ETV Bharat / bharat

ಕಲಿಕೆಯ ವಯಸ್ಸಲ್ಲ.. ಆದರೂ ಮಗನ ಜೊತೆ 10ನೇ ತರಗತಿ ಪರೀಕ್ಷೆ ಬರೆದು ಪಾಸ್​ ಆದ ತಂದೆ - ETV Bharath Karnataka

ಶಾಲೆಯೊಂದರ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ವೀರಭದ್ರ ಸಿಂಗ್ ಎಂಬುವವರು ಮಗನ ಜೊತೆ 10ನೇ ತರಗತಿ ಪರೀಕ್ಷೆ ಬರೆದು ಶೇ 45ರಷ್ಟು ಅಂಕ ಪಡೆದು ಪಾಸ್​ ಆಗಿದ್ದಾರೆ.

Father and son together cleared the Gujarat Board 10th exam
ಮಗನ ಜೊತೆ 10ನೇ ತರಗತಿ ಪರೀಕ್ಷೆ ಬರೆದು ಪಾಸ್​ ಆದ ತಂದೆ; 12ನೇ ಕ್ಲಾಸ್​ ಪಾಸ್​ ಆಗುವ ಇಂಗಿತ
author img

By

Published : May 27, 2023, 10:23 PM IST

Updated : May 27, 2023, 10:40 PM IST

ಅಹಮದಾಬಾದ್ (ಗುಜರಾತ್​): ಕಲಿಕೆಗೆ ವಯಸ್ಸಿಲ್ಲ ಎಂಬ ಮಾತಿದೆ. ಇದಕ್ಕೆ ಉದಾಹಣೆ ಎಂಬಂತೆ, ಶಿಕ್ಷಣದ ಮಹತ್ವವನ್ನು ಅರಿತ ತಂದೆ ಮಗನ ಜೊತೆ ಪಾಠ ಕಲಿತು ಹತ್ತನೆ ತರಗತಿ ಪರೀಕ್ಷೆ ಕಟ್ಟಿ ಪಾಸಾದಗಿದ್ದಾರೆ. ಹೌದು ಮಗ ಹತ್ತನೇ ತರಗತಿ ಓದುವಾಗ ಅವನ ಜೊತೆಯಲ್ಲಿ ಪಾಠ ಹೇಳಿಸಿಕೊಂಡು ತಂದೆಯೂ ಪರೀಕ್ಷೆ ಎದುರಿಸಿದ್ದು 45 ಶೇಕಡಾ ಅಂಕಗಳಿಂದ ತೇರ್ಗಡೆ ಹೊಂದಿದ್ದಾರೆ.

ಹತ್ತನೇ ತರಗತಿ ಪರೀಕ್ಷೆ ಜೀವನದಲ್ಲಿ ಬಹಳ ಮುಖ್ಯವಾಗುತ್ತದೆ. ಈಗ ಸರ್ಕಾರ ನಿಯಮದ ಪ್ರಕಾರ ವಾಹನ ಖರೀದಿ ಮತ್ತು ಲೈಸೆನ್ಸ್​ ನೀಡಲೂ ಸಹ ಹತ್ತನೇ ತರಗತಿ ಪಾಸ್​ ಆಗಬೇಕು ಎಂಬ ನಿಯಮ ಇದೆ. ಹತ್ತನೇ ತರಗತಿ ಪಾಸ್ ಎಂಬುದು ಶಿಕ್ಷಣದ ಒಂದು ಮಹತ್ವದ ಘಟ್ಟ ಇದನ್ನು ತಡವಾಗಿ ಅರಿತರೂ ಮಗನ ಜೊತೆ ಶಿಕ್ಷಣ ಪಡೆದು ತಂದೆ ಮಾದರಿಯಾಗಿದ್ದಾರೆ.

ಅಹಮದಾಬಾದ್‌ನ ವಡಾಜ್‌ನಲ್ಲಿ ವಾಸಿಸುತ್ತಿರುವ ತಂದೆ - ಮಗ ಇಬ್ಬರೂ ಒಟ್ಟಿಗೆ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ತಂದೆ ಹಗಲು ಕೆಲಸಕ್ಕೆ ಹೋಗಿ ರಾತ್ರಿ ಬರುತ್ತಿದ್ದಾಗ ಮಗನ ಜೊತೆ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. 1998-99ರ ನಡುವೆ ತಂದೆ ಶಾಲೆ ಬಿಟ್ಟಿದ್ದರೆ, ಈಗ ಮತ್ತೊಮ್ಮೆ ತಂದೆ ಮಗನ ಜೊತೆಯಲ್ಲಿ ಪುಸ್ತಕ ಹಿಡಿದು ಓದಲು ಆರಂಭಿಸಿದ್ದು, ಚರ್ಚೆಗೆ ಗ್ರಾಸವಾಗಿತ್ತು.

Father and son together cleared the Gujarat Board 10th exam
ಶೇ 79 ಅಂಕ ಪಡೆದ ಮಗ ಯುವರಾಜ್​ ಸಿಂಗ್​

ಈ ತಂದೆಯ ಹೆಸರು ವೀರಭದ್ರ ಸಿಂಗ್ ಎಂದು. ಇವರು ಶಾಲೆಯೊಂದರಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಮಗ ಹತ್ತನೆ ತರಗತಿ ಓದುವಾಗ ತಾನೂ ಪರೀಕ್ಷೆ ತೆಗೆದುಕೊಳ್ಳುವುದಾಗಿ ನಿರ್ಧಾರ ಮಾಡಿದರು. ಮಗ ಯುವರಾಜ್ ಸಿಂಗ್​ ಜೊತೆ ಕೆಲಸ ಮುಗಿಸಿ ಬಂದು ಪುಸ್ತಕ ಹಿಡಿದು ಓದಲು ಪ್ರಾರಂಭಿಸಿದರು. ಹತ್ತನೇ ತರಗತಿಯಲ್ಲಿ ಮಗನ ಜೊತೆ ತಂದೆಯೂ ಪಾಸ್​ ಆಗಿದ್ದಾರೆ.

"1998-99ರ ಅವಧಿಯಲ್ಲಿ ನಾನು ಮೊದಲ ಬಾರಿಗೆ ಶಾಲೆಯಿಂದ ಹೊರಗುಳಿದೆ. ಇದೀಗ ನನ್ನ ಮಗ ಯುವರಾಜ್ ಸಿಂಗ್ 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದ. ಈಗ ನಾನು ಪರೀಕ್ಷೆ ತೆಗೆದುಕೊಳ್ಳಬಹುದು ಎಂದು ತಿಳಿಯಿತು. ನಾನು ಮಗನ ಜೊತೆ ಹೆಚ್ಚು ಕಲಿತಿದ್ದೇನೆ. ಡಿಪಿ ಪ್ರೌಢಶಾಲೆಯಲ್ಲಿ ಖಾಸಗಿಯಾಗಿ ಪರೀಕ್ಷೆ ತೆಗೆದುಕೊಂಡು ಈ ವರ್ಷ 10ನೇ ತರಗತಿ ಪರೀಕ್ಷೆಯಲ್ಲಿ ಶೇ 45ರಷ್ಟು ಅಂಕಗಳೊಂದಿಗೆ ಪಾಸ್​ ಆಗಿದ್ದೇನೆ" ಎಂದು ವೀರಭದ್ರ ಸಿಂಗ್ ಸಂತೋಷವನ್ನು ಹಂಚಿಕೊಂಡಿದ್ದಾರೆ.

"ನನ್ನ ಮಗ ಯುವರಾಜ್ ಸಿಂಗ್ ಮತ್ತು ನಾನು 10ನೇ ತರಗತಿ ಪರೀಕ್ಷೆಗೆ ಒಟ್ಟಿಗೆ ತಯಾರಿ ನಡೆಸುತ್ತಿದ್ದೆವು. ಹಗಲಿನಲ್ಲಿ ನಾನು ಶಾಲೆಯಲ್ಲಿ ಕೆಲಸ ಮಾಡುತ್ತಿದ್ದೆ ಮತ್ತು ರಾತ್ರಿಯಲ್ಲಿ ನಾನು ನನ್ನ ಮಗನ ಜೊತೆ ಪರೀಕ್ಷೆಗಾಗಿ ಓದಿದೆ. ನನಗೆ ಯಾವುದೇ ವಿಷಯದಲ್ಲಿ ಕಷ್ಟ ಬಂದರೂ ಶಾಲೆಯ ಶಿಕ್ಷಕರಿಂದ ಮಾರ್ಗದರ್ಶನ ಪಡೆಯುತ್ತಿದ್ದೆ. ಮಗನೂ ಸಹಾಯ ಮಾಡಿದ್ದಾನೆ. ಅದಕ್ಕಾಗಿ ನಾನು ಈ 10ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 45ರಷ್ಟು ಅಂಕ ಪಡೆದಿದ್ದೇನೆ. ನನ್ನ ಮಗ ಯುವರಾಜ್ ಸಿಂಗ್ ಶೇ 79 ಅಂಕ ಪಡೆದಿದ್ದಾನೆ" ಎಂದು ಮಗ ಪ್ರಥಮ ದರ್ಜೆಯಲ್ಲಿ ಪಾಸ್​ ಆಗಿರುವುದನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

"ತಂದೆ ಮತ್ತು ಮಗ ಇಬ್ಬರೂ 10 ನೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದೇವೆ. ನನ್ನ ಮಗ ಯುವರಾಜ್ ಸಿಂಗ್ ವಾಣಿಜ್ಯ ಶಾಸ್ತ್ರ ತೆಗೆದುಕೊಂಡು ಸಿಎ ಆಗುವ ಆಸೆ ವ್ಯಕ್ತಪಡಿಸಿದ್ದಾನೆ. ಸಾಧ್ಯವಾದರೆ, ಮುಂಬರುವ ಸಮಯದಲ್ಲಿ ನಾನು 12 ನೇ ತರಗತಿ ಪರೀಕ್ಷೆಯನ್ನು ಸಹ ಬರೆಯುತ್ತೇನೆ" ಎಂದು ವೀರಭದ್ರ ಸಿಂಗ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಸೈಬರ್ ವಂಚಕರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದ್ದರೆ ಏನು ಮಾಡಬೇಕು ಗೊತ್ತಾ? ಇಲ್ಲಿದೆ ಮಾಹಿತಿ

Last Updated : May 27, 2023, 10:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.