ಬಾರ್ಮರ್ (ರಾಜಸ್ಥಾನ): ನಾಲ್ವರು ಹೆಣ್ಣುಮಕ್ಕಳಿಗೆ ಕೀಟನಾಶಕ ಕುಡಿಸಿದ ಬಳಿಕ ಅವರನ್ನು ಟ್ಯಾಂಕ್ಗೆ ತಳ್ಳಿದ್ದು, ಬಳಿಕ ತಂದೆಯೂ ಕೀಟನಾಶಕ ಸೇವಿಸಿರುವ ಘಟನೆ ನಗರದಲ್ಲಿ ನಡೆದಿದೆ. ಘಟನೆಯಲ್ಲಿ ನಾಲ್ವರು ಹೆಣ್ಣುಮಕ್ಕಳು ಮೃತಪಟ್ಟಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿರುವ ತಂದೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು, ನಾಲ್ವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಇಸ್ರಾ ರಾಮ್ ಜಾಟ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಳಿಕ ಮಾತನಾಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನರಪತ್ ಸಿಂಗ್, 3 ರಿಂದ 9 ವರ್ಷದೊಳಗಿನ ನಾಲ್ವರು ಹೆಣ್ಣುಮಕ್ಕಳಿಗೆ ವಿಷ ಕುಡಿಸಿ ಅವರ ತಂದೆಯೇ ಹತ್ಯೆ ಮಾಡಿದ್ದಾರೆ. ಬಳಿಕ ತಾವು ವಿಷ ಸೇವಿಸಿ ಟ್ಯಾಂಕ್ಗೆ ಬಿದ್ದಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಮಳೆ ನೀರಿನಲ್ಲಿ ಮುಳುಗಿದ ಕಾರು: ವೈದ್ಯೆ ಸಾವು
ಇತ್ತೀಚೆಗಷ್ಟೇ ಆತನ ಪತ್ನಿಯು ಕೋವಿಡ್ಗೆ ಬಲಿಯಾಗಿದ್ದು, ಆತ ತನ್ನ ಸಂಬಂಧದಲ್ಲಿಯೇ ಮತ್ತೊಂದು ಮದುವೆಯಾಗಲು ನಿರ್ಧರಿಸಿದ್ದನಂತೆ. ಅದಕ್ಕೆ ಮನೆಯವರು ಯಾರೂ ಒಪ್ಪದಿದ್ದಾಗ, ಆತ ಈ ನಿರ್ಧಾರ ಕೈಗೊಂಡಿದ್ದಾನೆ ಎಂದು ತಿಳಿದುಬಂದಿದೆ.