ETV Bharat / bharat

ತಂದೆ ಮಗಳು ಸಜೀವ ದಹನ: ಮನಕಲಕುವ ದಾರುಣ ಘಟನೆ..! - ಶವಾಗಾರ ಕಟ್ಟಡದಲ್ಲಿ ಕುಟುಂಬ ವಾಸ

ಜಾರ್ಖಂಡ್​​ನಲ್ಲಿ ತಂದೆ, ಮಗಳು ಬೆಂಕಿಗೆ ಆಹುತಿಯಾದ ದಾರುಣ ಘಟನೆ - ಚೈಬಾಸಾದ ಜನರಲ್​ ಆಸ್ಪತ್ರೆ ಹಿಂಭಾಗದಲ್ಲಿನ ಶವಾಗಾರದಲ್ಲಿ ಇಬ್ಬರ ಸಾವು - ಸ್ಥಳಕ್ಕೆ ಕಿರಿಬೂರು ಠಾಣೆ ಪೊಲೀಸರು ಭೇಟಿ, ಪರಿಶೀಲನೆ

Father and daughter burnt alive at home
ತಂದೆ, ಮಗಳು ಬೆಂಕಿಗೆ ಆಹುತಿಯಾದ ದಾರುಣ ಘಟನೆ
author img

By

Published : Jan 31, 2023, 2:12 PM IST

ಚೈಬಾಸಾ​​ (ಜಾರ್ಖಂಡ್​​): ತಂದೆ ಮತ್ತು ಮಗಳು ಬೆಂಕಿಗೆ ಆಹುತಿಯಾದ ದಾರುಣ ಘಟನೆ ಸೋಮವಾರ ರಾತ್ರಿ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಕಿರಬೂರಿನಲ್ಲಿರುವ ಜನರಲ್ ಆಸ್ಪತ್ರೆಯ ಹಿಂಭಾಗದ ಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಜನರಲ್ ಆಸ್ಪತ್ರೆ ಹಿಂಭಾಗದಲ್ಲಿ ಮುಚ್ಚಿದ ಶವಾಗಾರದಲ್ಲಿ ಹಲವು ವರ್ಷಗಳಿಂದ ಅಕ್ರಮವಾಗಿ ವಾಸಿಸುತ್ತಿದ್ದ ಅಮೀರ್ ಹುಸೇನ್ ಅಲಿಯಾಸ್ ಕಾನಾ ಹಾಗೂ ಅವರ ಮಗಳು ಎಂದರೆ ನಾಲ್ಕು ವರ್ಷದ ಬಾಲಕಿ ಸಜೀವ ದಹನವಾಗಿದ್ದಾರೆ.

ಸೋಮವಾರ ರಾತ್ರಿ ಮನೆಗೆ ಬೆಂಕಿ ತಗುಲಿದ್ದರಿಂದ ಇಬ್ಬರೂ ಮೃತಪಟ್ಟಿದ್ದಾರೆ. ಮನೆಯೊಳಗೆ ಇಟ್ಟಿದ್ದ ಒಲೆಯಿಂದ ಬಟ್ಟೆಗೆ ಬೆಂಕಿ ತಗುಲಿದೆ ಎಂದು ತಿಳಿದು ಬಂದಿದೆ. ಅದರಲ್ಲಿ ಇಬ್ಬರೂ ಸಂಪೂರ್ಣ ಸುಟ್ಟು ಹೋಗಿದ್ದರಿಂದ ಮೃತಪಟ್ಟಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಬೆಂಕಿ ಹೇಗೆ ಕಾಣಿಸಿಕೊಂಡಿತು ಎಂಬುದರ ಬಗ್ಗೆ ನಿಖರವಾದ ಕಾರಣ ಮಾತ್ರ ಇದುವರೆಗೂ ತಿಳಿದು ಬಂದಿಲ್ಲ.

ಇದನ್ನು ಓದಿ: ಧಗಧಗನೆ ಹೊತ್ತಿ ಉರಿದು ಸುಟ್ಟು ಕರಕಲಾದ ಗೂಡ್ಸ್ ವಾಹನ

ಶವಾಗಾರ ಕಟ್ಟಡದಲ್ಲಿ ಕುಟುಂಬ ವಾಸ: ಮಾಹಿತಿಯೊಂದರ ಪ್ರಕಾರ, ಹಳೆಯ ಶವಾಗಾರ ಆಸ್ಪತ್ರೆಯ ಹಿಂಭಾಗದ ನಿರ್ಜನ ಪ್ರದೇಶದಲ್ಲಿದೆ. ಈ ಸ್ಥಳದಲ್ಲಿ ಶವಾಗಾರವನ್ನು ನಿರ್ಮಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಈ ಶವಾಗಾರ ಖಾಲಿ ಬಿದ್ದಿತ್ತು. ಖಾಲಿಯಿದ್ದ ಇದರಲ್ಲಿ ಅಮೀರ್ ಹುಸೇನ್ ತನ್ನ ಕುಟುಂಬದೊಂದಿಗೆ ಅಕ್ರಮವಾಗಿ ವಾಸಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

ಸೋಮವಾರ ರಾತ್ರಿ ಈ ಘಟನೆ ನಡೆದಾಗ ಇಲ್ಲಿ ಯಾರೂ ವಾಸವಿಲ್ಲದ ಕಾರಣ, ಬೆಂಕಿ ಹೊತ್ತಿಕೊಂಡಿರುವುದು ಯಾರಿಗೂ ಗೊತ್ತಾಗಿರಲಿಲ್ಲ. ಅಮೀರ್ ಹುಸೇನ್ ತನ್ನ 4 ವರ್ಷದ ಮಗಳೊಂದಿಗೆ ಮನೆಯೊಳಗಿಂದ ಬೀಗ ಹಾಕಿ ಮಲಗಿದ್ದರು ಎಂದು ಹೇಳಲಾಗುತ್ತಿದೆ. ಬೆಂಕಿ ಹೊತ್ತಿಕೊಂಡಿದ್ದು, ಆ ಬೆಂಕಿಯಲ್ಲಿ ಇಬ್ಬರೂ ಸುಟ್ಟು ಹೋಗಿದ್ದಾರೆ.

ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿರುವ ಸಾಧ್ಯತೆ: ಪ್ರಕರಣದ ಬಗ್ಗೆ ಮಾಹಿತಿ ಪಡೆದ ಕಿರಿಬೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎರಡೂ ಶವಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮನೆಯೊಳಗೆ ಹೇಗೆ ಬೆಂಕಿ ಹೊತ್ತಿಕೊಂಡಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ಘಟನೆಯ ಸ್ಥಳವನ್ನು ಗಮನಿಸಿದರೆ, ಒಲೆಯಿಂದ ಅಥವಾ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂಬ ಊಹಾಪೋಹಗಳು ಮಾತ್ರ ವ್ಯಕ್ತವಾಗುತ್ತಿವೆ. ಸದ್ಯ ಪೊಲೀಸರು ಸಂಪೂರ್ಣ ತನಿಖೆ ಕೈಗೊಂಡಿದ್ದಾರೆ.

ಮೃತ ಅಮೀರ್‌ ಹುಸೇನ್‌ಗೆ ನಾಲ್ವರು ಮಕ್ಕಳಿದ್ದಾರೆ. ಮೇಘತುಬೂರು ಟೌನ್‌ಶಿಪ್‌ನಿಂದ ಗುಜರಿ ವಸ್ತುಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದರು ಎಂದು ಜನರು ಹೇಳುತ್ತಾರೆ. ಈ ಮನೆಯಲ್ಲಿ ತನ್ನ ತಂಗಿಯೊಂದಿಗೆ ವಾಸವಾಗಿದ್ದರು. ಇತರ ಕುಟುಂಬದ ಸದಸ್ಯರು ಮಂಗಳಹಾಟ್ ಹೇಟಿಂಗ್‌ನಲ್ಲಿ ವಾಸಿಸುತ್ತಿದ್ದರು ಎಂಬುದಾಗಿ ತಿಳಿದು ಬಂದಿದೆ.

ಇದನ್ನು ಓದಿ: ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಟಾಟಾ ಗೂಡ್ಸ್ ವಾಹನ- ವಿಡಿಯೋ

ಇದನ್ನೂ ಓದಿ: ಸೋರಿಕೆಯಾದ ಗುಜರಾತ್​ ಪ್ರಶ್ನೆಪತ್ರಿಕೆ ​ಹೈದರಾಬಾದಲ್ಲಿ ಮುದ್ರಣ: 12 ದಿನ ಪೊಲೀಸ್​ ಕಸ್ಟಡಿಗೆ ಆರೋಪಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.