ETV Bharat / bharat

ಲಾಕ್​ಡೌನ್​ನಲ್ಲಿ ಕೆಲಸ ಕಳೆದುಕೊಂಡಿದ್ದ ಅಪ್ಪ.. ಮಗಳ ಶಾಲಾ ಶುಲ್ಕ ಕಟ್ಟಲಾಗದೇ ವಿಷ ಸೇವಿಸಿ ಆತ್ಮಹತ್ಯೆ - ಮಧ್ಯಪ್ರದೇಶದ ಇಂದೋರ್​ನಲ್ಲಿ ಬಾಲಕಿಯ ತಂದೆ ಆತ್ಮಹತ್ಯೆ

ಲಾಕ್​ಡೌನ್​ ಸಂದರ್ಭದಲ್ಲಿ ಕೆಲಸ ಕಳೆದುಕೊಂಡಿದ್ದ ತಂದೆಯೊಬ್ಬ ಮಗಳ ಶಾಲಾ ಶುಲ್ಕವನ್ನು ಕಟ್ಟಲು ಸಾಧ್ಯವಾಗದ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

Father commits sucide after he could not pay kids school fee in MP
ಮಗಳ ಶಾಲಾ ಶುಲ್ಕ ಕಟ್ಟಲಾಗದೇ ತಂದೆ ಆತ್ಮಹತ್ಯೆ
author img

By

Published : Jun 1, 2022, 8:21 PM IST

ಇಂದೋರ್ (ಮಧ್ಯಪ್ರದೇಶ): ಕೋವಿಡ್​ ನಿಯಂತ್ರಣಕ್ಕಾಗಿ ದೇಶದಲ್ಲಿ ಈ ಹಿಂದೆ ಹೇರಲಾಗಿದ್ದ ಲಾಕ್​ಡೌನ್​ ಎಷ್ಟೋ ಜನರ ಕೆಲಸ ಕಿತ್ತುಕೊಂಡು ಅವರ ಬದುಕಿಗೆ ಕೊಳ್ಳಿ ಇಟ್ಟಿದೆ. ಇದಕ್ಕೆ ಸಾಕ್ಷಿ ಎಂಬಂಥ ಘಟನೆಯೊಂದು ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಮಗಳ ಶಾಲಾ ಶುಲ್ಕವನ್ನು ಕಟ್ಟಲು ಸಾಧ್ಯವಾಗದ ಕಾರಣಕ್ಕೆ ಮನನೊಂದು ತಂದೆಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಇಂದೋರ್​ನಲ್ಲಿ ನಡೆದಿದೆ. ಇಲ್ಲಿನ ಹತೋಡ್ ಪ್ರದೇಶದ ನಿವಾಸಿ ಅಮಿತ್​ ಎಂಬಾತನೇ ಸಾವಿಗೆ ಶರಣಾದ ತಂದೆ ಎಂದು ಗುರುತಿಸಲಾಗಿದೆ.

ಇಬ್ಬರು ಮಕ್ಕಳನ್ನು ಹೊಂದಿದ್ದ ಅಮಿತ್​ ಲಾಕ್​ಡೌನ್​ ಸಂದರ್ಭದಲ್ಲಿ ಕೆಲಸ ಕಳೆದುಕೊಂಡಿದ್ದರು. ಓರ್ವ ಬಾಲಕಿ ಮನೆ ಸಮೀಪದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಳು. ಆದರೆ, ಮತ್ತೆ ಕೆಲಸ ಸಿಗದ ಕಾರಣ ಮಗಳ ಶಾಲಾ ಶುಲ್ಕ ಕಟ್ಟಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಶಾಲಾ ಆಡಳಿತ ಮಂಡಳಿಯವರು ಶುಲ್ಕ ಪಾವತಿಸುವಂತೆ ನಿರಂತರವಾಗಿ ಪೀಡಿಸುತ್ತಿದ್ದರು. ಅಲ್ಲದೇ, ಮಗಳು ಮೂರನೇ ತರಗತಿ ಪೂರೈಸಿದ್ದರೂ, ಎರಡನೇ ತರಗತಿಯ ಫಲಿತಾಂಶವನ್ನು ಮಾತ್ರ ನೀಡಿದ್ದರು.

ಇದರಿಂದ ಮನನೊಂದಿದ್ದ ತಂದೆ ಅಮಿತ್​ ಬುಧವಾರ ಬೆಳಗ್ಗೆ ಮನೆಯಲ್ಲೇ ವಿಷ ಸೇವಿಸಿದ್ದಾರೆ. ನಂತರ ಮನೆಯ ಮೇಲಿಂದ ಕೆಳಗಿಳಿದು ಬರುವಾಗ ಹೊಸ್ತಿಲ ಮೇಲೆಯೇ ಬಿದ್ದಿದ್ದಾರೆ. ಆಗ ತಕ್ಷಣ ಈತನನ್ನು ಸಹೋದರ ಸಂದೀಪ್ ಮತ್ತು ತಾಯಿ ಸೇರಿಕೊಂಡು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಅಮಿತ್​ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಇತ್ತ, ಅಮಿತ್​ನ ಪತ್ನಿ 3 ತಿಂಗಳಿಂದ ತವರು ಮನೆಯಲ್ಲಿ ನೆಲೆಸಿದ್ದಾಳೆ. ಮಗಳ ಶಾಲಾ ಶುಲ್ಕ ಕಟ್ಟಲು ಸಹಾಯಕ್ಕಾಗಿ ಕೆಲ ಜನಪ್ರತಿನಿಧಿಗಳಿಗೆ ಅಮಿತ್​ ಮನವಿಯನ್ನೂ ಮಾಡಿದ್ದನಂತೆ. ಆದರೆ, ಯಾರೂ ಸಹಾಯ ಮಾಡದಿದ್ದಾಗ ಹತಾಶನಾಗಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಎಚ್ಚರ: ಹಾರರ್​ ವಿಡಿಯೋದಿಂದ ಪ್ರಭಾವಿತನಾಗಿ ಬಾಲಕ ಏನಾದ ನೋಡಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.