ಹೈದರಾಬಾದ್(ತೆಲಂಗಾಣ): ಇಬ್ಬರು ಆರೋಪಿಗಳಾದ ಶಿವಶಂಕರ್ ಮತ್ತು ಕೋಮಲ್ ಪ್ರಸಾದ್ ಎಂಬುವವರು ಪೊಲೀಸರಿಗೆ ಶಾಕ್ ನೀಡಿ ಈಗ ಜೈಲುಪಾಲಾಗಿದ್ದಾರೆ. ಬಂಜಾರ ಹಿಲ್ಸ್‌ನಲ್ಲಿ ವಾಸಿಸುತ್ತಿರುವ ತಂದೆ-ಮಗ ಸುನಿಲ್ ಅಹುಜಾ ಮತ್ತು ಆಶಿಶ್ ಅಹುಜಾ ಎಂಬುವರಿಂದ 16.10 ಕೋಟಿ ರೂ. ಪಡೆದಿದ್ದರು ಎಂಬ ಆರೋಪ ಕೇಳಿಬಂದಿದೆ.
ಸುನೀಲ್ ಮತ್ತು ಆಶಿಶ್ ಪ್ರತ್ಯೇಕ ದೂರು ದಾಖಲಿಸಿದ್ದನ್ನು ಗಮನಿಸಿದ ಪೊಲೀಸರು ಆರೋಪಿಗಳ ಹೆಸರನ್ನು ಕೇಳಿ ಆಶ್ಚರ್ಯಚಕಿತರಾಗಿದ್ದಾರೆ. ಅದರಂತೆ ಮೋಸ ಹೋದವರು ಕೂಡ ತಂದೆ ಮಗನೇ ಆಗಿದ್ದಾರೆ.
ಪೊಲೀಸರು ತನಿಖೆಯಲ್ಲಿ ಆರೋಪಿಗಳಾದ ಶಿವಶಂಕರ್ ಮತ್ತು ಕೋಮಲ್ ಪ್ರಸಾದ್ ಇಬ್ಬರೂ ತಂದೆ ಮತ್ತು ಮಗ ಎಂಬುದನ್ನು ಕಂಡುಕೊಂಡಿದ್ದಾರೆ. ಶಿವಶಂಕರ್ ಎರಡು ವರ್ಷಗಳ ಹಿಂದೆ ಸುನೀಲ್ಗೆ ಶೇಕ್ ಪೇಟೆಯಲ್ಲಿ ನಿವೇಶನವಿದೆ ಎಂದು ಹೇಳಿದ್ದರು. 2020 ರಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸಿ 8 ಸಾವಿರ ಚದರ್ ಅಡಿ ವಿಸ್ತೀರ್ಣ ನೀಡುವುದಾಗಿ ನಂಬಿಸಿ ರೂ.6.5 ಕೋಟಿ ತೆಗೆದುಕೊಂಡಿದ್ದರು ಎನ್ನಲಾಗ್ತಿದೆ.
ಶಿವಶಂಕರ್ ಅವರ ಪುತ್ರ ಕೋಮಲ್ ಪ್ರಸಾದ್ ಅವರು ಸುನೀಲ್ ಪುತ್ರ ಆಶಿಶ್ಗೆ ಮೋಸ ಮಾಡಿದ್ದಾರೆ. ಕೊಂಡಾಪುರದ ವಾಣಿಜ್ಯ ಸಂಕೀರ್ಣದ ಮೂರನೇ ಮಹಡಿಯನ್ನು ಕೊಡುವುದಾಗಿ ಹೇಳಿ 9.6 ಕೋಟಿ ರೂ.ಗಳನ್ನು ಪಡೆದುಕೊಂಡಿದ್ದಾರೆ. ಈ ಪ್ರಕರಣದ ಬಗ್ಗೆ ಕೇಳಿ ಪೊಲೀಸರಿಗೇ ಶಾಕ್ ಆಗಿದೆ.
ಇದನ್ನೂ ಓದಿ: ಕೋವಿಡ್ ಬಳಿಕ ಕೈಕೊಟ್ಟ ಸಿಬ್ಬಂದಿ: ಕಿವುಡ, ಮೂಗರಿಗೆ ಕೆಲಸ ಕೊಟ್ಟು ಗಮನ ಸೆಳೆದ ಕೆಫೆ ಮಾಲೀಕ!