸ್ ಠಾಣೆಗಳಿಗೆ ಆದೇಶಿಸಿತ್ತು.
ಕೆಲ ದಿನಗಳ ಹಿಂದೆ ಅಂದ್ರೆ ಮಾರ್ಚ್ 1ರಂದು ಪಿಂಕಿ ತನ್ನ ಲವರ್ ರೋಷನ್ ಜೊತೆ ದೌಸಾಗೆ ಬಂದು ಲಿವ್ ಇನ್ ರಿಲೇಶನ್ನಲ್ಲಿ ಕಾಲ ಕಳೆಯುತ್ತಿದ್ದರು. ಇದನ್ನರಿತ ಪಿಂಕಿ ತಂದೆ ನಿನ್ನೆ ಆಕೆಯ ಮನೆಗೆ ನುಗ್ಗಿ ಮಗಳನ್ನು ಅಪಹರಿಸಿದ್ದಾರೆ. ಈ ಸುದ್ದಿ ಪೊಲೀಸರಿಗೆ ತಿಳಿದು ನಗರದಲ್ಲಲ್ಲೇ ಶೋಧ ಕಾರ್ಯ ನಡೆಸಿದ್ರೂ ಪ್ರಯೋಜನವಾಗಿರಲಿಲ್ಲ.
ರಾಮಕುಂಡ್ನಲ್ಲಿ ಮಗಳನ್ನು ಕೊಲೆ ಮಾಡಿದ ಬಳಿಕ ಆಕೆಯ ತಂದೆ ನೇರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಆಕೆಯ ಮೃತ ದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.